ವಿಷಯಕ್ಕೆ ಹೋಗು

ಪುಟ:Vyshakha.pdf/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

373

“ಐ, ವೋಟೂ ನಿಂಗೆ ಗ್ವತ್ತಾಗನಿಲ್ವ?... ಇಲ್ನೋಡು ಲಕ್ಕ- ಈ ನಂಜೇಗೌಡ್ನ ಎಡತಿ ಸತ್ತಾಗ ಅವಳ ಮೈಮ್ಯಾಲೆ ಭಾರಿ ಚಿನ್ನದ ವಡುವೆ ಯೇರಿಕಂಡಿತ್ತು. ಅವಳ ಚೆಂದ ನೋಡಿ, ಬ್ಯಾರೆ ಗಂಡಸರು ಅವಳ ಮೇಲೆ ಕಣ್ಣಾಕ್ತಾರೆ ಅಂತ ಸಿಕ್ಸೆ ಕ್ವಟ್ರೂವೆ, ಅವಳ್ನ ಚಿನ್ನದ ವಡುವೇಲಿ ಸುಂಗಾರ ಮಾಡಕ್ಕೆ ಅವಯ್ಯಂಗೆ ಬೋ ಇಸ್ಟವಂತೆ. ಅವಮ್ನೆ ನಂಗೆ ಸಿಕ್ಕದಾಗ್ನೆಲ್ಲ ನನ್ನ ಕುಟ್ಟೆ ಯೋಳೋಳು. ನೆಲ ಕಚ್ಚೋವಂಗೆ ವೊಡದೂ ಬುಡೋದು. ಆಮ್ಯಾಕೆ ನನ್ನ ಅಣ್ಣತಮ್ಮದೀರ್ಗೆ ಎದುರಿ, ಅವರ್ಗೆ ಯೇಳ್ದೆ ಇರಲೀಂತ, ಸಣ್ಣಪುಟ್ಟ ಚಿನ್ನದ ವಡುವೆ ಮಾಡಿಸಿಕ್ವಡಾದು... ಸಣ್ಣ ಪುಟ್ಟ ಏಟು ವೊಡದ್ರೆ ಏನೂ ಕ್ವಡ್ತಿರನಿಲ್ಲ- ಅದುಕೆ, ನಾನು ಅವರ ಏಟು ವಡಿಯಕ್ಕೆ ಮುಟ್ಟಿಕಂಡಾಗ್ಲೆಲ್ಲ, ‘ದ್ಯಾವರೆ, ಅವರ ಏಟು ಈ ವತ್ತ ಜೋರಾಗೆ ಬೀಳಲೀಂತ ಪಾರ್ತನೆ ಮಾಡ್ತಿದ್ದೆ’-ಅನ್ನಾಳು!”

“ಅಂಗಾರೆ ಪುರಾ ವಡವೆ ಇದ್ದರಬೇಕಲ್ವ ಅತ್ತೆ, ಅಯಮ್ಮನತ್ರ?”

