ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦
ಯುಗಾಂತರ

ಕಿಶನ್ ಕಿಶೋರ : ಒಳ್ಳೇದು. ನೀನು ಮುಂದೆ ನಡೆ; ಸಾಮಾನು ಗಾಡಿಯಲ್ಲಿ ಹಾಕಿಸು. ['ಜಿ' ಎಂದು ಓಂಪ್ರಕಾಶನು ಹೋಗುತ್ತಾನೆ. ಕಾಂತಿಚಂದ್ರರ ಕಡೆಗೆ ತಿರುಗಿ ಏಳುತ್ತ] ಬರುತ್ತೆವೆ, ಕಾಂತಿಚಂದ್ರ ! ಬರುತ್ತವೆ; ರೋಹಿಣಿದೇವಿ ! ನಾನು ಬರಲೊ, ಕಾ:ಮ್ರೇಡ್ ಮೃಣಾಲಿಸಿ ? ಕಾಂತಿಚಂದ್ರ ! ಇನ್ನೊಮ್ಮೆ ನಾವು ಭಟ್ಟಿಯಾಗುವಷ್ಟರಲ್ಲಿ ಕಾ:ಮ್ರೇಡ್ ಮೃಣಾಲಿನಿಯವರಿಗೆ ಗಜರ್‌ಹಲವಾ ತಿನ್ನುವ ರೂಢಿ ಕಲಿಸಿರಿ. ಅವರ ಬಾಯಿ ತುಸು ಸಿಹಿಯಾಗಲಿ !

ಕಾಂತಿಚಂದ್ರ : ನಮಸ್ಕಾರ, ಹೋಗಿ ಬನ್ನಿರಿ. ( ಮೆಲ್ಲನೆ ಕಿಶನ್ ಕಿಶೋರರ ಹತ್ತಿರ ಬಂದು ) ಮೃಣಾಲಿನಿಯ ಮಾತನ್ನು ತಾವು ಮನಸ್ಸಿಗೆ ಹಚ್ಚಿಕೊಳ್ಳ ಬಾರದು. ಆಕೆ ಮಾತನಾಡುವದೇ ಹೀಗೆ. ಆದರೆ ಆಕೆಯ ಹೃದಯ ಶುದ್ಧವಾಗಿದೆ.

ಕಿಶನ್ ಕಿಶೋರ : ಛೇ ! ಛೇ ! ಅಷ್ಟು ನನಗೆ ತಿಳಿಯುವದಿಲ್ಲವೆ ? ಅದರ ಬಗ್ಗೆ ಅನ್ಯಥಾ ವಿಚಾರ ಬೇಡ. ಬರುತ್ತೇನೆ. ನಮಸ್ಕಾರ.

ರುಕ್ಮಿಣಿದೇವಿ : (ಬಿಗುವಿನಿಂದ ಕಾಂತಿಚಂದ್ರ ರೋಹಿಣಿದೇವಿಯನ್ನು ನೋಡುತ್ತ) ಬರುತ್ತೇನೆ, ನಮಸ್ಕಾರ !

ರೋಹಿಣಿದೇವಿ: (ತುಸು ಹತ್ತಿರ ಬಂದು ಮೆಲ್ಲನೆ) ಮೃಣಾಲಿನಿಯ ಹುಚ್ಚು ಮಾತಿಗೆ ತಾವು ನೊಂದುಕೊಳ್ಳಬಾರದು.ಆಕೆಯ ರೀತಿಯೇ ಹೀಗೆ ನನ್ನ ಮನಸ್ಸನ್ನು ಸಹ ಒಮ್ಮೊಮ್ಮೆ ಹೀಗೆಯೆ ನೋಯಿಸುತ್ತಾಳೆ.

ರುಕ್ಮಿಣಿದೇವಿ : ಛೇ ! ಆ ಹುಡುಗಿಯ ಮಾತಿಗೂ ತನಗೂ ಏನು ಸಂಬಂಧ! ಆದರೂ ಈ ಹೊಸ ಪೀಳಿಗೆ ವಿಚಿತ್ರವಾಗಿದೆ. ನಮಸ್ಕಾರ ! ಕೋಸಲೇಂದ್ರ, ನಡೆ ! ಇನ್ನು ತಡಮಾಡಿದರೆ ನೀನು ಇಲ್ಲಿಯೇ ಉಳಿಯ ಬೇಕಾದೀತು !

[ಕಿಶನ್ ಕಿಶೋರ-ರುಕ್ಮಿಣೀದೇವಿಯವರು ಹೋಗುತ್ತಾರೆ.]

ಕೋಸಲೇಂದ್ರ : (ಕಾಂತಿಚಂದ್ರ-ರೋಹಿಣಿದೇವಿಯವರನ್ನುದ್ದೇಶಿಸಿ) ಬರುತ್ತೇನೆ. ನಮಸ್ಕಾರ ! ತಾವು ಇನ್ನೂ ಕೆಲವು ದಿನ ದಿಲ್ಲಿಯಲ್ಲಿಯೇ ಇರುವಿರಷ್ಟೆ ?