ಪುಟ:Yugaantara - Gokaak.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ ಕಾಂತಿಚಂದ್ರ: ಇನ್ನೊಂದು ಮಾತು, ಈಗ ತಾವು ದಿಲ್ಲಿಯಿಂದ ದೂರ ವಾಗುತ್ತೀರಿ. ತಮ್ಮ ಅನುಭವದ ಸಲಹೆಯನ್ನು ನಾನು ಪಡೆಯ ಬಹುದೆ ? ಕಿಶನ್‌ಕಿಶೋರ : ಓಹೋ, ಅವಶ್ಯವಾಗಿ, ಆದರೆ ತಮ್ಮ ಮನಸ್ಸನ್ನು ನಾನು ಕೆಡಿಸುವದು ಬೇಡ. ನನ್ನ ಮಾತಿನ ಸತ್ಯತೆಯನ್ನು ತಾವೇ ಸ್ವತಃ ಮನಗಾಣಬೇಕು. ದಾರಾಗಂಜದ ಹತ್ತಿರದಲ್ಲಿರುವ ಅನಾಥಾಶ್ರಮದ ಹೆಸರನ್ನು ತಾವು ಕೇಳಿದ್ದೀರಾ ? ರುಕ್ಷ್ಮಿಣಿದೇವಿ : ನಾವೇ ಅದನ್ನು ಸ್ಥಾಪಿಸಿ ಸಂವರ್ಧಿಸಿದೆವು. ಇವರೇ ಇಲ್ಲಿಯ ವರೆಗೆ ಅದರ ಅಧ್ಯಕ್ಷರಾಗಿದ್ದರು. ಈ ಕಾಂತಿಚಂದ್ರ : ಓಹೋ ! ಕೇಳದೆ ಏನು ? ಈಗ ಅದರ ಅಧ್ಯಕ್ಷರು ಯಾರು? ಕಿಶನ್ ಕಿಶೋರ : ಬನಸಿಲಾಲರೆಂಬ ಸೇಠರು. ಸಂಸ್ಥೆಗೊಂದು ಟ್ರಸಿದೆ. ಈ ಸೇಠರ ಬಗ್ಗೆ ಮಾತ್ರ ತಾವು ಜಾಗರೂಕರಾಗಿರಬೇಕು. ರೋಹಿಣಿದೇವಿ : ( ಉತ್ಸುಕತೆಯಿಂದ ) ಅದೇಕೆ ? ಅವರ ವಿಷಯವೇನು ? ರುಕ್ಷ್ಮಿಣಿದೇವಿ : ಅರ್ಧ ಅವರಿಂದ ದಿಲ್ಲಿಯಲ್ಲಿ ನಾವು ನೆಲೆಗೆಟ್ಟೆವು. ಅವರೇ ಇವರ ಸಾರ್ವಜನಿಕ ಜೀವನದಲ್ಲಿ ವಿಷ ಬೆರಸಿದರು. ಕಿಶನ್‌ಕಿಶೋರ : ಸೇಠ ಬನಸಿಲಾಲರು ವ್ಯವಹಾರನಿಪುಣರು. ದೇಶಭಕ್ತ ರೆಂದು ಜನತೆಯ ಮುಂದೆ ನಿಂತವರು. ಆದರೆ ದೇಶಸೇವೆ, ಸಮಾಜ ಸೇವೆ-ಎಲ್ಲವೂ ಅವರ ಸ್ವಂತದ ಸೇವೆಗೆ ಮಾತ್ರ ಸಾಧನಗಳು ! ಅವರಿಗೆ ತಮ್ಮ ಬೇಳೆಯೊಂದು ಬೇಯ್ದ ರಾಯಿತು. ಯಾರ ಪಾತ್ರೆಯಾದರೂ ಸರಿಯೆ ! ಮೃಣಾಲಿನಿ : (ಏಳು) ಸರಿ. ಇನ್ನು ಈ ಹರಟೆಗೆ ಕೊನೆಯೇ ಇಲ್ಲ ! ರೋಹಿಣಿಬೆನ್ ! ನಡೆಯಿರಿ ಇನ್ನು ಹೋಗೋಣ. ಮುಂದೆ ನನಗಿನ್ನೂ ನೂರು ಕೆಲಸ ಕಾದಿವೆ. ರೋಹಿಣಿದೇವಿ : ಮೃಣಾಲಿನಿ ! ಇದೇನು ಅವಸರ ! ತಡೆ ... .... ರುಕ್ಕಿಣಿದೇವಿ : ( ನೊಂದುಕೊಂಡು) ತಾವು ಹೋಗಬಹುದು. ಈ ಹಾಳು ಗಾಡಿಗಳು ಯಾವಾಗಲೂ ತಡವಾಗಿಯೇ ಹೊರಡುತ್ತವೆ. ಯುದ್ಧದ ಎಲ್ಲ