ಪುಟ:Yugaantara - Gokaak.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯಂತರ ಕಿಶನ್ ಕಿಶೋರ: ಕಾ: ಮೋಡ್ ಮೃಣಾಲಿನಿದೇವಿಯವರು ... .... ಮೃಣಾಲಿನಿ : ( ನಡುವೆ ಬಾಯಿ ಹಾಕಿ ) ದೇವಿ-ಗೀವಿಯೆಂದು ನೀವು ನನಗೆ ಮೇಲಿನ ವರ್ಗದ ಉಪನಾಮಗಳನ್ನು ಕೊಡಬೇಡಿರಿ ! ಕಾ:ಮೈಡ್ ಮೃಣಾಲಿನಿಯೆಂದರೆ ಸಾಕು. ಇವರು ಯಾರು, ಕಾಂತಿಚಂದ್ರಜಿ ? ನನ್ನ ಪರಿಚಯ ಮಾಡಿಕೊಟ್ಟು ಇವರನ್ನು ಹಾಗೆಯೇ ಮುಸುಕು ತೆರೆಯದೆ ಕೂಡಿಸಿದ್ದೀರಲ್ಲ ? ಕಾಂತಿಚಂದ್ರ : ( ತುಸು ನಕ್ಕು ) ಹೌದು ! ನಾನು ಮೊದಲೇ ಹೇಳಬೇಕಿತ್ತು. ಇವರು ಕಿಶನ್ ಕಿಶೋರಜೀಯವರು. ದಿಲ್ಲಿಯಲ್ಲಿಯ ಕುಬೇರಪುತ್ರರು. ಅವರು ಕಿಶೋರಜೀಯವರ ಪತ್ನಿ , ರುಕ್ಕಿಣಿದೇವಿಯವರು. ( ಇಬ್ಬರ ನಮಸ್ಕರಿಸುತ್ತಾರೆ.) ಮೃಣಾಲಿನಿ : ಅಡ್ಡಿ ಇಲ್ಲ! ಒಂದೇ ಮಾದರಿಯ ಪುಚ್ಚದ ಹಕ್ಕಿಗಳು ನೀವು. ಅಂತೇ ಇಲ್ಲಿ ಕೂಡಿದ್ದೀರಿ ! ಕಿಶನ್ ಕಿಶೋರ : ನಾನಂತೂ ಬಂಡುವಳಗಾರ. ಆದರೆ ಕಾಂತಿಚಂದ್ರರು - ಗಾಂಧಿಟೊಪ್ಪಿಗೆ ಹಾಕಿದ್ದಾರಲ್ಲ ? ಅವರೂ ನಾನೂ ಹೇಗೆ ಒಂದಾದೇವು ? ಮೃಣಾಲಿನಿ : (ತಿರಸ್ಕಾರದಿಂದ ಗಾಂಧಿಟೊಪ್ಪಿಗೆಯೂ ಬಂಡವಳಶಾಹಿಯ ಚಿನ್ನ, ದಾಸ್ಯದಲ್ಲಿದ್ದು ವಿಮುಕ್ತವಾಗಲಿದ್ದ ಬಂಡುವಾಳದ ಚಿನ್ಹವೆಂಬುದಿಷ್ಟೇ ಅದರ ವೈಶಿಷ್ಟ! ಕಾಂತಿಚಂದ್ರ : ( ನಕ್ಕು) ಹೌದು, ಕಿಶನ್ ಕಿಶೋರಜೀ ! ಮೃಣಾಲಿನಿ ಹೇಳುತ್ತಾಳೆ. ಒಂದಿಲ್ಲೊಂದು ದಿನ ಈ ಮಧ್ಯಪಥವನ್ನು ಬಿಟ್ಟು ನಾನೂ ಬಂಡವಾಳದ ಬಂಟ ಇಲ್ಲವೆ ಸಮತಾವಾದಿಯಾಗುವೆನೆಂದು ! ಕಿಶನ್ ಕಿಶೋರ : ಇನ್ನೂ ಹೀಗೆಯೇ ಕೆಲವು ವರ್ಷ ಕಾ:ಮೈಡ್ ಮೃಣಾಲಿನಿಯವರ ಸಹವಾಸದಲ್ಲಿ ನೀವಿದ್ದರೆ, ಅದರಲ್ಲಿ ಅಸಂಭವನೀಯ ವಾದುದೇನೂ ಇಲ್ಲ. ಅವರಲ್ಲಿ ನಿಮ್ಮನ್ನು ಮತಾಂತರಿಸಬಲ್ಲ ಸಾಮರ್ಥ್ಯ ಇದೆ ! [ ಎಲ್ಲರೂ ನಗುತ್ತಾರೆ. ಮೃಣಾಲಿನಿಯು ಕೋಪವನ್ನು ಸೂಚಿಸಿ ಸುಮ್ಮನೆ ಚಹ ಕುಡಿಯುತ್ತಾಳೆ.)