ವಿಷಯಕ್ಕೆ ಹೋಗು

ಪುಟ:Vyshakha.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

369

ಇಲ್ಲದಿರುವಾಗ, ನಮ್ಮ ಹುಡುಗ ಇದನ್ನ ಕಪ್ಪುಕಲ್ಲು ನೋಡಲಿಕ್ಕೆ ಅಂದವಾಗಿದೆ ಅಂತ ಆಟವಾಡಲು ತೆಕ್ಕೊಂಡು ಹೋಗಿ, ಅಲ್ಲೆಲ್ಲೊ ಕಳೆದುಬಿಟ್ಟು ಬಂದಿದ್ದಾನೆ... ನಾನು ಅವನು ಆಟ ಆಡ್ತಿದ್ದ ಜಾಗದಲ್ಲೆಲ್ಲ ತಲಾಷುಮಾಡಿದೆ. ಎಲ್ಲೂ ಸಿಗಲಿಲ್ಲ.... ಆವೊತ್ತಿನಿಂದ ನಿಮಗೆ ಮುಖ ತೋರಿಸಲೂ ನನಗೆ ಸಂಕೋಚವಾಗಿತ್ತು..... ಅಯ್ಯೊ, ಸತ್ಯವನ್ನ ಎಷ್ಟು ದಿನ ಮುಚ್ಚಲು ಸಾಧ್ಯ?.... ಯಾವತ್ತಿದ್ದರೂ ಹೇಳಲೇಬೇಕು-ಅದಕ್ಕೇ ಈ ದಿನ ಹೇಳೇಬೀಡೋಣಾಂತ ಧೈರ್ಯ ಮಾಡಿ ಬಂದೆ” ಎಂದುಬಿಟ್ಟ.

ಅವನ ಉದ್ಧಟತನಕ್ಕೆ ಶಾಸ್ತ್ರಿಗಳಿಗೆ ಆರಂಭದಲ್ಲಿ ಹುಚ್ಚುಕೊಪ ಬಂದಿತು. ಆದರೆ ಕ್ರಮೇಣ ಅದನ್ನೂ ಅಡಗಿಸಿಕೊಂಡರು. ಇಂಥ ದುಷ್ಟರಿಗೆ ಒಂದು ವಸ್ತುವನ್ನು ಕೊಟ್ಟು, ಅದನ್ನು ಹಿಂದಕ್ಕೆ ಪಡೆಯುವೆನೆಂದು ನಾನು ಭಾವಸಿದ್ದೇನನ್ನ ಮೊದಲು ಅವಿವೇಕ!- ಎಂದು ಸಮಾಧನ ತಂದುಕೊಳ್ಳಲು ಯತ್ನಿಸಿದರು.

“ಹೋಗಲಿ, ಬಿಡು. ಯಾರೂ ಏನನ್ನೂ ಶಾಸ್ವಾತವಾಗಿ ಇಟ್ಟುಕೊಳ್ಳಲು ಆಗಲ್ಲ... ಎಲ್ಲರೂ ಒಂದು ದಿನ ಹೋಗಲೇಬೇಕಲ್ಲ!” ಎಂಬ ಕಹಿ ಬೆರೆತತ್ತ್ವೋಪದೇಶದಲ್ಲಿ ಅವರ ಕೋಪ ಹಿಂಗಿತು.

39

ಒಂದು ಸಂದೆ ನಂಜೇಗೌಡ್ನ ವೊಲದಲ್ಲಿ ಅವ್ನ ಆಳುಗಳು ‘ಗುದ್ದ’ತೋಡ್ತ ಇದ್ದರು. ಆಗಲೆ ಕೆಲಸದಿಮದ ಗುಡ್ಲಿಗೆ ಇಂದಿರುಗಿದ್ದ ಲಕ್ಕ ಅಟ್ಟೀಲಿ ಯಾರು ಸತ್ತರು?- ಅಂತಾ ಚಿಂತಿಸ್ತಾ ಕುಂತ. ವಸಿ ವೊತ್ತು ಇಂಗೆ ಕಳೀತು. ನಾಕುಜನ ವೊತ್ತ ಚಟ್ಟದ ಮ್ಯಾಲೆ ಒಂದು ಎಣ ಬಂತು. ಚಟ್ಟದ ಮುಂದೆ ನಂಜೇಗೌಡ್ರ ಅವರ ಸಂಬಂಧಿಕ ಗಂಡಸ್ರು ಇದ್ದರು. ಅದರ ಇಂಚೋರಿ ನೆಂಟ್ರ ಎಂಗಸ್ರು ಕಣ್ಣಿರ ಕಚ್ಚಿ, ಬಾಯ್ಗೆ ಬಟ್ಟೆ ತುರುಕಿ, ಬತ್ತಾ ಇದ್ದರು. ಗುದ್ದ ಸಮೀಪಿಸ್ತಲೆ ಚಟ್ಟಾವ ಇಳುಕಿದ್ರು. ಅಮ್ಯಾಕೆ ಸಿವಾಚಾರದೋರು ಎಣಕ್ಕೆ ಮಾಡೊ ಪತ್;ತಿಮ್ಯಾರ್ಗೆ ಕ್ರಿಯಾದಿಗಳ ನಡಸಿ, ಎಣವ ಗುದ್ದದೋಳೀಕೆ ಇಳಿಸಿದ್ರು. ಅನಂತ್ರ ಕಡದು ತಂದಿದ್ದ ಗಬ್ಬದ ಬಳೆಯ ಗುದ್ದಕಿಟ್ಟು ಮಣ್ಣು ಮುಚ್ಚಿದರು. ಎಣದ ತಲೆದಿಸ್ಗೆ ಗುದ್ದದ ಅಂಚ್ಲಲ್ಲೆ ಒಂದು ಕಲ್ಲು, ಕಾಲು ದಿಸ್ಗೆ ಒಂದು ಕಲ್ಲು ನೆಟ್ಟರು. ಆ ಎಂಗಸ್ನ ಎಣ ನಂಜೇಗೌಡ್ನ ಎಡತೀದು ಅಂತಃ ನಂಜೇಗೌಡ ತಾನು ವೊದಿದ್ದ ವಲ್ಲಿಯಿಂದ ಕಣ್ಣೀರವರುಸ್ತ ನಿಂತಿದ್ದಾಗ್ಲೆ-ಲಕ್ಕಂಗೆ ತಿಳಿದುವೋಗಿತ್ತು.

ಎಲ್ಲರೂ ಸೋಕ ಮಾಡ್ತ ವೊಂಬೋದಮ್ಯಲೂವೆ ಲಕ್ಕ ತೆವರಿ ಮ್ಯಾಲೆ