ವಿಷಯಕ್ಕೆ ಹೋಗು

ಪುಟ:Vyshakha.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4


ಮುರಿದಿರೊ ನನ್ನ ಹಸುವಿನ ಮೇಲೆ ಸವಾರಿ ಮಾಡಲಿಕ್ಕೆ ಶುರು ಮಾಡ್ರಲ, ಈ ಹಾಳು ಕಡಸು... ಇದರ ವಂಶ ನಿರ್ವಂಶವಾಗ...” ಈ ಉಯ್ಲು ಆಚೆ ಬೀದಿ ಬ್ರಾಂಬರ ಕೇರಿಂದ ಒಂದೆ ಉಸುರ್ಗೆ ಬತ್ತಾ ಇತ್ತು. ಲಕ್ಕ ಆ ಬೀದಿಗೆ ವೊಳ್ಳಿ ನ್ವಾಡ್ದಾಗ, ಒಂದು ಕುಂಟೊ ಮುದಿ ಆಸೀನ ಮ್ಯಾಲೆ ಒಂದು ಎಣ್ಣು ಕಡಸು ದಪಾ ದಪಾ ಅತ್ತಕ್ಕೆ ಪರ್ಯತ್ನ ಮಾಡ್ತಿತ್ತು. ಆ ಮುದಿ ಅಸೀನ ಒಡತಿ, ಮಡಿ ಎಂಗಸು, ತನ್ನಟ್ಟಿ ಜಗುಲಿ ಕಂಬ ತಬ್ಬಿ ತಲೆ ತಲೆ ಬಡಿಕೊತ್ತಿತ್ತು. ಎದುರಟ್ಟಿ ವಳುಗ್ನ ಪಡಸಾಲೇಲಿ ಬ್ರಾಂಬರ ಹೈಕಳು ನಿಚ್ಚ ಯೋಳೊವಂಗೆ ಅದ್ಯಾವುದೊ ಮಂತ್ರವ ಬಾಯಿಪಾಟ ಮಾಡಿಕತ್ತಿದ್ದೂ. “ಬೆದೆಗೆ ಬಂದಿರೊ ಕಡಸಿಗೆ ಹೋರಿ ಕೊಡಿಸದೆ ಹಾಗೇ ಬಿಟ್ಟರೆ, ಆದಿನ್ನೇನು ಮಾಡುತ್ತೆ? ತನ್ನ ತೀಟೆ ತೀರಿಸಿಕೊಳ್ಳಲಿಕ್ಕೆ, ಸಿಕ್ಕುಸಿಕ್ಕಿದ ಹಸುಗಳ ಮೇಲೆ ಹಾರುತ್ತೆ... ಮುಖ್ಯ, ಆ ಕಡಸನ್ನ ಸಾಕ್ತಿರೊ ಜನಕ್ಕೆ ಗ್ನ್ಯಾನ ಇರಬೇಕು...” ಆರುವರ ಮುದುಕಿ ಮೂಲೆ ಮನೆ ದಿಕ್ಕೆ ಕೆಂಗಣ್ಣ ಬೀರತ, ಮಾತ್ಮಾತ್ಗೂ ಜಗಲಿ ಕಂಬವ ಮುಸ್ಟ್ಯಿಂದ ಕುಟ್ತ, ಊಳಿಡ್ತಿತ್ತು. ಸಟೀಗೆ ವಾರೆ ಮಾಡ್ದ ಕದೀನ ಸಮದಿನಿಂದ ವೊರಕ್ಕೆ ಇಣುಕ್ಕೆ ಪಣಕಿ ನ್ವಾಡ್ತಿದ್ದ ಮೂಲೆಮನೆ ಎಂಗಸು, ಆ ಮಾತು ಕ್ಯಾಳುನಾರದೆ, ನಾಚಿ ಕದ ಮುಚ್ಚಿದಳು. ಲಕ್ಕ ಓಡೋಗಿ, ಕಯ್ಲಿದ್ದ ಕೋಲ್ನಿಂದ ಕಡಸ್ಗೆ ನಾಕೇಟು ಬಿಗ್ದು, ಅದ್ನ ಮೂಲೆಮನೆ ಇಂಚೊರಿ ಕ್ವಟ್ಟಿಗ್ಗೆ ಅಟ್ಟೊಯ್ದು, ಗೂಟಕ್ಕೆ ಕಟ್ಟಾಕಿದ. ಅವ್ನು ಕತ್ತೆತ್ತೂನೂವೆ ಇತ್ತಿಲ ಬಾಗ್ಲ ಚೌಕಟ್ಟು ತನ್ನೇಡು ಕಯ್ಯಿಲೂ ಇಡುದು ನಿಂತಿದ್ದ ರುಕ್ಮಿಣವ್ವ ಕಣ್ಣಿಗೆ ಬಿದ್ಲು. “ಆ ಲಕ್ಷಮ್ಮನೋರ ಬಾಯಿ ತೆರೀತು ಅಂದರೆ, ನಮ್ಮೂರ ಮುಂದಿನ ಹೆಬ್ಬಾಗಿಲು ತೇರಿತು ಅಂದ ಹಾಗೇನೇ!... ಆ ಮುದುಕಿ ಏನಾರು ನೆಪತೆಕ್ಕೊಂಡು ಯಾರ ಬಗ್ಗೆಯಾದರೂ ಬೊಬ್ಬೆಯಿಡ್ತಾ ಇರಬೇಕು. ಒಂದು ಪಕ್ಷ ಅಂಥ ಅವಕಾಶ ಸಿಕ್ಕದೇ ಹೋದರೆ, ಬಹಳ ಹಿಂದೆಯೇ ತೀರಿಹೋದ ತನ್ನ ಗಂಡ ಜೀವನದ್ದುದ್ದಕ್ಕೂ ತನಗೆ ಹಾಗೆ ತೊಂದರೆಕೊಟ್ಟ ಹೀಗೆ ಗೋಳು ಹುಂಯ್ದ-ಅಂತ ಮನೆಮನೆಗೂ ಹೋಗಿ ಡಂಗುರ ಸಾರಬೇಕು...ಅಂತು ಹೀಗೆ ಏನಾರ ರಂಪ ಮಾಡದಿದ್ರೆ, ತಿಂದ ಅನ್ನ ಅವರಿಗೆ ಮೈ ಹತ್ತುಲ್ಲ... ಆದರೆ, ಅವರಿಗೆ ಸಮಯ ಬಿದ್ದು ಯಾವುದಾದರೂ ಸಣ್ಣ ಪುಟ್ಟ ಸಾಮಾನು ಬೇಕಾದಾಗ ಮಾತ್ರ, ಪುಸಿ ಮಾಡಿಕೊಂಡು ಬರ್ತಾರೆ!... ನಮ್ಮಿಂದಲೆ ಸಹಾಯಪಡೆದು, ನಾವು ಕೊಡುವುದೇನಾದರೂ ಕಿಂಚಿತ್ ಕಡಿಮೆಯಾದರೆ, ನಮ್ಮನ್ನ ಹೀನಾಮಾನ ದೂರುವ