ವಿಷಯಕ್ಕೆ ಹೋಗು

ಪುಟ:Vyshakha.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

43


ಮಾಂಸವ ಕಿತ್ತಿದ್ವಂತೆ... ಆ ದ್ರುಸ್ಯ ನ್ವಾಡ್ತಿದ್ದಂಗೆ, ಇನ್ನೊಮದು ಉಲಿ ಸಮೀಪದಾಗಿ ಯೆಲ್ಲೋ ಅವುತಿರಬೇಕೂಂತ ಬಂiÀÄಬಿದ್ದು, ಆ ಜಾಗದಿಂದ ಕಾಲುಕಿತ್ತರಂತೆ!... ಸತ್ತ ಉಲಿಯ ಎತ್ತಿನ ಗಾಡಿಗೆ ಆಕಂಬಂದು ಅದರ ಚರ್ಮ ಅಸೀಬೇಕೂಂತ ಅವ್ರಿಗೆ ಇಪರೀತ ಆಸೆ ಆಯ್ತಂತೆ. ಆದ್ರೆ. ಆಳುಗಳ ಕುಮ್ಮಕ್ಕು ಕಮ್ಮಿ, ಊರ್ನಿಂದ ಎಚ್ಚ ಆಳ ಕರಕಂಬಂಧು ಉಲಿ ಸಾಗಿಸಾದು ಅಂದುಕಂಡ್ರಂತೆ... ಈ ಸುದ್ಯ, ಆ ತಳಕೋಗಿದ್ದ ಅಂಚೀಕಡ್ಡಿ ಈರಪ್ಪ ಜೈನಿಗರ ಅನಂತಯ್ಯ ನೂವೆ ನಿನ್ನಂಗೆ ಹ್ಯಾಪ ಮ್ವಾರೆ ಅಕ್ಕಂಡೇ ತಂದಿದ್ದ. ಆ ನಾತ್ರೆ ಹಾಲಿಗೆ ಎಪ್ಪಾಕಿ, ಅಣತೆ ನಂದಸ್ತಿದ ವೊತ್ನಲ್ಲಿ ಬಂದು, ಕದ ತಟ್ಟಿ ತೆಗುಸಿ, ಯೋಳಿ ವೋದ್ರ್ರು...ಆಗ ನಾನೇನು ಎದುರಿ ಹೇತುಗಂಡು ಕಯ್ಯಿ ಕಾಲು ಸೋತು ಕುಂತನ್ಯಾ?... ನ್ವಾಡ್ಲ, ಆ ಎಮ್ಮೆಗಳ್ಗೆ ಆಯಿದು ಕರ ಇದ್ದೊ. ಅವ್ನೇಯ ಚೆಂದಾಗಿ ಸುಸ್ರೂಸೆ ಮಾಡ್ದೆ. ಬೆಳುಸಿ ದೊಡ್ಡೋವ ಮಾಡ್ದೆ- ಎಂಗೋ ರತ ನಡೀತು... ಈಗೇನ ಸೊರೋದ್ದು?... ಈಗ್ಲೂ ವೋಟೆಯ. ಅಯಿದು ಎಮ್ಮೆ ವೋದರೂವೆ ಅವು ಮೂರು ಕರ ಬುಟ್ಟೋಗವೆ. ಉಳುಕಂಡಿರೋ ಈ ಮೂರು ಕರುಗಳ್ನೇ ಇಂದ್ಕೆ ಆ ಕರುಗಳ ಸಾಕ್ದಂಗೇ ಸಾಕ್ತೀನಿ. ಬೆಳುಸಿ ದೊಡ್ಡೋವ ಮಾಡ್ತೀನಿ... ಇದ್ಕೆ, ನೀ ಯಾಕ್ಲ ಚಿಂತೆ ಮಾಡೀ?- ತಿನ್ನು, ತಿನ್ನೂಂತ

  • * * *

ರೊಟ್ಟಿ ತಿಂದು, ನೀರು ಕುಡದು, ಬಂಡಮ್ಮನ ಅಟ್ಟಿಯಿಂದ ವೊರ ಬೀದಿಗೆ ಬಂದ ಲಕ್ಕ, ಆ ಮಾತಾಯ ತನ್ನ ಮಯ್ಯಿ, ಮನಸು ಏಡರ ತುಂಬಾನು ತುಂಬುಕೊತ್ತ ಲಕ್ಕ ಎಜ್ಜೆ ಆಕ್ತಿದ್ದ. ಆ ಯೋಚ್ಣೇಲಿ ವಂದಿಗೇ ನೆರಳಿನಂಗೆ ಉದ್ದಕೂ ಬತ್ತ ಇದ್ದ ಬೊಡ್ಡನ ಕಡೀಕೆ ಲಕ್ಕನ ಗ್ಯಾನ ಆರೀನೆ ಇಲ್ಲ.

ಬುಂಡಮ್ಮಾರ ಅಟ್ಟಿ ಬುಟ್ಟು ಇನ್ನೂ ರವೋಟು ದೂರಾನು ವೋಗಿಲ್ಲ. ಸಣ್ಣ ಸಣ್ಣಗೆ ಅನಿ ಇಡ್ತಿದ್ದ ಮಳೆ ಬತ್ತಾ ಬತ್ತಾ ಗಟ್ಟಿಸಕ್ಕೆ ಮುಟ್ಟುಕತ್ತು. ಇನ್ನೂ ಜಗಲಿ ಮ್ಯಾಲೆ ನಿಂತಿದ್ದ ಬುಂಡಮ್ಮಾರು,

“ಲೋ ಲಕ್ಕ... ಲಕ್ಕ ಲೋ, ಇಂದ್ಕೆ ಬಾರ್ಲ. ಮಳೆ ಗಟ್ಟಿಸ್ತಾ ಅದಲ್ಲೊ?... ನೆಂದೋಯ್ತಿಯೆ – ಇತ್ತಾಗೆ ಓಡ್ಬಾರ್ಲ-ಮಳೆ ನಿಲೊಗಂಟ ನಮ್ಮ ಅಟ್ಟೀಲಿ ಕುಂತಿದ್ದ ವೋಗೀವೆ,” ಕೂಗ್ದಾಗ ಬೆಳ್ಳಿ ಲಿಂಗದ ಕಾಯಿ ಅವರ ಎದೆ ಮ್ಯಾಲೆ ಅಳ್ಳಾಡ್ತಿತ್ತು.

ಲಕ್ಕ ತಿರುಗಿ ನ್ವಾಡಿದೋನು,

“ನಮ್ಮ ಗುಡ್ಲಿಗೇ ವೋಂಟೋಯ್ತಿನಿ ಅಮ್ಮಾರೆ... ಅಮ್ಯಾಕೆ ಪುನಾ ಬತ್ತೀನಿ,”