ಸಮಗ್ರ ಕಾದಂಬರಿಗಳು
7
ತಕ್ಕ ತಿನ್ನು” ಅಂತ ಒಂದು ಚೂರು ರೊಟ್ಟಿ ಮುರುದು ಲಕ್ಕ ತನ್ನ ನಾಯಿಯ ಮುಂದ್ಕೆ ಎಸ್ದ. “ತಾಳು, ತಾಳು ನನಗೂ ನಿನ್ನ ಬೊಡ್ಡ ಮರೆತೇಹೋಯ್ತು. ಇನ್ನೊಂದು ಮುರುಕಲ ರೊಟ್ಟಿ ತರ್ತೀನಿ” ಎಂದು- ಲಕ್ಕ “ಬ್ಯಾಡಿ ಬ್ಯಾಡಿ, ಅಮ್ಮಾರೆ. ಇಲ್ಲಿರೂ ವೋಟೆ ಸಾಕು” ಅಂತ ಕೂಗ್ತಿದ್ದರೂ ಕೇಳದೆ- ಸರ್ರನೆ ಮತ್ತೆ ಒಳಗೋಗಿ, ಒಂದು ದೊಡ್ಡ ರೊಟ್ಟಿ ಮುರುಕು ತಂದು, ಅದನ್ನು ಚೂರು ಚೂರು ಮಾಡಿ ಬೊಡ್ಡನ ಮುಂದೆ ಎಸೆಯುತ್ತ. “ಈ ಕಡಸಿಗೆ ಹೋರಿ ಕಟ್ಟಿಸಬೇಕೂಂತ ನಾನು ಪ್ರಯತ್ನ ಮಾಡ್ತಾನೆ ಇದೀನಿ. ಸಮೀಪದಲ್ಲೆಲ್ಲೂ ಹೋರಿ ಸಿಕ್ತಾ ಇಲ್ಲ. ಚೌಡೀಪುರದ ಕಾಳೇಗೌಡರ ಹತ್ತಿರವೆ ಹೋಗಬೇಕು. ಅವರ ಹೋರಿ ತಾನೆ ಈ ಸುತ್ತಿಗೆಲ್ಲ ಪ್ರಸಿದ್ದಿ. ಆದರೆ ಅಲ್ಲೀವರೆಗೆ ಈ ಕಡಸನ್ನ ಅಟ್ಟಿಗಂಡು ಹೋಗಲಿಕ್ಕೆ ನಮ್ಮ ಮಾವನವರು ಯಾಕೊ ಮನಸ್ಸು ಮಾಡಿಲ್ಲ, ಇನ್ನೂ. ಅವರು ಮನಸ್ಸು ಮಾಡೋತನಕ ಈ ಕಡಸನ್ನ ತಡೆಯೋದು ನನಗಂತೂ ಪರಮ ಕಷ್ಟವಾಗಿದೆ” ಎಂದು ನಿಟ್ಟುಸಿರಿಟ್ಟಳು. “ನಂಗೆ ಈ ವಾರ ತುಸ ಕೆಲ್ಸ-ಬರೋ ವಾರ ಕಡಸ್ಗೆ ಕಲಗ್ಚು ಉಲ್ಲು ಕಮ್ಮಿ ಆಕಿ. ಒಂದು ನಾಕೈದು ಜಿನ ನವುದು ನಾಚಾರಾಗ್ಲಿ ದನ. ಇಲ್ದೇವೋದ್ರೆ, ಗಬ್ಬ ನಿಲ್ಲಕಿಲ್ಲ ಅನ್ನಾದು ನಿಮಗೂ ಗ್ವತತೇ ಅದಲ್ಲ...? ನೀವೋಟು ಮಾಡಿ. ಆಮ್ಯಾಕೆ ನಾನೇ ಬಂದು ಇದ್ನ ಚೌಡೀಪುರಕ್ಕೆ ಅಟ್ಟಗಂಡೋಗಿ ವೋರಿ ಕ್ವಡಿಸಿಗಂಬತೀನಿ.” ಲಕ್ಕ ಮಾತಾಡ್ತ ಇದ್ದಂಗೆ ಬೀದಿ ಬಾಗ್ಲ ತಟ್ಟಿದ ಸಬ್ದ!... “ರುಕ್ಮಿಣಿ, ರುಕ್ಮಿಣಿ” ಅಂತ ಯಾರ್ದೊ ಕೂಗು!... “ಮಾವಯ್ಯ ಬಂದರು ಎಂದು ಕಾಣುತ್ತೆ. ಹಾಗೇ ಕೊಟ್ಟಿಗೆ ಕಸ ತೊಡೆದು ಹೋಗಪ್ಪ, ಆ ಸೊಸಿಯ ಈಗಲೂ ಬರದೇ ಹೋದರೆ ಮತ್ತೆ ನೀನೇ ಬಂದು ಈ ದಿನ ಕಾಡಿಗೆ ದನಗಳನ್ನ ಅಟ್ಟಿಕೊಂಡು ಹೋಗಬೇಕಾದೀತೋ ಏನೋ ಎಂದವಳೇ ರುಕ್ಮೀಣಿ ಮನೆಯೊಳಗೆ ನಡೆದಳು. ಕ್ವಟ್ಟಿಗೇಲಿ ಒಂದರ ಪಕದಲ್ಲೊಂದು ಕಟ್ಟಾಕಿದ್ದ ಏಡು ಗೋವು ಹಾದಾಡಕ್ಕೆ ಮುಟ್ಟಿಕಂಡದ್ದೂ. ಸೂರಿಗೆ ಸೆಕ್ಕಿದ್ದ ಕೋಲು ಇರುದು ಏಡಕ್ಕೂ ಪಟ್ಟಾಗಿ ಬಿಗ್ಗು ಇತ್ತಲ್ಗೆ ಅಟ್ಟಕಂಡೋಗಿ ದೂರದೂರಕಿದ್ದ ಗೂಡಗಳ್ಗೆ ಆವೇಡ್ನ ಕಟ್ದ. ಆ ಮ್ಯಾಕೆ ಕ್ವಟ್ಟಿಗೆ ವೊಳುಗಿದ್ದಯೆಲ್ಲ ಎಮ್ಮೆ ದನಕರನೂವೆ ವೊಡಕಂಡೋಗಿ ಕಟ್ಟೊ ಜಂಬರ. ಅದು ಮೂಗೀತು ಅಂದ್ರೆ ಕಸಾವ ಬಾಚಿ, ಬಿದಿರು ಮಂಕರಿಗೆ ತುಂಬಿ, ತಿಪ್ಗೆ