ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦

ಯಶೋಧರ ಚರಿತೆ


ವ್ರತಹಾನಿ ಹಿಂಸೆಯೊಂದೀ

ಗತಿಗಿಕ್ಕಿದುದುಳಿದ ನಾಲ್ಕು ಮಾದೊಡೆ ಬಳೆಕೇಂ

ಚತುರಂಗಬಲ ಸಮೇತಂ

ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ 34


ಅದರೆಂ ತನ್ನಂತಿರೆ ಬಗೆ-

ವುದು ಪೆರರಂ ಪ್ರಾಣಿಹಿಂಸೆಯಂ ಮಾಡಲ್ವೇ-

ಡ ದಯಾಮೂಲಂ ಧರ್ಮಂ

ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ 35


ಗುರುವಿಂತು ಬೆಸಸೆ ಜಾತಿ

ಸ್ಮರಂಗಳಾಗಿರ್ದು ಪಕ್ಕಿಗಳ್ ಕೇಳ್ದೆರ್ದೆಯೊಳ್

ಪರಮೋತ್ಸವದಿಂ ವ್ರತಮಂ

ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂ 36

_____

4. ಅಹಿಂಸೆ ಎಂಬ ಒಂದು ವ್ರತಕ್ಕೆ ಈ ಬಗೆಯ ಅಪಚಾರ ಸಂಭವಿಸಿದುದರಿಂದ ಅವರಿಗೆ ಈ ಗತಿಯೊದಗಿತು. ಉಳಿದ ನಾಲ್ಕು ವ್ರತಗಳಿಗೂ ಭಂಗವುಂಟಾದರೆ ಇನ್ನೇನಾಗದು? ಶೂರನೊಬ್ಬನು ಚತುರಂಗಬಲ ಸಮೇತನಾಗಿ ಬಂದರೆ ಏನು ಮಾಡಲಾರ ? 35. ಆದುದರಿಂದ ಪರರನ್ನು ತನ್ನಂತೆ ಬಗೆಯಬೇಕು. ಪ್ರಾಣಿಹಿಂಸೆಯನ್ನು ಮಾಡಬಾರದು, ಧರ್ಮವು ದಯಾಮೂಲವಾದುದು. ಮಗು! ನೆಮ್ಮದಿಯಿಂದ ಕೇಳು: ಇದು ಇಹಪರಲೋಕಗಳ ಭವಕ್ಕೂ ಹಿತವನ್ನುಂಟುಮಾಡುತ್ತದೆ.” 36. ಗುರುಗಳು ಕೊಟ್ಟ ಉಪದೇಶವನ್ನು ಕೇಳುತ್ತಿದ್ದಂತೆ ಪುರ್ವಜನ್ಮದ ಸ್ಮರಣೆಯುಂಟಾದ ಆ ಕೋಳಿಗಳೆರಡೂ ಅಂತರಂಗದಲ್ಲಿ ಆನಂದಗೊಂಡು ಈ ವ್ರತವನ್ನು ಕೈಗೊಂಡವು. ಚಂಡಕರ್ಮನೂ ವ್ರತವನ್ನು ಅಂಗೀಕರಿಸಿದನು.