೬೭
ಯಶೋಧರ ಚರಿತೆ
ಎಂದೊಡೆ ಮುನಿದಂಬಿಕೆಯಿಂ
ತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆ
ಯ್ತಂದಳ್ ನಾಡೆ ನೃಪೇಂದ್ರನ
ಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್ 16
ಪರಿಹರಿಪೆಯೆಮ್ಮ ನುಡಿಯಂ
ಗುರುವಚನಮಲಂಘನೀಯಮೆನ್ನದೆ ನೀನಾ
ದರದಿಂ ಕೈಕೊಳ್ ಧರ್ಮದೊ
ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಳ್ 17
ಇವು ಧರ್ಮಮೆಂದು ಬಗೆವೊಡ
ಮವಿವೇಕದೆ ಶಾಂತಿಮಾಡೆ ಭೇತಾಳಂ ಮೂ
ಡುವ ತೆರದೆ ಹಿಂಸೆಯಿಂ ಮೂ
ಡುವ ಮುಂತಣ ಕೇಡನೆಂತು ಕಳೆವೆಂ ಬಳೆಯಂ 18
_____
ಸಮಾಧಾನ ಹೇಳಿದನು ಯಶೋಧರ. 16. ಈ ಮಾತನ್ನು ಕೇಳಿದೊಡನೆಯೇ ತಾಯಿಯ ಮುನಿಸು ಮಸಗಿತು. ಆದರೂ ಅವಳು ಮೋಹದಿಂದಲೂ ಸಲುಗೆಯಿಂದಲೂ ಯಶೋಧರನ ಬಳಿಗೆ ಬಂದು ಹೀಗೆ ನುಡಿದಳು, ಅವನ ಮುಂದಿನ ಸದ್ಗತಿಯ ದಾರಿಗೆ ಪ್ರತಿಬಂಧಕ ಹಾಕುವಂತೆ. 17. “ನಮ್ಮ ಮಾತನ್ನು ನಿರಾಕರಿಸುವೆಯಾ? ಗುರು ವಚನವು ಅಲಂಘನೀಯವೆನ್ನುವುದೂ ಗೊತ್ತಿಲ್ಲವೆ ನಿನಗೆ? ನನ್ನ ಮಾತನ್ನು ಆದರದಿಂದ ಅಂಗೀಕರಿಸು. ಧರ್ಮದಿಂದಲೇ ಶಾಂತಿ ಎಂಬುದನ್ನು ಅರಸರು ಅನುಸರಿಸುವುದಿಲ್ಲವೆ? ಹೇಳು.” ಯಶೋಧರನು ನುಡಿದನು. 18. “ಇವು ಧರ್ಮ ಎಂದು ಬಗೆದರೂ ಅವಿವೇಕದಿಂದ ಇಂತಹ ಶಾಂತಿಯನ್ನು ಮಾಡಿದರೆ ಸರಿಯಾದೀತೆ? ಹಿಂಸೆಯನ್ನು ಮಾಡಿದರೆ ಮುಂದೆ ಬೇತಾಳಾಕಾರದಿಂದ ಕೇಡೇ ಮೂಡಿಬಂದೀತು! ಅದನ್ನು ಆಮೇಲೆ