ವಿಷಯಕ್ಕೆ ಹೋಗು

ಪುಟ:YASHODARA CHARITE.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭

ಯಶೋಧರ ಚರಿತೆ


ಉರಗಿಯನೆಯ್ ಪಡಿದೊಡದಂ

ಕುರಂಗರಿಪು ಬೆಕ್ಕು ಕೊಕ್ಕನಂ ತವೆ ಪಿಡಿವಂ

ತಿರೆ ಪಿಡಿದುದು ಪರಚಿಂತಾ

ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ 46


ಮೀನಾದುದೆಯ್ಯಮೃಗಮು-

ಜ್ಜೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್

ತಾನಲ್ಲಿ ಮೊಸಳೆಯಾದ

ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ 47


ನದಿ ಕಣ್ದೆರೆದಂತೆ ಪೊಳಂ

ಕಿದ ಮೀನಂ ಮೊಸಳೆ ಪಾಯೆ ನರಪತಿಯ ವಿನೋ-

ದದ ಗುಜ್ಜ ಸಿಕ್ಕೆ ಪಿಡಿದ-

ತ್ತದನಧಿಪತಿ ಜಾಲಗಾರರಿಂ ತೆಗೆಯಿಸಿದಂ 48

_____

46. ಹಾವನ್ನೆನೋ ಮುಳ್ಳು ಹಂದಿ ನುಂಗಿತು. ಅದನ್ನು ಮಾತ್ರ ಹುಲಿ ಹಿಡಿಯಿತು. ಬೆಕ್ಕು ಕೊಕ್ಕರೆಯನ್ನು ಹಿಡಿಯುವುದೂ ಹೀಗೆಯೆ. ಪರರಿಗೆ ದುಃಖವುಂಟುಮಾಡುವವನನ್ನ ವಿಧಿ ತನ್ನ ಬಳಿಗೆ ಕರೆಯುವುದು ಸಹಜವೇ ಆಗಿದೆ. 47. ಮುಳ್ಳು ಹಂದಿ ಉಜ್ಜಯಿನಿಯಲ್ಲಿ ಶೋಭಿಸುತ್ತಿದ್ದ ಸಿಂಪಾನದಿಯಲ್ಲಿ ಮಿನಾಗಿ ಹುಟ್ಟಿತು. ಹಾವಾಗಿದ್ದುದು ಅದೇ ಹೊಳೆಯಲ್ಲಿ ಮೊಸಳೆಯ ಜನ್ಮವನ್ನು ಪಡೆದು ಬೆಳೆಯುತ್ತ ಇತ್ತು. 48. ಒಂದಾನೊಂದು ದಿನ ನದಿ ಕಣ್ಣು ಮಿಟುಕಿಸಿತೆಂಬಂತೆ ಆ ಮೀನು ಪಳಕ್ಕನೆ ಮೇಲೆ ಚಿಮ್ಮಿತು. ಅದನ್ನು ಕಂಡು ಮೊಸಳೆ ಅದರ ಕಡೆಗೆ ನುಗ್ಗಿತು. ಆಗ ಅಲ್ಲಿದ್ದ ಯಶೋಮತಿಯ ವಿದೂಷಕನಾದ ಕುಳ್ಳನು ಅದಕ್ಕೆ ಸಿಕ್ಕಿಕೊಂಡನು. ರಾಜನು ಬಲೆಗಾರರಿಂದ ಆ ಮೊಸಳೆಯನ್ನು