ಪುಟ:YASHODARA CHARITE.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೨

ಯಶೋಧರ ಚರಿತೆ


ಸಂಕಲ್ಪಹಿಂಸೆಯೊಂದರೊ-

ಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ

ಶಂಕತೆಯಿನಿನಿತು ದೇಹಿಗ-

ಳಂ ಕೊಂದಪೆ ನರಕದೊಳ್ ನಿವಾರಣೆವಡೆವಯ್ 70


ಎಂದನುಡಿ ನೆರೆದ ಜೀವಕ-

ದಂಬಂಗಳ್ಗಭಯವೆಂಬ ಡಂಗುರದವೊಲೊ-

ಪ್ಪಂಬಡೆಯೆ ಮಾರಿದತ್ತನೃ-

ಪಂ ಬಿಲ್ಲುಂ ಬೆರಗುಮಾದನುದ್ವೇಗಪರಂ 71


ಆ ಚಂಡಮಾರಿ ಲೋಚನ

ಗೋ ಚರತನುವಾಗಿ ಕುವರನಂ ಬಂದಿಸಿ ನೀ-

ನಾಚಾರ್ಯನೆಯೆಂದಿಂತಿರೆ

ಸೂಚಿಸಿದಳ್ ನೆರೆದ ಜಾತ್ರೆ ನೆರೆ ಕೇಳ್ವಿನೆಗಂ 72

_____

70. ಸಂಕಲ್ಪ ಹಿಂಸೆಯೊಂದರಿಂದಲೇ ನಾನು ಜನ್ಮ ಜನ್ಮಾಂತರಗಳ ಈ ದುಃಖಗಳನ್ನೆಲ್ಲ ಅನುಭವಿಸಿದೆ. ನೀನು ನಿಶ್ಚಿಂತೆಯಿಂದ ಇಷ್ಟು ಜೀವಿಗಳನ್ನು ಕೊಲ್ಲುತ್ತಾ ಇದ್ದೀಯಲ್ಲ! ನಿನಗೆ ನರಕದಿಂದ ವಿಮೋಚನೆಯುಂಟೆ?” 71. ಅಭಯರುಚಿ ಆಡಿದ ಈ ಮಾತು ಅಲ್ಲಿ ಸೇರಿದ ಜೀವಸಮುದಾಯಕ್ಕೆಲ್ಲ ಅಭಯವೀಯುವ ಡಂಗುರದಂತೆ ಗಂಭೀರವಾಗಿ ಕೇಳಿತು. ಮಾರಿದತ್ತ ರಾಜನಂತೂ ಉದ್ವೇಗಕ್ಕೆ ಗುರಿಯಾಗಿ ಬಹಳ ಬೆರಗಿನಿಂದಿದ್ದನು. 72. ಅದೇ ಸಮಯಕ್ಕೆ ಚಂಡಮಾರಿ ದೇವತೆಯೂ ಪ್ರತ್ಯಕ್ಷಳಾದಳು. ಅವಳು ಅಭಯರುಚಿಗೆ ವಂದಿಸಿ ಅವನೇ ಆಚಾರ್ಯನೆಂದು ತೋರಿಸಿಕೊಟ್ಟಳು. ಜಾತ್ರೆ ಸೇರಿದ ಜನರೆಲ್ಲ