ಪುಟ:Yugaantara - Gokaak.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ ಕಾಂತಿಚಂದ್ರ: ( ನಗುತ್ತ ) ಹೌದು, ಮೃಣಾಲಿನಿ ! ನಾವು ಗಾಡಿಯಿಂದ ಇಳಿದಾಗ ನೀನೆಲ್ಲಿಯೂ ಕಾಣಲಿಲ್ಲ. ಮಜದೂರ ಸಂಘವೋ ಕಾಮಗಾರ ಮಂಡಳವೋ ನಿನ್ನನ್ನು ತಡೆದಿರಬೇಕೆಂದು ನಮಗೆನಿಸಿತು. ಇಲ್ಲಿ ದಾರಿ ನೋಡುತ್ತ ಕುಳಿತೆವು. ಹೊರಡೋಣ. ಅದಕ್ಕೇನು ? ಮೊದಲು ಸ್ವಲ್ಪ ಚಹ ತೆಗೆದುಕೊ! - { ಚಹದ ಕಪ್ಪನ್ನು ಮುಂದೆ ಮಾಡುತ್ತಾನೆ. ] ಮೃಣಾಲಿನಿ : (ಇಸಿದುಕೊಂಡು ಅತ್ತಿತ್ತ ನೋಡುತ್ತ) ಎಲ್ಲಿ ? ನಾನು ಚಹ ತೆಗೆದುಕೊಳ್ಳಬೇಕಾದರೆ ಮೊದಲು ನಿಂಬೆಯ ಹಣ್ಣಿನ ಹೊಳಕೆ ಬೇಕು. ಇಲ್ಲಿ ಕಾಣುವದಿಲ್ಲ ? ರೋಹಿಣಿ : ಹೌದು, ಮೃಣಾಲಿನಿ ! ನೀನು ಹಾಲುಮತದವಳಲ್ಲ ಎಂಬುದು ನನಗೆ ಗೊತ್ತು. ಅದಕ್ಕೇನಂತೆ ? ತರಿಸೋಣ ! ಬಾಯ್ ! ಲೆಮನ್ ಸ್ಪಿಟ್ ಲಾನಾ ! ಬಾ:ಮ್ : ಜೀ ! [ ಮಗ್ಗುಲಿಗೆ ನಿಂತಿದ್ದ ರೇಲ್ವೆ ವಿಶ್ರಾಂತಿಗೃಹದ ( ಹುಡುಗ' ತರಲು ಹೋಗುತ್ತಾನೆ. ] ರುಕ್ಕಿಣಿದೇವಿ : ಇವರು ಯಾರು ? ಕಾಂತಿಚಂದ್ರ: ಇವರು ನಮ್ಮ ಆಪ್ತರೊಬ್ಬರ ಮಗಳು. ನಮ್ಮನ್ನು ಕರೆ ಯಲು ನಿಲ್ಮನೆಗೆ ಬಂದಿದಾರೆ, (ನಸುನಕ್ಕು) ಇವರು ಸನತಾವಾದಿಗಳು. ಬಿ. ಎ. ಆಗಿ ಈಗ ಕೂಲಿಕಾರರ ಬೆನ್ನು ಕಟ್ಟಿದ್ದಾರೆ. ಇವರು ಉಡುವ ಸೀರೆ-ಕೆಂಪು ಸೀರೆ; ರಷ್ಯಾದ ಬಣ್ಣದ್ದು. ಇವರು ಕುಡಿಯವ ಚಹ, ರಷ್ಯನ್ ಚಹ ! ಅವರು ಸೀರೆಗೆ ಏನ್ ಮಾಡಿಕೊಂಡಿದ್ದ ಚಿನ್ನವನ್ನು ನೋಡಿ,-ರಷ್ಯಾದ ಕುಡಗೋಲು-ಸುತ್ತಿಗೆಗಳು ಅಲ್ಲಿ ಸದಾ ಮೆರೆಯುತಿರುತ್ತವೆ. ಮೃಣಾಲಿನಿ : ( ನಸು ಕೋಪದಿಂದ ) ಕಾಂತಿಚಂದ್! ಈ ನಿಮ್ಮ ಬಂಡವಳ ಶಾಹಿ ವ್ಯಂಗ್ಯವನ್ನು ಸಾಕುಮಾಡಿರಿ ! ಇಂದಿಲ್ಲ ನಾಳೆ ಅದರ ಪೊಳ್ಳುತನ ತಾನೇ ತಿಳಿಯುತ್ತದೆ ! { ಬಾ: ಯಮ್ ತಂದಿದ್ದ ನಿಂಬೆ ಹೋಳಿಕೆಯನ್ನು ಚಹದಲ್ಲಿ ಹಿಂಡಿ ಕುಡಿಯುತ್ತಾಳೆ. ]