ಪುಟ:Yugaantara - Gokaak.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕಾರಿಗೂ ರುಕ್ಕಿಣಿದೇವಿಯವರು ಹಚ್ಚಿದ ಸಂಬಂಧವನ್ನು ಕೇಳಿ ನಗೆ ಬಂತು. ಅಷ್ಟೆ ! ಕಿಶನ್ ಕಿಶೋರ : ಅದೇನೇ ಇರಲಿ, ಮಾಹುವಿಗೆ ಬಂದು ನಿನ್ನ ಸೌಂದರ್ಯ ದೃಷ್ಟಿ ಸೂಕ್ಷ್ಮತರವಾಗಿಲ್ಲವೆ ? ಹೊಸತಾಗಿ ಎಷ್ಟು ಕವನಗಳನ್ನು ರಚಿಸಿದ್ದೀ? ಕೋಸಲೇಂದ್ರ : ಏನೇನೋ ಬರೆದಿದ್ದೇನೆ. ಆದರೆ ಇಲ್ಲಿಗೆ ಬಂದು ತಿಂಗಳಾ ಗುತ್ತ ಬಂತು. ದಿಲ್ಲಿಗೆ ಯಾವಾಗ ಹೊರಡುವದು ಎಂದು ಯೋಚಿಸು ತಿದ್ದೇನೆ. ಕಿಶನ್ ಕಿಶೋರ : ಏನು ? ದಿಲ್ಲಿಗೆ ? ದಿಲ್ಲಿಗೆ ಹೋಗಬೇಕೆನ್ನುತ್ತೀಯಾ ? ಕೋಸಲೇಂದ್ರ : ಹೌದು, ಇನ್ನು ಈ ನಿರ್ಜನ ಪ್ರದೇಶದಲ್ಲಿ ಇರುವದಾದರೂ ಎಷ್ಟು ದಿನ ? ದಿಲ್ಲಿ ನನ್ನನ್ನು ಕರೆಯುತ್ತಲಿದೆ. ರುಕ್ಕಿಣಿದೇವಿ : ದಿಲ್ಲಿ ಕರೆಯುವದೆ ? ಮೋಹಿನಿಯ ಕರೆ ಅದು, ಆ ಧ್ವನಿ ಯಲ್ಲಿ ವಂಚನೆಯಿದೆ, ಮಾಯೆಯಿದೆ. ಅದಕ್ಕೆ ಕಿವಿಗೊಟ್ಟು ನಿನ್ನ ಜೀವಿತ ವನ್ನು ಹಾಳುಮಾಡಿಕೊಳ್ಳಬೇಡ ! ಕಿಶನ್ ಕಿಶೋರ : ಇಲ್ಲಿ ಕೆಲವು ದಿನ ಪ್ರಕೃತಿಸೌಂದರ್ಯವನ್ನು ಅನುಭವಿಸಲೆಂದು ನಿನ್ನನ್ನು ಕರೆತಂದಿದ್ದು ನಿಜ. ಆದರೆ ನರ್ಮದೆಯ ಸಾನ್ನಿಧ್ಯ ಉಳಿದ ಕೆಲಸವನ್ನು ಮಾಡುವದೆಂದು ನನಗೆನಿಸಿತ್ತು, ಕೋಸಲೇಂದ್ರ, ಇದೇ ಬಂಗಲೆಯಲ್ಲಿಯ ಒಂದು ಭಾಗವನ್ನು ನಿನಗಾಗಿ ಮೀಸಲಿರಿಸುತ್ತೇನೆ. ಇಲ್ಲಿ ನಿನ್ನ ಕಾವ್ಯ ಸಮಾಧಿಯು ಅವ್ಯಾಹತವಾಗಿ ಸಗಿ ಜಗತ್ತಿನಲ್ಲಿ ನನ್ನ ಈ ಶಾಂತಿಕುಟೀರವು ಅಮರವಾಗಲಿ ! ನಾಳೆ ನಿನ್ನ ಮದುವೆಯಾದಾಗ ಆ ಗೃಹಣಿಯೂ ಇಲ್ಲಿ ನಿನ್ನ ಜೊತೆಗಾರ್ತಿಯಾಗಲಿ. ನಾವಿಬ್ಬರೂ ಮನೆಗೆ ಸೊಸೆ ಬಂದಳೆನ್ನು ತೇವೆ. ರುಕ್ಕಿಣಿದೇವಿ : ಆದರೆ ನೀನು ಮದುವೆಯಾಗುವದಕ್ಕಿಂತ ಮುಂಚೆ ಆ ಸೊಸೆಯನ್ನು ನಾನು ನೋಡಬೇಕು, ಕೋಸಲೇಂದ್ರ ! ನನಗೆ ......... ಸೊಸೆ ಬರುವ ಹಾಗಿಲ್ಲ. ಆದರೆ ಒಂದು ವೇಳೆ ಬಂದರೆ ಹೇಗಿರಬೇಕು ಎಂದು ಅನೇಕ ಸಲ ನಾನು ಕಲ್ಪಿಸಿದ್ದೇನೆ, ಆ ಚಿತ್ರಕ್ಕೆ ಸರಿಹೋಗಬೇಕು ನಿನ್ನ ಗೃಹಿಣಿ !