ಪುಟ:Yugaantara - Gokaak.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಕು ೧n ಕೋಸಲೇಂದ್ರ : ( ನಗುತ್ತ) ಅದೆಲ್ಲ ಸರಿ, ರುಕ್ಕಿಣಿದೇವಿ ! ಆದರೆ ನೀವೇ ಹೇಳಿರಿ, ಈ ಅರಣ್ಯದಲ್ಲಿ ಕುಳಿತರೆ ನಾನು ಮದುವೆಯಾಗುವ ಬಗೆ ಹೇಗೆ? ಸಿಶನ್ ಕಿಶೋರ : ಹೋಗಿ ಮದುವೆ ಗೊತ್ತು ಮಾಡಿಕೊಂಡು ಬರಬಹುದಲ್ಲ ? ಆದರೆ ನೀನು ನಮ್ಮೊಡನೆ ಇಲ್ಲಿಯೇ ಇರಬೇಕು ಕೋಸಲೇಂದ್ರ ! ಇಲ್ಲಿ ಕೃತ್ರಿಮತೆ ಇಲ್ಲ. ಈ ಘಟ್ಟದ ಹತ್ತಿರ ಬನಸೀಲಾಲರಂತಹ ಘಟಸರ್ಪ ಗಳಿಲ್ಲ, ನಗರದ ನಾಗರಹಾವುಗಳಿಲ್ಲ. ಕೋಸಲೇಂದ್ರ : ಅದೆಲ್ಲ ನಿಜ. ಆದರೆ ಇಲ್ಲಿ ಅರಣ್ಯದ ಅಜಗರಗಳಿರಬಹು ದಲ್ಲವೆ ? ಅಲ್ಲದೆ ನಗರದ ನಾಗರಹಾವುಗಳೂ ದೇವರ ಸೃಷ್ಟಿಯಲ್ಲಿ ಒಂದು ಭಾಗ, ಅವುಗಳನ್ನು ತಿಳಿಯದೆ ನಮ್ಮ ಅನುಭವವು ಪೂರ್ಣವಾಗು ವದೆಂತು ? ರುಕ್ಕಿಣಿದೇವಿ : ಏನನ್ನು ತ್ತೀ ? ನಾಗರಹಾವನ್ನು ತಿಳಿಯಲು ಅದರಿಂದ ಕಚ್ಚಿಸಿಕೊಳ್ಳುವದು ಅವಶ್ಯವೋ ? ಕೋಸಲೇಂದ್ರ : ನಾನು ಹೇಳುವದು ಹೀಗೆ : ಇಂಥ ಸರ್ಪಗಳು ಸುಳಿ ಯುವ ಸಮಾಜದಲ್ಲಿ ನಾವು ಬಾಳಿ ಬದುಕಬೇಕೆಂದು. ಅಮೃತದೊಡನೆ ವಿಷವನ್ನು ಬೆರಸಿದ ಜಗತ್ತಿನಲ್ಲಿ ನಮ್ಮ ಪಾಲಿಗೆ ವಿಷದ ಬಟ್ಟಲು ಬಂದರೆ ಅದನ್ನು ಕುಡಿಯದೆ ಇರುವದು ಸ್ವಂತದ ಧೈಯಕ್ಕೆ ಅಸಾಧ್ಯವಾದರೆಆಗ ಅದನ್ನು ಕುಡಿಯಬೇಕು. ಕಿಶನ್ ಕಿಶೋರ : ( ಸುತ್ತಲೂ ನೋ ಡಿ) ಇಲ್ಲಿ ನೋಡು ಕೋಸಲೇಂದ್ರ ! ಇದೂ ದೇವರು ಸೃಜಿಸಿದ ಸೃಷ್ಟಿ, ಆದರೆ ಇದರ ರಮ್ಯತೆಗೆ ಕುಂದೇ ಇಲ್ಲ. ಇದರ ಅನ್ನತದಲ್ಲಿ ವಿಷ ಬೆರೆತಿಲ್ಲ. ಇಲ್ಲಿ ಹೂಡಿದ ಬಾಳು ಹೂವಿನಂತೆ ಅರಳಿ ಹೂವಿನಂತೆ ಒಂದು ದಿನ ಮುಗಿಯುವದು. ಕೋಸಲೇಂದ್ರ: ಇರಬಹುದು ಆದರೆ ಇಚ್ಚಿಸಿದ ಶಾಂತಿಯು ದೊರಕಿದ ಮೇಲೆ ಈ ಏಕಾಂತವು ಅಸಹನೀಯವಾಗುವದು. ಮನಸ್ಸಿನ ಅಲೆದಾಟ - ಕಾಗಿ ದಿಲ್ಲಿಯ ದರವಾಜಗಳಂಥ ಹತ್ತೆಂಟು ಮಹಾದ್ವಾರಗಳಿವೆ ಒಂದನು ಹಾಯ್ದು ಬಂದಾಗ, ಅಲ್ಲಿ ಕಂಡ ನೋಟವೇ ಪೂರ್ಣ ಎಂದೆನಿಸಿಬಿಡುತ್ತದೆ. ಆದರೆ ಇನ್ನೊಂದರ ವಿಷಯದಲ್ಲಿ ಜುಗುಪ್ಪೆಯು ಕಡಮೆಯಾಗಲು, ಮನಸ್ಸು ಮತ್ತೆ ಆ ದಾರಿಯನ್ನು ತುಳಿಯಲು ಮತ್ತೆ ಹವಣಿಸುತ್ತದೆ. ಪೂರ್ಣತೆಯು ನಮ್ಮ ಅಂತರಂಗದಲ್ಲಿದೆ; ಸೃಷ್ಟಿಯಲ್ಲಿಲ್ಲ.