ಪುಟ:Yugaantara - Gokaak.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಪ್ರವೇಶ ) { ಮಾಹುವಿನ ಹತ್ತಿರ ನರ್ಮದೆಯ ತೀರದಲ್ಲಿದ್ದ ದೊಡ್ಡ ಬಂಗಲೆಯ ಅಟ್ಟದ ಮೇಲಿನ ಪಟಾಂಗಣ ಸೂರ್ಯಾಸ್ತದ ಸಮಯವಾಗಿದೆ ಅಲ್ಲಿ ಕಿಶನ್ ಕಿಶೋರ- ರುಕ್ಕಿಣಿದೇವಿ- ಕೋಸಲೆಂದ್ರರು ಹಿಮ ಫೋನವನ್ನೂ (jce-cream ) ಶೀತಲವಾಯುವನ್ನು ಸೇವಿಸುತ್ತ ಕುಳಿತಿದ್ದಾರೆ. ಟೇಬಲ್ಲಿನ ಮೇಲೆ ಸರಬತ್ತಿನ ಗ್ಲಾಸುಗಳೂ ಇವೆ.] ಕಿಶನ್ ಕಿಶೋರ : ದಿಲ್ಲಿಯಲ್ಲಿ ಇನ್ನೂ ಅದೇ ಬೇಸಿಗೆ ಪ್ರಾರಂಭವಾಗಿತ್ತು. ಆದರೂ ಏನು ಸೆಕೆ ಅಲ್ಲಿ! ಇಲ್ಲಿ ಕಮ್ಮಾರನ ತಿದಿಯಿಂದೆತ್ತಿ ತಂಗೊಳದ ತುವಿ ಯಲ್ಲಿ ಇಟ್ಟ ಹಾಗಿದೆ. ಸಿಮ್ಲಾದ ವೃಥಾಡಂಬರವಿಲ್ಲ. ನೈನಿತಾಲದಲ್ಲಿಯಂತೆ ಪರಿಚಿತರ ಪೀಡೆಯಿಲ್ಲ. ಈ ಶಾಂತ- ಪ್ರಶಾಂತ ವಾತಾವರಣದಲ್ಲಿ ಅಮೃತ ಸಿಂಚನವಾದ ಈ ಹವೆಯಲ್ಲಿ-ಜೀವನವು ಚೇತರಿಸಿಕೊಳ್ಳುತ್ತಿದೆ. ಜೀವನವು ಒಂದು ಮಧುರ ಸ್ವಪ್ನದಂತೆ ಕಾಂತಿಯುತವಾಗಿದೆ, ಪ್ರಿಯ ವಾಗಿದೆ. ರುಕ್ಕಿಣಿದೇವಿ : ನೀವು ಹೇಳಿದ ಆ ತಂಗೋಳವು ಬರಿ, ಕನಸಲ್ಲ. ಅಲ್ಲಿ ನೋಡಿರಿ ! ನೆಲ-ಮುಗಿಲಿನಂಚಿನಲ್ಲಿ ಪ್ರಾತಃಕಾಲದಲ್ಲಿ ಥಳಥಳಿಸುವ ನರ್ಮದೆ ಈಗ ಹೇಗೆ ಶಾಂತಸಲಿಲಲೀಲೆಯಲ್ಲಿ ಲೀನಳಾಗಿದ್ದಾಳೆ ಪಡುವಣದ ಸಿರಿಗಂಪಲ್ಲ ಅವಳ ಹೃದಯವನ್ನು ಹೊಕ್ಕು ಹೇಗೆ ಪ್ರಕಾಶಿ ಸುತ್ತದೆ. ಆತ್ಮದ ಸ್ವಯಂಪ್ರಕಾಶವು ನಮ್ಮ ಜೀವನತರಂಗಿಣಿಯಲ್ಲಿ ಇನ್ನು ಹೀಗೆಯೇ ಮೂಡಲಿದೆ. ಕಿಶನ್ ಕಿಶೋರ : ದಿಲ್ಲಿಯಲ್ಲಿಯ ಆ ಅಸೂಯೆ, ಆ ರಾಜಕಾರಣ, ಆ ಕೋಲಾಹಲ, ಅವನ್ನು ನೆನೆದರೆ ಮೈಗೆ ಮುಳ್ಳು ಹಚ್ಚುತ್ತದೆ. ತಡವಾಗಿ ಜೀವನದಲ್ಲಿ ಈ ದಾರಿ ದೊರೆಯಿತು. ಇನ್ನು ಈ ದಾರಿಯನ್ನೇ ತುಳಿಯೋಣ! ರುಕ್ಕಿಣಿದೇವಿ : ( ಇನ್ನೊಂದು ದಿಕ್ಕಿಗೆ ಬೊಟ್ಟು ಮಾಡಿ) ಅದೋ ಅಲ್ಲಿ ಕಾಣುವ ದಲ್ಲ, ಆ ಮಾವಿನ ತೋಪಿಗೆ ನಾಳೆ ಕಾರಿನಲ್ಲಿ ಹೋಗೋಣ ! ಈಗ ಎರಡು ದಿನಗಳಿಂದ ಅದು ನನ್ನನ್ನು ಕರೆಯುತ್ತಿದೆ.