೧೦೧
ಯಶೋಧರ ಚರಿತೆ
ಕಳಲೆ ನಿಜಹರ್ಷಬಾಷ್ಪ
ಮರೆವನಿ ಧರ್ಮಾನುರಾಗ ಮೇಘಧ್ವನಿವೊಲ್
ಮೊಳಗುವಿನುರಂಕೆಯ ಪೊಯಿಲ್
ಫಳೆಲನೆ ಕೂಗಿದುವು ಕೇಳ್ದನಿತ್ತ ನೃಪಾಲಂ 37
ಸ್ವರವೇದವಿದ್ಯೆಯಂ ತ-
ನ್ನರಸಿಗೆ ಮೆರೆಯಲ್ಕೆ ದೇವಿ ನೋಡೆನುತೆಚ್ಚಂ
ಸರಲೆಯ್ದಿಸೆ ಕಡೆದುವವಂ-
ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್ 38
ದೊರೆಕೊಳೆ ಸಮಾಧಿಮರಣಂ
ಚರಣಾಯುಧಯುಗಳಮಳೆದು ಕುಸುಮಾವಳಿಯೆಂ
ಬರಸಿಯ ಬಸಿರೊಳ್ ಬಂದವು
ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್ 39
_____
37. ತಮಗುಂಟಾದ ಆನಂದಬಾಷ್ಪವು ಮಳೆಹನಿಯಾಗಿ ಕೆಳಕ್ಕುದುರಿತು. ಆಗ ಧರ್ಮಾನುರಾಗವೆಂಬ ಮೋಡಗಳು ಗುಡುಗಿದುವೋ ಎಂಬಂತೆ ಆ ಕೋಳಿಗಳೆರಡರ ರೆಕ್ಕೆಗಳು ಶಬ್ದ ಮಾಡಿದುವು ಮತ್ತು ಸಂತೋಷಾಧಿಕ್ಯದಿಂದ ಕಲೆದುವು. ಈ ಕೂಗು ರಾಜನ ಕಿವಿಗೆ ಬಿದ್ದಿತು. 38. ಅವನು ತನ್ನ ಸ್ವರವೇದ (ಶಬ್ದವೇದಿ) ವಿದ್ಯೆಯನ್ನು ತನ್ನ ರಾಣಿಗೆ ತೋರಿಸಿ ಮೆರೆಯಲು ಮನಸ್ಸು ಮಾಡಿದನು. ‘ದೇವಿ ನೋಡು!’ ಎಂದು ಹೇಳುತ್ತಾ ಅವನು ಒಂದು ಬಾಣವನ್ನು ಪ್ರಯೋಗಿಸಿದನು. ಆ ಬಾಣವು ಎರಡೂ ಕೋಳಿಗಳನ್ನು ಒಮ್ಮೆಲೆ ಕೊಂದಿಕ್ಕಿತು, ಎರಡಕ್ಕೂ ಆಯಸ್ಸು ಒಂದೇ ಆಗಿತ್ತೆಂಬಂತೆ. 39. ಕೋಳಿಗಳೆರಡಕ್ಕೂ, ದೊರೆತುದು ಸಮಾಧಿ ಮರಣ.58 ಹೀಗೆ ಸತ್ತು ಅವೆರಡೂ ಕುಸುಮಾವಳಿಯ ಗರ್ಭದಲ್ಲಿ ಆ ದಂಪತಿಗಳ ಪ್ರೇಮವನ್ನೇ ಅಚ್ಚೊತ್ತಿದಂತೆ ಅವಳಿಮಕ್ಕಳಾಗಿ ಜನಿಸಿದವು.