“ಮಸ್ತಾಗಿತ್ತು. ಸಾಯೋ ವೊತ್ನಲ್ಲಿ, ಗೌರಮ್ಮನ ಮೈಮ್ಯಾಲಿದ್ದ ವಡವೇನೆಲ್ಲ ತಗಿಯಕ್ಕೆ ಸುರು ಮಾಡಿದ್ರು. ಕೈಗೆ ಸಿಕ್ಕಿದ ಚಿನ್ನದ ಪೌಚಿ, ದಪ್ಪಾನೆ ಚಿನ್ನದ ಬಳೆಗಳು, ಕುತ್ತಿಗ್ಗೆ ಆಕಿದ್ದ ದೊಡ್ಡ ಗುಂಡಿನಸರ, ಚಿನ್ನದ ಕಾಸಿನಸರ, ನಡೀಗೆ ತ್ವಡಿಸಿದ್ದ ಬೆಳ್ಳಿ ಗೆಜ್ಜೆಡಾಬು- ಈ ವಡುವೆ ತರಗೆಯೋವರ್ಗೂ ಸುಮ್ಮಕಿದ್ದೋಳು, ಕೆಂಪು ಅರಳು ಮೆಟ್ಟಿದ ಕಿವಿ ವಾಲೆ, ಕುತ್ತಿಗ್ಗೆ ಆಕ್ದ ಚಿನ್ನದ ದಪ್ಪಾನೆ ಅಡ್ಡಿಕೆ, ಏಡೂ ಬೆಳ್ಳಿಗೂ ತ್ವಡಿಸಿದ್ದ ಚಿನ್ನದುಂಗರ, ನನ್ನ ಮುಸ್ಟಿ ವೋಟು ಗಾತ್ರದ ಚಿನ್ನದ ಲಿಂಗದಕಾಯಿ, ಇವ್ನ ಮಾತ್ರ ತಗಿಯಕ್ಕೆ ಅವುಳು ಅವಕಾಶ ಕ್ವಡ್ನಿಲ್ಲ... ಅವುಳು ಸಾಯೋ ವ್ಯಾಳ್ಯಾದಲ್ಲಿ ನಾನೂ ಅಲ್ಲೆ ನಿಂತಿದ್ದಿ- ಅವಳ್ನ ಅವುರಟ್ಟಿ ಜಗಲಿ ಮ್ಯಾಲೆ ತಂದು ಮನಗಿಸಿದು. ಅವಳ್ನ ಜಗಲಿಗೆ ಇಡುದ ವಸಿವೋತ್ನಲ್ದೆ ಕೈಕಾಲು ಆಡೋದು ನಿಂತಿದ್ದ ಕಂಡು, ನಂಜೇಗೌಡ ಅವಳ ಮೈಮ್ಯಾಗಿನ ವಡವೆ ಬಿಚ್ಚಕ್ಕೆ ಸುರು ಮಾಡ್ದ ಎಲ್ಲಾ ವಡವೆ ಬಿಚ್ಚೋವರ್ಗೂ ಆಗ್ಲೆ ಸತ್ತೋದಂಗೆ ಬಿದ್ದಿದ್ದೋಳು, ಗಂಡ ವಾಲೆ ಬಿಚ್ಚಕೆ ಕೈ ಆಕಿದಾಗ, ತಟಕ್ನೆ ತನ್ನ ಏಡೂ ಕೈಯೆತ್ತಿ ಅಡ್ಡಿ ಮಾಡಿದ್ದಲು. ಗೌಡ ಆಮ್ಯಾಕೆ ಅಪ್ಪರ ಬೆಲೆ ಬಾಳೊ ಅಡ್ಡಿಕ್ಗೆ ಕೈಯಿಟ್ಟ. ಕೊಸಾರ್ನೆ ಅವ್ನ ಕೈಯ ಭದ್ರಾಗಿ ಇಡುಕಂಡ್ಲು!.... ಏನು ಮಾಡಕ್ಕೂ ಗ್ವತ್ತಾಗ್ದೆ. ಗೌಡ ವೋಟೋತ್ನಿಂದ ಅಲ್ಲೇ ಇದ್ದ ಮಟದ ಸ್ವಾಮಿಗಳ ಕಡೆ ನ್ವಾಡ್ದ. ಸ್ವಾಮಿಗಳು, ‘ವೋಗ್ಲಿ, ಬುಟ್ಟುಬುಡು ನಂಜೇಗೌಡ. ಅವಳ್ಗೆ ಬಂಗಾರದ ಉಚ್ಚ ಇಡಿಸಿಕೋನು ಪ್ರತುಮಾಗಿ ನೀನೆಯ! ಆಗ ಸುಮಾರು ವಡವೆ ಬಿಚ್ಚಿಕಂಡಿದ್ದೀ. ಇನ್ನು ಉಳಿದಿರಾದು ವಾಲೆ, ಅಡ್ಡಿಕೆ, ಲಿಂಗದ ಕರಡಿಗೆ-ಈಟು ತಾನೆ?... ವಾಲೆಭ್ಯಾಗ್ಯ ಮುತ್ತೈದೆಯೋರ್ಗೆ