ಪುಟ:Yugaantara - Gokaak.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆcಳು 0 ಕಾಂತಿಚಂದ್ರ : ಕೆಲವು ದಿನವೇಕೆ ? ಇನ್ನು ದಿಲ್ಲಿಯಲ್ಲಿಯೇ ನೆಲಸಿರುತ್ತೇವೆ ! ನಮ್ಮ ವಿಷಯವನ್ನೆಲ್ಲ ಕಿಶನ್ ಕಿಶೋರರು ಹಿಂದಿನಿಂದ ತಮಗೆ ತಿಳಿಸ ಬಹುದು. ರೋಹಿಣಿದೇವಿ : ಅವರ ಜೊತೆಗೆ ತಾವೂ ಮಾಹುವಿಗೆ ಹೋಗುತ್ತೀರಾ ? ಕೋಸಲೇಂದ್ರ : ಹೌದು, ಹೋಗಿ ನಾಲ್ಕು ದಿನ ಅಲ್ಲಿ ಇದ್ದು ಬರಬೇಕೆಂ ದಿದ್ದೇನೆ. ಬಂದ ಮೇಲೆ ಬಿಟ್ಟಿಯಾಗಿಯೇ ಆಗುವದಲ್ಲ ! ನಮಸ್ಕಾರ ! ಜಯ ಹಿಂದ್, ಕಾ:ಮೋಡ್ ಮೃಣಾಲಿನಿ ! ನಾನು ಮರಳಿದ ಮೇಲೆ ನಮ್ಮ ತಾತ್ವಿಕ ಚರ್ಚೆಯನ್ನು ಪ್ರಾರಂಭಿಸೋಣ ! ಮೃಣಾಲಿನಿ : ಜಯಹಿಂದ್ ಎಂದು ನನ್ನನ್ನು ಬೀಳ್ಕೊಳ್ಳಲು ನಾನೇನು ಜಪಾನಿಗಳ ಕೈಗೊಂಬೆಯೆಂದು ತಿಳಿದಿರಾ ! ಇನ್ನು ತಾತ್ವಿಕ ಚರ್ಚೆಯ ವಿಷಯ ಹಾಗಿರಲಿ, ನೀವು ನರ್ಮದಾ ತೀರದಿಂದ ಮರಳಿ ಬರುವ ಕಾರಣವೇ ಇಲ್ಲ ! ನನಶ್ರೀ, ಬೆಳದಿಂಗಳು, ಹೂ, ಹಸಿರು ಹುಲ್ಲು, ಇವು ಅಲ್ಲಿ ಬೇಕಾದಷ್ಟಿರಬಹುದು. ಅಲ್ಲಿಯೇ ನೀವು' ಸಮಾಧಿಸ್ಥರಾಗಿ ಕುಳಿತು ಬಿಡಿರಿ ! ಜೀವಂತ ಸಮಾಜದಲ್ಲಿ ನಿಮಗೆ ಸ್ಥಾನವಿಲ್ಲ ! ಕೋಸಲೇಂದು : (ನಕ್ಕು) ಬಂದ ಮೇಲೆ ನೋಡೋಣ, ನಿಮ್ಮ ಜೀವಂತ ಸಮಾಜ ಹೇಗಿರುವದೆಂದು ! ಅಲ್ಲಿಯ ವರೆಗೆ,-ನಮಸ್ತೆ- ( ಹೋಗುತ್ತಾನೆ.) ರೋಹಿಣಿದೇವಿ : ಮೃಣಾಲಿನಿ ! ನಡೆ ಇನ್ನು ! ಎಲ್ಲಿದೆ ನೀನು ತಂದ ಕಾರು ? ಇಲ್ಲಿಯವರೆಗಾದ ಕಲಹ ಇವತ್ತಿಗೆ ಸಾಕು ! ಕಾಂತಿಚಂದ್ರ : ಮೃಣಾಲಿನಿಯು ಆಗ್ನಿಯ ಪುಟಿಚೆಂಡಿದ್ದಂತೆ. ಅವಳನ್ನು ಹಿಡಿತದಲ್ಲಿಡುವದು ಸಾಧ್ಯವಿಲ್ಲ. ಅಂತೇ ಅವಳ ಪಿತಾಜಿಯವರು ಕೈಯೂರಿರಬೇಕು! ಮೃಣಾಲಿನಿ : ನಡೆಯಿರಿ, ಕಾರು ಕಾದಿದೆ, ಮಾತು ಬೆಳೆದಿದ್ದು ನನ್ನಿಂದಲ್ಲ, `ನಿಮ್ಮಿಂದ ! ಇಲ್ಲಿ ನಡೆದಿದ್ದು ಕಲಹವಲ್ಲ, ವರ್ಗಸಮರ, ವರ್ಗಭೇದವು ನಿರ್ಮೂಲವಾಗುವ ತನಕ ಅದು ತಾನಾಗಿಯೇ ನಡೆದಿರುತ್ತದೆ. ನಾವು ಬೇಡವೆಂದರೂ ಕೇಳುವದಿಲ್ಲ. ಈ ಸಮರದಲ್ಲಿಯ ಸಿಡಿಮದ್ದು ನಾನು ! [ ಹೋಗುತ್ತಾರೆ. 18, 1.