ಪುಟ:Yugaantara - Gokaak.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಕು ೧ ಪ್ರವೇಶ 4 { ದಿಲ್ಲಿಯಲ್ಲಿ ಕಾಂತಿಚಂದ್ರರ ಮನೆ, ಮಧ್ಯಾಹ್ನದ ಊಟ ಮುಗಿಸಿ ಕಾಂತಿಚಂದ್ರ-ರೋಹಿಣಿದೇವಿಯರು ಡ್ರಾಯಿಂಗ್ ರೂಮಿನಲ್ಲಿ ಸೋಫಾದ ಮೇಲೆ ಒರಗಿಕೊಂಡು ಕುಳಿತಿದ್ದಾರೆ. ಕಾರ್ಲ್ ಮಾರ್ಕ್ಸ್, ಎಂಜಲ್ಪರ ಪತ್ರವ್ಯವಹಾರ' ಎಂಬ ಪುಸ್ತಕವನ್ನೊದುತ್ತ ಮೃಣಾ, ಲಿನಿಯು ಕುಳಿತಿದ್ದಾಳೆ ] ಕಾಂತಿಚಂದ್ರ : ಬಂದ ತಿಂಗಳೆರಡು ತಿಂಗಳಲ್ಲಿಯೇ ದಿಲ್ಲಿಯು ನಮ್ಮನ್ನು ಎಷ್ಟೊಂದಾಗಿ ಸ್ವಾಗತಿಸಿದೆ ! ಹಿಂದುಸ್ತಾನ ಟೈಮು ನಮ್ಮ ಆಗಮನ ವನ್ನು ಕುರಿತು ಒಂದು ಉಪಾಗ್ರಲೇಖವನ್ನು ಬರೆಯಿತು. ನಗರದ ನೂರು ಸಂಘಗಳು ನಮ್ಮನ್ನು ಆಮಂತ್ರಿಸಿದವು. ಎಲ್ಲ ವೇದಿಕೆಗಳು ನಮಗೆ ವೇದ್ಯವಾದವು. ನಿನ್ನೆ ಮಹಿಳಾ ಸಂಘದ ಅಧ್ಯಕ್ಷಸ್ಥಾನದಿಂದ ನೀನೇನು ಮಾತಾಡಿದೆ ? ರೋಹಿಣಿದೇವಿ: ಭಾರತೀಯ ಸ್ತ್ರೀಯರೆಲ್ಲ ಐ. ಎನ್. ಎ. ದ ವೀರ ಮಹಿಳೆಯರಂತೆ ಎಲ್ಲ ತ್ಯಾಗಕ್ಕೂ ಸಿದ್ದರಾಗಬೇಕು - ಎಂದು ಹೇಳಿದೆ. ನಾಳೆ ನೆಹರು ಅವರ ಭಾಷಣವಾಗುವಾಗ ವಿದ್ಯಾ ಸಮಿತಿಯ ಕಾರ್ಯದರ್ಶಿ ಗಳಾಗಿ ನೀವು ಅವರನ್ನು ಸ್ವಾಗತಿಸುವಿರಲ್ಲ ! ಆಗೇನು ಹೇಳಬೇಕೆಂದು ಮಾಡಿರುವಿರಿ ! ಕಾಂತಿಚಂದ್ರ : ಅವರ ಭಾಷಣ ಕೇಳುವದೇ ಒಂದು ವಿದ್ಯೆ; ಅದರಂತೆ ನಡೆಯುವದೇ ಒಂದು ಯೋಗ : ಎಂದು ಹೇಳಬೇಕೆಂದು ಮಾಡಿದ್ದೇನೆ. ಆ ಬನಸಿಲಾಲನು ವಿದ್ಯಾಸಮಿತಿಯ ಅಧ್ಯಕ್ಷನಾಗಿದ್ದಾನೆ ! ಅವನ ಹೊಟ್ಟೆ ಸೀಳಿದರೆ ಓನಾಮದ ಗಂಧವಿಲ್ಲ !! ರೋಹಿಣಿದೇವಿ : ವೇಳೆ ಸಾಧಿಸಿ ಅದನ್ನೂ ನೋಡೋಣ. ಈಗಂತೂ ನೀವು ಕಿಶನ್ ಕಿಶೋರರು ಹೇಳಿದ ಆ ಅನಾಥಾಶ್ರಮದ ಅಧ್ಯಕ್ಷರಾದ ಹಾಗಾಯಿತಲ್ಲ ? ಕಂತಿಚಂದ್ರ: (ನಕ್ಕು) ಆಗದೆ ಏನು ? ಆ ಸಂಸ್ಥೆಗೆ ಇಪ್ಪತ್ತು ಸಾವಿರ ರೂಪಾಯಿ ದಾನ ಮಾಡುವೆನೆಂದು ಸಿನವರಿಗೆ ' ಹೇಳಿದೆ. ಅವರೆಲ ಸಂತೋಷದಿಂದ ಕುಣಿದಾಡಿದರು. ಆದರೆ ಸಂಸ್ಥೆಯೊಡನೆ ನನ್ನ ಸಂಬಂಧ