ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೯

ಯಶೋಧರ ಚರಿತೆ


ಒಲಿಸಿದ ಪೆಣ್ ಪೆರರೊಳ್ ಸಂ

ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ

ಸಲಿಸಿ ಸಲೆ ನೆರೆವ ಮುಕ್ತಿಯ

ನೊಲಿಸುವೆನಿನ್ನೊಲ್ಲೆನುಳಿದ ಪೆಂಡಿರ ನಣ್ಪಂ 64


ಎಂದಿತು ಬಹುವಿಕಲ್ಪದ

ದಂದುಗದೊಳೆ ಬೆಳಗುಮಾಡಿ ಮೆಯ್ಮುರಿದೆರ್ದಂ

ಬಂದು ತೊಡೆವೊಯ್ದು ಭೋಧಿಸಿ

ದಂದದಿನೆಸಗಿತ್ತು ಸುಪ್ರಭಾತಾತೋದ್ಯಂ 65


ಕೃತಕೃತ್ಯದಾನನಾವೀ-

ಕ್ಷಿತಿಘೃತನಾಸ್ಪೃಷ್ಟಕಪಿಳನೊಯ್ಯನೆ ಸಾರ್ದಂ

ಕತಿಪಯ ಪರಿಚಿಪರಿಜನ

ಚತುರವಚಃ ಪ್ರಚಯರು ಚಿಯನರಸಿಯನರಸಂ 66

_____

64. ನಾನು ಒಲಿಸಿಕೊಂಡ ಹೆಂಡತಿ ಚಂಚಲೆಯಾಗಿ ಅನ್ಯಾಸಕ್ತಳಾದಳೆಂದಮೇಲೆ, ಏನು ಸುಖ? ಇದರ ಬದಲಾಗಿ ಮುಕ್ತಿಯನ್ನೇ ಒಲಿಸಿಕೊಂಡರೆ ನನಗೆ ಪರಮಸುಖದ ಸಂಪತ್ತು ದೊರೆಯುತ್ತದೆ; ಆ ಮುಕ್ತಿಯ ಒಲವೂ ನನ್ನ ಮೇಲೆ ಸ್ಥಿರವಾಗುತ್ತದೆ. ಹೀಗೆಂದಾದಮೇಲೆ ಉಳಿದ ಸ್ತ್ರೀಯರ ಯಾವ ಬಗೆಯ ನಂಟೂ ನನಗೆ ಬೇಕಾಗಿಲ್ಲ”. 65. ಎಂದೆಲ್ಲ ಹಲವು ಬಗೆಯಾಗಿ ವಿಚಾರ ಮಾಡಿದ ಯಶೋಧರನು ಅದರಲ್ಲೆ ತೊಳಲಾಡಿ ಕಣ್ಣಲ್ಲೆ ಬೆಳಗುಮಾಡಿದನು. ಸುಪ್ರಭಾತದ ಮಂಗಳವಾದ್ಯಗಳು ಮೊಳಗಿದವು. ಆ ಧ್ವನಿ ಅವನನ್ನು ತೊಡೆ ತಟ್ಟಿ ಎಬ್ಬಿಸುವಂತಿತ್ತು. 66. ಅವನು ಮೆಯ್ಮುರಿದು ಎದ್ದನು. ನಿತ್ಯದಂತೆ ದಾನವನ್ನಿತ್ತನು. ತುಪ್ಪದಲ್ಲಿ ತನ್ನ ಮುಖವನ್ನು ನೋಡಿಕೊಂಡನು. ಕಪಿಲೆ ಹಸುವನ್ನು ಮೆಯ್ಮುಟ್ಟಿ ಮಂಬರಿದನು; ರಾಣಿಯ ಸಮೀಪವನ್ನು ಸೇರಿದನು. ಅವಳು ಕೆಲವು ಮಂದಿ ಪರಿಚಿತ ಸೇವಕ ಜನರ ಚತುರವಚನಗಳನ್ನು ಕೇಳುತ್ತಾ ಮೆಚ್ಚುಗೆಯನ್ನು ಪ್ರಕಟಿಸುತ್ತಿದ್ದಳು.