379
ಲಕ್ಕ ವಸಿ ವೊತ್ತ ಅಂಗೇ ಮರ್ಯಾಗಿ ನಿಂತಿದ್ದ. ಅವರಿಬ್ಬರು ಎಂಗಸರು ವೊಂಟೋದ ಮ್ಯಾಲೂವೆ, ಊರ್ನ ಸಮೀಪಿಸಕ್ಕೆ ಅವನ್ಗೆ ದೈರ್ಯ ಸಾಲದು. ದಾರೀಲು ಯರು ಸಿಕ್ಕಾರೊ, ಏನು ಕೇಡು ಕಾದಿದ್ದದೊ ಅನನೊ ದಿಗಲು. ಇಂಗೆ ಆಡಿಚೋಡಿ ಆಡಿಕಂಡು ಅರ್ಧಮುಕ್ಕಾಲು ಗಂಟೆ ಕಳದ. ಓಣೀಲಿ ಯಾರ ಸುಳುವೂ ಇಲ್ಲ. ಇಲ್ಲ ಕಳ್ಳ ಎಚ್ಚೆ ಆಕ್ತ ಮೆತ್ತಮೆತ್ಗೆ, ಮೆತ್ತ ಮೆತ್ಗೆ ತಮ್ಮ ಗುಡ್ಲ ತಾವಿಕೆ ಬಂದ. ಅವನು ಇಂಗೆ ತಮ್ಮ ಗುಡ್ಲಿನ ತಾವಿಕೆ ಬರೋ ವ್ಯಾಳ್ಯಕ್ಕೆ, ಊರು ಮುಕ್ಕಾಲುಮೂರುವೀಸೆ ನಿದ್ದೇಲಿ ಮುಳುಗಿದಂಗಿತ್ತು. ಈಗ ಮಾತ್ರ ಒಂದು ನರಪಿಳ್ಳೆಯೂ ಎಲ್ಲೂ ಕಾಣ್ತಾ ಇರ್ನಿಲ್ಲ. ಈಗ ಮೊದಲಂಗೆ ಆಗಿದ್ದ ಬೊಡ್ಡ ಜ್ವತೆಗಿದ್ರೆ, ಊರ್ನ ಬ್ಯಾರೆ ನಾಯಿಗಳು ಬೊಗಳ್ದಾಗ ಇದು ಬೊಗಳಿ ರಾದ್ದಾಂತ ಆದದೂಂತ ಎಣಿಸಿ ಬೊಡ್ಡನ್ನ ತನ್ನ ಗುಡ್ಲಲ್ಲೆ ಬಿಗ್ಯಾಗಿ ಕಟ್ಟಾಕಿ, ಕದಕ್ಕೆ ಬೀಗ ಜಡಿದು ಬಂದಿದ್ದ.
ಆದ್ರೆ ತಮ್ಮ ಗುಡ್ಲ ಮುಂದುಕೆ ಬಂದು ನಿಂತಗ, ಅದರ ಮುಂದುಗಡೆ ಯಾರೊ ಬುಟ್ಟಿದ್ದ ಮೆಟ್ಟು ನ್ವಾಡಿ, ಲಕ್ಕನ ಸಂಬ್ರಮವೆಲ್ಲ ಸೋರೋಗಿ, ಗುಡ್ಲ ವೊರಗಡೆ ಬುಟ್ಟಿರೊ ಈ ಜೋಡು ಯಾರ್ದು?... ಯಾರಾರು ವೊಸಬರು ವಳುಗಡೀಕೆ ಬಂದಿದ್ದಾರ?. ಅನ್ನೊ ಸಂಸಯ್ಕೆ ಎಡೆಮಾಡ್ತು. ಅಂಗೇ ನಿಂತ. ವಳುಗಡೆ ಸಿವುನಿ ಜ್ವತ್ಗೆ ಯಾರೋ ಗಂಡಸು ಮಾತಾಡ್ತ ಇರೋವಂಗೆ ಕಾಣಿಸ್ತದೆ!... ಅಯ್ಯ, ಏನಾರ ಅಪುರ್ಪಕೆ ;ಮಗಳ್ನೂ ಮೊಗಾನೂವೆ ನ್ವಾಡಕ್ಕೆ ಆಸ್ಯಾಗಿ ಬಂದಿರಬೌದ?... ಇನ್ನೂ ಸಮೀಪ್ಸಿಸಿ ಕಿವಿಕ್ವಟ್ಟು ಆಲಿಸ್ದ- ಈಗ ಸಿವುನಿ ಮಾತಾಡಿದ್ದಲು:” ವೋಗಿ ಕೇಸವಯ್ಯಾರೆ- ವೋಗಿ, ನೀವು ಇಂಗೇ ಯಾವತ್ತುವಿ ತಳಕು ವೋಡೀತಲೆ ಬತ್ತಾ ಇದ್ದೀರಿ... ಬಂದಾಗ ಒಂದು ರುಪಾಯಿ, ಎಡು ರೂಪಾಯಿ ಬಿಸಾಕಾದು. ವಾಟ ವೊಡೀತಿರಾದು..... ನಾ ಕ್ಯಾಳಿದ ಸ್ಯಾಲೆ, ಕುಪ್ಪಸ ಇನ್ನೂ ಬತ್ತಾನೆ ಅವೆ...” ನೀವು ಇನ್ನಂದ ಜಿನ ತಕ್ಕಂಬರದೇ ವೋದರೆ, ನನ್ನ ಗುಡ್ಲ ವಳೀಕೆ ನಿಮ್ನ ಕೂಡಕ್ಕೇ ಇಲ್ಲ- ಈ ಮಾತ ಮಾತ್ರ ನಿಮ್ಮೆದೆಗೂಡ್ನಲ್ಲಿ ಚೆಂದಾಗಿ ಬರೆದಿಟ್ಟುಕೊನ್ನಿ...”
ನನ್ನ ತಂಗಿ ಬಾಯಿಂದ ಈ ಮಾತ ಕೇಳ್ತಿದಂಗೇನೆ ಲಕ್ಕಂಗೆ ರುದ್ರ ಕ್ವಾಪ ಬಂದುಬುಡ್ತು
ಈಗ ಕೇಸವಯ್ನ ಸುಸ್ವರ ಕೇಳುಸ್ತು:
“ಇಸ್ಟು ದಿವಸವಾದರೂ ನನ್ನನ್ನ ನಂಬ್ತಾನೆ ಇಲ್ಲವಲ್ಲ, ಸಿವುನಿ?... ಹೋದ ಸಲ ನಾನು ಹುಣಸೂರಿಗೆ ಹೋಗಿದ್ದಾಗ ಯಾವ ಅಂಗಡೀಲೂ ಒಳ್ಳೆ