ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬

ಯಶೋಧರ ಚರಿತೆ


ಮತ್ತೆ ನೃಪಂ ನಾಯ್ ತಿಂದ ದು

ನೃತ್ಯಚಮತ್ಕಾರನಂ ಮಯೂರನನೆಂದಾ

ನೆತ್ತದ ಮಣೆಯಿಂದಿರೆದೊಡೆ

ನೆತ್ತಿ ಪಿಸುಳ್ದತ್ತು ಸತ್ತುವಂತಾ ಎರಡುಂ 43


ಮರುಗಿದನಿಳೇಶನಾ ಎರ-

ಡರ ಸಾವಿಂ ತಂದೆ ತಾಯ್ವಿರಳೆದಂತಿರೆ ಕ

ಣ್ಣರೆಯದೊಡಂ ಕರುಳರಿಯದೆ

ಮರುಗಿಸದಿರ್ಪುದೆ ಭವಾಂತರವ್ಯಾಮೋಹಂ 44


ಆ ವಿಂಧ್ಯನಗರದೊಳಾ ನಾಯ್

ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್

ಪಾವಂ ಪಗೆಮಿಗೆ ತಿಂದುದು ಬಲ್

ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ 45

_____

43. ಚಮತ್ಕಾರದ ನರ್ತನವನ್ನು ಮಾಡುವ ಮಯೂರವನ್ನು ಈ ನಾಯಿ ತಿಂದಿತು ಎಂದು ತಡೆಯಲಾರದ ಸಿಟ್ಟು ಬಂತು ರಾಜನಿಗೆ. ಅವನು ಆ ನೆತ್ತದ ಮಣೆಯಿಂದಲೇ ನಾಯಿಯ ತಲೆಯನ್ನು ಬಡಿದನು. ಅದರ ನೆತ್ತಿ ಒಡೆದು ಹಿಸಿಯಿತು. ಅದೂ ಸತ್ತಿತು. 44. ನವಿಲೂ ನಾಯಿಯೂ ಸತ್ತುದನ್ನು ಕಂಡಾಗ ರಾಜನಿಗೆ ತಂದೆ ತಾಯಿಗಳು ತೀರಿಕೊಂಡರೆ ಆಗುವಷ್ಟು ದುಃಖವುಂಟಾಯಿತು. ಕಣ್ಣು ಅರಿಯದಿದ್ದರೂ ಕರುಳು ಅರಿಯುವುದಿಲ್ಲವೆ? ಜನ್ಮಾಂತರದ ವ್ಯಾಮೋಹವು ಈ ರೀತಿ ಮರುಗಿಸದೆ ಇರುವುದಿಲ್ಲ. 45. ಸತ್ತ ನಾಯಿ ವಿಂಧ್ಯ ಪರ್ವತದಲ್ಲಿ ಹಾವಾಗಿ ಹುಟ್ಟಿಕೊಂಡಿತು. ನವಿಲು ಕೂಡ ಅಲ್ಲಿಯೇ ಮುಳ್ಳು ಹಂದಿಯಾಗಿ ಜನ್ಮಪಡೆಯಿತು. ಈ ಮುಳ್ಳು ಹಂದಿ ಹೆಚ್ಚಿದ ಹಗೆಯಿಂದ ಹಾವನ್ನು ಕೊಂದು ತಿಂದಿತು. ಎತ್ತು ಹುಲ್ಲ ಹಗ್ಗವನ್ನು ಮೇಯುವುದು ಇದೇ ರೀತಿ.