ಪುಟ:YASHODARA CHARITE.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೩

ಟಿಪ್ಪಣಿಗಳು


ಮಾಂಸವನ್ನು ಈ ರೀತಿ ಹರಕೆಯೊಪ್ಪಿಸಿದನೋ ಎಂಬಂತೆ ಭಾಸವಾಗುತ್ತದೆ ಎಂದು ಕವಿ ಇಲ್ಲಿ ಉತ್ಪ್ರೇಕ್ಷಿಸುತ್ತಾನೆ.

18. ಚೈತ್ರದಲ್ಲಿ ಗಿಳಿಗಳು ಕೂಗುವುದೂ, ತೆಂಕಣಗಾಳಿ ಬೀಸುವುದೂ ತಾವರೆಗಳು ಅರಳುವುದೂ ಸಹಜ. ಈ ತಾವರೆಗಳು ಕೆಂಪು ಬಣ್ಣದವುಗಳಾಗಿದ್ದು ಉರಿಯುವ ಕೆಂಡಗಳಂತೆ ತೋರುತ್ತವೆ. ದೇವಿಯ ಸೇವೆಯನ್ನು ಮಾಡುವಲ್ಲಿ ಕೆಂಡದ ಮೇಲೆ ನಡೆಯುವುದೇ ಮುಂತಾದ ‘ಕೆಂಡಸೇವೆ’ಗಳು ರೂಢಿಯಲ್ಲಿವೆ. ಈ ದಕ್ಷಿಣಾನಿಲನು ತಾವರೆಗಳ ಕೊಳಗಳನ್ನು ಹಾದು ಬರುವುದನ್ನು ಕವಿ ಈ ರೀತಿ ವರ್ಣಿಸಿದ್ದಾನೆ.

18. ಕತ್ತಿಯಿಂದ ಕಡಿದುಕೊಳ್ಳುವುದು, ಬೆಂಕಿಯಲ್ಲಿ ನಲಿದಾಡುವುದು ಮುಂತಾದವು ಕರಾವಳಿಯ ದೈವಾರಾಧನೆಗಳಲ್ಲಿವೆ.

19. ಗಮನ ಪ್ರಾಯಶ್ಚಿತ್ತ-ನಡೆದುಕೊಂಡು ಹೋಗುವಾಗ ಕಣ್ಣಿಗೆ ಕಾಣದ ಪ್ರಾಣಿಗಳು ತಮ್ಮ ಕಾಲಡಿಗೆ ಬಿದ್ದು ಸತ್ತಿರಬಹುದೆಂದೂ ಈ ಹಿಂಸೆಯ ಪಾಪ ತಮ್ಮಿಂದ ತಿಳಿಯದೆ ನಡೆದಿರನಹುದಾದರೂ ಇದಕ್ಕೆ ಪ್ರಾಯಶ್ಚಿತ್ತವಾಗಿ ಉಪವಾಸವನ್ನು ಕೈಕೊಳ್ಳಬೇಕೆಂದೂ ಇದೆ. ಇದಕ್ಕೆ ಗಮನ ಪ್ರಾಯಶ್ಚಿತ್ತ ಎಂದು ಹೆಸರು.

20. ಸುದತ್ತಾಚಾರ್ಯರ ನಾಮೋಚ್ಚಾರಮಾಡಿದರೆ ಆ ವ್ಯಕ್ತಿಗೆ ಮುಂದೆ ಜನ್ಮವನ್ನು ಪಡೆದು ತಾಯಿಯ ಮೊಲೆಹಾಲನ್ನು ಕುಡಿಯುವ ಪ್ರಸಂಗವೇ ಇಲ್ಲದೆ ಮೋಕ್ಷ ಪ್ರಾಪ್ತಿಯಾಗುವುದು ಎಂದು ಒಂದರ್ಥವಾದರೆ, ಎಳೆಯಮಗು ಸಹ ಸುದತ್ತಾಚಾರ್ಯರ ಹೆಸರು ಹೇಳಿದರೆ ಆ ನಾಮೋಚ್ಚಾರದ ಸವಿಯಿಂದಾಗಿ ತಾಯಿಯ ಮೊಲೆಹಾಲನ್ನೂ ಬಯಸಲಾರದು ಎಂಬುದು ಇನ್ನೊಂದರ್ಥ.

21. ಪರೀಷಹ-ತಾನಾಗಿಯೇ ಬರುವ ಇಪ್ಪತ್ತೆರಡು ಬಗೆಯ ಕ್ಲೇಶಗಳು. ಅವುಗಳು ಈ ಕೆಳಗೆ ಕೊಟ್ಟವುಗಳು: ಶೀತ, ಉಷ್ಣ, ಕ್ಷುತ್, ಪಿಸಾಸೆ, ಅರತಿ, ಕ್ರಿಮಿಬಾಧೆ, ನಗ್ನತ್ವ, ಚರ್ಯೆ, ನಿಷಧ್ಯಾ, ಸ್ತ್ರೀ, ಶಯ್ಯಾರೋಗ, ಅಲಾಭ, ಯಾಚ್ನಾ, ಆಕ್ರೋಶ, ವಧೆ, ತೃಣ, ಸ್ಪರ್ಶ, ಮಲ, ಪ್ರಜ್ಞೆ, ತಿರಸ್ಕಾರ, ಪುರಸ್ಕಾರ, ಅಜ್ಞಾನ.

22. ಕೋಡು ಬರುವುದು ಪ್ರಾಣಿಗಳು ಬೆಳೆದಾಗ. ಹಾಗೆಯೇ ಕೋಡು ಬರು ಎಂಬುದಕ್ಕೆ ಮಹತ್ವವುಂಟಾಗು, ಎಂಬುದು ಭಾವಾರ್ಥ.

23. ಹೊಲದಲ್ಲಿ ಆಡಿದಂತೆ ಒಮ್ಮೆ ಸಂತೋಷವು ಕಾಣುವುದು, ಒಮ್ಮೊಮ್ಮೆ ಮದ್ದು ಸೇವಿಸಿದಂತೆ ಕಹಿಯಾಗುವುದೂ ಪ್ರತ್ಯಕ್ಷವಾಗಿದೆಯೆಂದು ಅಭಿಪ್ರಾಯ.

24. ಮೂರಿ ಎಂಬುದಕ್ಕೆ ಗೂಳಿ, ಕೋಣ, ಬಾಯಿ ಎಂದೂ, ಕತ್ತಿಯೆಂದೂ