ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯

ಯಶೋಧರ ಚರಿತೆ


ಮುನಿಸಮುದಾಯಸಮೇತಂ

ವಿನೇಯಜನ ವನಜವನದಿವಾಕರನಂತಾ

ಮುನಿಪನುಪವಾಸಮಂ ಪ-

ರ್ವ ನಿಮಿತ್ತಂ ಕಳೆದು ಬರುಕ ಬಾಲಕಯುಗಮಂ 46


ಚರಿಗೆಗೆ ಬೀಳ್ಕೊಡೆ ಗುರುಗಳ

ಚರಣಕ್ಕಾ ಯುಗಳಮೆರಗಿ ಪೊರಮಟ್ಟಾಗಳ್

ತರುಣ ವನಹರಿಣಯುಗಮಂ

ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ 47


ಅಭಯರುಚಿಯಭಯಮತಿಯೆಂ-

ಬುಭಯಮನಾ ಪಾಪಕರ್ಮನುಯ್ವೆಡೆಯೊಳ್ ಮ

ತ್ತಭಯರುಚಿ ತಂಗೆಗೆಂದಪ

ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್ 48

_____

45. ಅವರ ಗುಣ, ಅವರ ಮನೋನಿಗ್ರಹ, ಅವರ ತಪಶ್ಚರಣ ಎಂಬವುಗಳು ಅಂತಿಂಥ ಸಾಮನ್ಯರಿಗೆ ಅಳವಡುವಂತಹವಲ್ಲ. ಅವರ ಹೆಸರನ್ನು ಹೇಳಿದರೆ ಸಾಕು, ಆ ನಾಲಗೆಗೆ ತಾಯಿಯ ಮೊಲೆಹಾಲು ಕೂಡ ಸವಿಯಾಗಲಾರದು.20. 46. ತಾವರೆಗಳನ್ನರಸುವ ಸೂರ್ಯನಂತೆ ಸುದತ್ತಾಚಾರ್ಯರು ಶಿಷ್ಯವೃಂದದ ವಿಕಾಸಕ್ಕೆ ಕಾರಣವಾಗಿದ್ದರು. ಅವರು ಈ ಮುನಿಗಳ ಸಮುದಾಯವನ್ನು ಕೂಡಿಕೊಂಡು, ವ್ರತದ ಅಂಗವಾಗಿ ಉಪವಾಸವನ್ನು ಮಾಡಿದರು. ಆನಂತರ ಇಬ್ಬರು ಮಕ್ಕಳನ್ನು ಕರೆದು ಭಿಕ್ಷೆಯೆತ್ತಿ ತರುವಂತೆ ಕಳುಹಿಸಿಕೊಟ್ಟರು. 47. ಆ ಬಾಲಕರು ಗುರುಗಳ ಪಾದಕ್ಕೆ ನಮಸ್ಕರಿಸಿ ಅಲ್ಲಿಂದ ಹೊರಟರು. ಅಷ್ಟರಲ್ಲೇ ಎರಡು ಎಳೆಯ ಜಿಂಕೆ ಮರಿಗಳನ್ನು ಹುಲಿಯು ಹಿಡಿಯುವಂತೆ, ಅವರನ್ನು ಚಂಡಕರ್ಮನು ಹಿಡಿದನು. 48. ಅಭಯರುಚಿ ಮತ್ತು ಅಭಯಮತಿ ಎಂಬ