380
ಮಾಲು ಬಂದಿರಲಿಲ್ಲ. ಅದಕ್ಕೆ ಬರೋ ಸಂತೆಗೆ ತರೋಣಾಂತ ವಾಪಸು ಬಂದೆ. ಈ ಸರ್ತಿ ಸಪ್ಪೊಲ್ಲ. ಖಂಡ್ತಾ ತಂದುಕೊಡ್ತೀನಿ...” ಅಂದು ಭಾಷೆಕೊಟ್ಟು, “ಹುಂ-ಈಗ” ಅಂತಾ ಇರೊ ವ್ಯಾಳ್ಯಕ್ಕಾಗಲೆ ಅಂಡೇಲಿ ಬಿಸಿನೀರು ಕುಡಿಯೋ ಅಂಗೆ ಕುದೀತಿದ್ದ ಲಕ್ಕ, ಇನ್ನು ತಡಕೋನಾರದೆ ಗುಡ್ಲು ಕದವ ದಬದಬ ತಟಕ್ಕೆ ಮುಟ್ಟಿಕಂಡ...
ಗುಡ್ಲು ವಳುಗಡೆ, ಕೇಸವಯ್ಯ, ಸಿವುನಿ ಇಬ್ಬರೂವೆ ಗುಬ್ಬಲು ಪರದಾಡಕ್ಕೆ ಸುರುಮಾಡಿದ್ರು. ಇಬ್ಬರೂವೆ ಏನೇನೋ ಪಿಸುಗುಟ್ಟಿಕಂಡರು. ಲಕ್ಕ ತನ್ನ ನಡೀನ ಪಟ್ಟಿಂದ ಮಚ್ಚು ಇರಿದು ಕದ ತಳ್ಳಿ ವಳೀಕೆ ನುಗ್ಗಕೆ ಯತ್ನಿಸ್ತಾ ಇದ್ದ... ವೋಟರಲ್ಲಿ ವಳುಗಡಿಂದ ಗಡಿಬಿಡಿ ಎಚ್ಚಾಯ್ತು. ಸಿವುನಿ ಸ್ಯಾಲೆ ಸರಿಮಾಡಿಕೊತ್ತ ಬಂದು,
“ಅದ್ಯಾರು, ಈಟೋತ್ನಲ್ಲಿ ಬಂದು ನಮ್ಮ ಗುಡ್ಲ ಕದಾನ ಮುರೀತಿರೋರು?... ನಾ ಒಬ್ಬಳೇ ಇವ್ನೀಂತ ಗುಡ್ಲುವಳೀಕೆ ನುಗ್ಗಕ್ಕೆ ಬಂದಿದ್ದೀರಾ?- ನಾಯೇನು ನಿಮ್ಗೆ ಬಗ್ಗೊ ಎಣ್ಣಲ್ಲ, ತಿಳಿಕ್ನೊ... ಅದ್ಯಾಕಂಗೆ ಒಂದೇ ಸಮಕೆ ಕದವ ಆಕ್ಕೊಂಡು ದಬ್ಬೀರಿ?- ವಸಿ ತಡಕನ್ನಿ. ನಾನೇ ಕಡ ತೆಗೀತೀನಿ. ಸುಮ್ಕೆ ಕಡಯಾಕೆ ಮುರುದೀರಿ!...”
ಬಾಗ್ಲ ತಗದು ನ್ವಾಡಿದ್ರೆ-ಅಣ್ಣ ಲಕ್ಕ!... ಒಡನೆಯೆ, “ಅ-ಣ್ಣ...” ಚೀರಿದಳು.
ವೋಷ್ಟರಲ್ಲಿ ಸಿವುನಿ ಇಂಡುಗಡಿಂದ ಕಳ್ಳೆಜ್ಜೆ ಆಕ್ತ ಮೆತ್ತಗೆ ಕೆಸವಯ್ಯ ನುಸ್ದು ಪರಾರಿಯಾಯ್ತ ಇದ್ದದ್ದ ಕಂಡ ಲಕ್ಕ.
ಅಲ್ಲು ಮುರಿ ಕಡೀತ, ಮಚ್ಚುಗತ್ತಿ ಎತ್ತ ಇಡುದು ಅವ್ನ ಅಟ್ಟಿಸ್ಕಂಡು ವೋಗಾನ ಅಂತ, ಲಕ್ಕ ನುಗ್ಗಕ್ಕೊಂಟ. ವೋಟರಲ್ಲಿ ಲಕ್ಕನ್ನ ನ್ವಾಡ್ದ ಗಳಿಗೇಲಿ ತಬ್ಬಿಬ್ಬಾಗಿ ನಿಂತಿದ್ದ ಸಿವುನಿ, ತಟಕ್ನೆ ಅವ್ನ್ನ ಅಡ್ಡಗಟ್ಟಿ ನಿಂತು. “ಮೊದ್ಲು, ನನ್ನ ಕ್ವಚ್ಚಾಕಿಬುಟ್ಟು ಮುಂದ್ಕೆ ನೀ ಕಾಲಿಡು” ಅಂದಾಗ, ಲಕ್ಕ ಬೆರುಗಾಗಿ ಕೈ ಸೋತು,
“ನಿಂಗೇನು ಬಂದಿತ್ತೇ ಕೇಡು-ಇಂಗೆ ಆ ಅರುವಯ್ನ ಕುಟ್ಟೆ ಆದ್ರೆ ಮಾಡಕ್ಕೆ?” ಅಂದ.
ಸಿವುನಿ ಮೊಕದಲ್ಲಿ ಚಾಮುಂಡಿಯೇ ಮೂಡಿದ್ಲು. ಬಾಂಡಲೀಲಿ ಮೆಣಸಿನ್ಕಾಯಿ ಫಟಫಟ ಸಿಡಿಯೊ ಅಂಗೆ ಸಿಡಿದ್ಲು.
“ಏನಂದಿ?- ನಂಗೇನು ಬಂದಿತ್ತು ಕೇಡು ಅಂದ್ಯಾ?... ಇನ್ನೆನ ಬರಬೇಕಾಗಿತ್ಲ. ಅಪ್ಪಯ್ಯ?- ನೀನು ಗ್ರಾಸ್ತ, ಆ ಆರುತಿ ತಂಟೆಗೋಗಿ ಊರ ಬುಟ್ಟು ಕಡದೋದೆ. ಅವ್ವನ್ನೂ ಪಳೇಗ್ಮಾರಿ ತತ್ತಿಗಂಡೋಯ್ತು. ಅಯ್ಯ