ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪

ಯಶೋಧರ ಚರಿತೆ


ಕಿತ್ತ ಕರವಾಳ್ಗ ಮೆನಗಂ

ಮೃತ್ಯುವಿನಂತಿರ್ದ ಮಾರಿಗಂ ಬೆದರದೆ ನಿಂ-

ದರ್ತಿಯನೆ ನುಡಿದರಿವರ ನೆ

ಗುಳ್ತೆ ಕರಂ ಪಿರಿದು ಧೀರರಕಟ ಕುಮಾರರ್ 61


ಜವಳಿವೆರೆ ಮನುಜರೂಪದಿ-

ನವನಿಯೊಳೊಗೆದಂತೆ ಕಾಂತಿ ಮೆರೆದಪುದಿಂದಿಂ-

ತಿವರ್ಗಳ ಚೆಲ್ವಿಕೆ ಕಣ್ಗಳ

ತವರಾಜಮನಿಂದು ಕಂಡೆನೀ ಬಾಲಕರಂ 62


ಆವ ಕುಲಮಾರ ತನಯರಿ

ದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ-

ಕ್ಷಾವೃತ್ತಿಯೆಂದು ಬೆಸಗೊಳೆ

ಭೂವರ ಕೇಳೆಂದು ಕುವರನಂದಿಂತೆಂದಂ 63

_____

ಪಾಲಿಸು!” ಎಂದು ಹರಸಿದನು. 60. ಈ ಆಶೀರ್ವಚನವನ್ನು ಕೇಳುವುದೇ ತಡ, ರಾಜನು ಕಡಿದಿಕ್ಕದೆ “ಇದೇನು! ಈ ಮೊದಲೆಲ್ಲ ಈ ದೇವಾಲಯದ ಒಳಗೆ ಹೊಕ್ಕ ಎಲ್ಲರಿಗೂ ಜೀವವೇ ಹೋದಂತಾಗುತ್ತಿತ್ತು. ಈ ರೀತಿ ಅಂಜದಿರುವವರನ್ನು ನಾನಿದುವರೆಗೂ ಕಂಡಿಲ್ಲ! 61. ಹಿರಿದ ಖಡ್ಗಕ್ಕೂ, ನಿಂತ ನನಗೂ, ಮೃತ್ಯು ಸ್ವರೂಪಿಯಾದ ಮಾರಿಗೂ ಒಂದಿಷ್ಟೂ ಹೆದರದೆ, ಧೈರ್ಯದಿಂದ ನಿಂತುಕೊಂಡು ಪ್ರೀತಿಯಮಾತನ್ನೇ ಇವರು ಆಡಿದ್ದಾರೆ. ಇವರ ನಡತೆ ಬಹಳ ಹಿರಿದು! ನಿಜವಾಗಿಯೂ ಈ ಕುಮಾರರು ಧೀರರೇ ಸರಿ! 62. ಜೋಡಿ ಚಂದ್ರರು ಮನುಷ್ಯ ರೂಪವನ್ನು ಧರಿಸಿ ಈ ಭೂಲೋಕದಲ್ಲಿ ಹುಟ್ಟಿಬಂದಂತೆ ಇವರ ಕಾಂತಿ ಮೆರೆಯುತ್ತಾ ಇದೆ. ನಿಜವಾಗಿಯೂ ಇವರ ಸೌಂದರ್ಯವು ಕಣ್ಣಿಗೆ ತವರಾಜದಂತೆ ಮಧುರವಾಗಿದೆ. ಈ ಬಾಲಕರನ್ನು ಇಂದು ನಾನು ಕಂಡೆನು. 63. ಮಕ್ಕಳೇ, ನಿಮ್ಮ ಕುಲವಾವುದು? ಯಾರ ಮಕ್ಕಳು ನೀವು ? ಎಲ್ಲಿಂದ ಬಂದಿರಿ? ಈ ಎಳೆಯ ವಯಸ್ಸಿನಲ್ಲಿ ಈ ಭಿಕ್ಷಾ ವೃತ್ತಿಯನ್ನು ಕೈಕೊಂಡುದೇಕೆ ?” ಎಂದು ಮಾರಿದತ್ತನು ಕೇಳಿದನು.