ಪುಟ:Yugaantara - Gokaak.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ ೧೩ ಕಿಶನ್ ಕಿಶೋರ : ನರ್ಮದೆಯ, ದಂಡೆಗೆ ಅಲ್ಲಿ ಕಾಣುವ ಆ ಬುರುಜು, ಅದು ನನ್ನನ್ನು ಮೋಹಿಸಿದೆ. ನಾಡಿದ್ದು ಬೆಳಗಿನಲ್ಲಿ ಅಲ್ಲಿಗೆ ಹೋಗಿ ನಾಶಾ ಮಾಡೋಣ. ಇಂಥ ವನಸಿರಿಯ ನಡುವೆ ತಿಂದ ಅನ್ನವೆಲ್ಲ ರಕ್ತವಾಗುವದು. ಆರೋಗ್ಯವು ಇಲ್ಲಿ ಗಳಿಸಬೇಕಾದ ಗಳಿಕೆಯಲ್ಲ,-ಅನಾಯಾಸವಾಗಿ ಲಭಿಸುವ ಮನ, ರುಕ್ಕಿಣಿದೇವಿ: ಅಹಾ! ಅಲ್ಲಿ ನೋಡಿರಿ ಸಂಧ್ಯೆಯ ಪ್ರಥಮ ನಕ್ಷತ್ರ ಹೇಗೆ ಮಿನುಗುತ್ತಲಿದೆ ! ಇನ್ನು ಕೆಲವು ನಿಮಿಷಗಳಲ್ಲಿಯೇ ಅದು ದೇದೀಷ್ಟ. ಮಾನವಾಗುವದು. ಇಲ್ಲಿ ಒಂದು ಅರ್ಧ ಗಂಟೆ ನಾನು ಆ ನಕ್ಷತ್ರವನ್ನೇ ನೋಡುತ್ತ ಕೂಡುವೆ. ಇಂದಿನ ನನ್ನ ಕನಸುಗಳಲ್ಲಿ ಅದರ ಪವಿತ್ರ ಪ್ರಕಾಶವು ಮೂಡಲಿ. ಕಿಶನ್ ಕಿಶೋರ : ಇತ್ಯ ಮೂಡಣದ ಕಡೆಗೆ ನೋಡು ! ನಿಶಿಕಾಂತ ಹೇಗೆ ಕಳೆಹೊಂದುತ್ತಲಿದ್ದಾನೆ ! ನಾಳೆ ಹುಣ್ಣಿಮೆ, ನಾಳೆ ರಾತ್ರಿ ಇಲ್ಲಿಯೇ ಬೆಳುದಿಂಗಳಿನೂಟ ಮಾಡೋಣ ! ರುಕ್ಕಿಣಿದೇವಿ : ಮುಂದಿನ ವಾರ ನರ್ಮದೆಯ ದಂಡೆಗುಂಟ ಐವತ್ತು ಮೈಲು ಕಾರಿನಲ್ಲಿ ಹೋಗಿ ನದಿಯ ಮಣಿತ-ಕುಣಿತಗಳನ್ನೆಲ್ಲ ನಿರೀಕ್ಷಿಸೋಣ ! ಕಿಶನ್ ಕಿಶೋರ: ಅದರ ಮುಂದಿನ ವಾರ ವಿಂಧ್ಯಾದ್ರಿಯ ತುಂಗ ಶೃಂಗನನ್ನೇರಿ ಅಗಸ್ಯನಂತೆ ಅದನ್ನು ದಾಟಬೇಕೆನ್ನುತ್ತೇನೆ. ನೀನೂ ಬರುವಿಯಷ್ಟೆ ? ರುಕ್ಕಿಣಿದೇವಿ : ಆಗಸ್ಯನಿದ್ದಲ್ಲಿ ಲೋಪಾಮುದ್ರೆ, ಬರದೆ ಏನು ? ಆದರೆ ಆ ಶೃಂಗದ ವರೆಗೆ ಕಾರು ಹೋಗುವದಷ್ಟೆ ? [ ಕೋಸಲೇಂದ್ರನು ನಗುತ್ತಾನೆ. ] ಕಿಶನ್ ಕಿಶೋರ : ಹೋಗುವಂಥ ಶೃಂಗವನ್ನೇ ಆರಿಸೋಣ. ಯಾಕೆ, ಕೋಸಲೇಂದ್ರ ! ಸುಮ್ಮನೆ ನಗುತ್ತೀ! ನೀನು ಕವಿ. ನಮಗಿಲ್ಲದ ತನ್ಮಯತೆ ಈ ಪ್ರಕೃತಿ ಸೌಂದರ್ಯದಲ್ಲಿ ನಿನಗೆ ತುಂಬಿ ಬಂದಿದ್ದೀತು ! ಕೋಸಲೇಂದ್ರ : ನೀವಿಬ್ಬರೂ ಕವಿಗಳಾಗಿ ರಸವಾಣಿಯಿಂದ ನುಡಿಯುತ್ತಿ, ರುವಾಗ ನಾನೇತರ ಕವಿ! ವಿಂಧ್ಯಾದ್ರಿಯ ಶೃಂಗಕ್ಕೂ ರೋಲ್ಸ್ ರಾಯಿಸ್