ಪುಟ:Yugaantara - Gokaak.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ [ ತನ್ನ ಹತ್ತಿರ ಕರೆದು ಕೂಡಿಸಿಕೊಳ್ಳುತ್ತಾನೆ. ] ಇವರು ನನ್ನ ಶ್ರೀಮತಿಯವರು. ಅವರ ಪರಿಚಯವಿದೆಯ ? ಮೊನ್ನೆ ಮಹಿಳಾ ಸಂಘದಲ್ಲಿ ಅವರು ಮಾತನಾಡಿದ ವಿಷಯ ತಮಗೆ ತಿಳಿದಿರ ಬಹುದು ? [ ಬನಸಿಶಾಲನು ಕೈಜೋಡಿಸಿ ನಮಸ್ಕಾರ ಮಾಡುತ್ತಾ ನ. ರೋಹಿಣಿ. ದೇವಿಯ ವಂದಿಸುತ್ತಾಳೆ.] ಬನಸಿಲಾಲ : ಓಹೋ ! ಗೊತ್ತಿರದೆ ಏನು? ( ಮೃಣಾಲಿನಿಯ ಕಡೆಗೆ ತಿರುಗಿ ) ಇವರು ಯಾರು ? ಕಾಂತಿಚಂದ್ರ : ಇವರು ದೇವಿ .... .... ಅಲ್ಲ ಅಲ್ಲ ! ಕಾಮೈಡ್ ಮೃಣಾಲಿಸಿ ಯವರು, ಬಿ. ಎ. ಆಗಿ ಜನತೆಯ ಸೇವೆಗೆಂದು ಕಂಕಣಬದ್ಧರಾಗಿದ್ದಾರೆ. ಮೃಣಾಲಿನಿ ! ಇವರೇ ಸೇಠ ಬನಸಿಲಾಲರು. ಇವರ ವಿಷಯ ನಿನಗೆ ಕೇಳಿ ಗೊತ್ತಿದೆ. ಮೃಣಾಲಿನಿ : ( ಪುಸ್ತಕದಿಂದ ಮೋರೆ ಎತ್ತಿ) ನನಗೆ ಗೊತ್ತು. ಖಾಸಗಿ ಸಂಸ್ಥೆ ಗಳಿಗೆ ಹತ್ತುವ ಬಿಳಿ ಇರುವೆ ಬೆಡಂಗರು ಇವರು. ಸಂಸ್ಥೆ ಮೇಲೆ ಇದ್ದ ಹಾಗೆಯೇ ಇರುತ್ತದೆ. ಒಳಗೆಲ್ಲ ವಿಧ್ವಂಸ, ರೋಹಿಣಿದೇವಿ : ಹುಶ್, ಮೃಣಾಲಿನಿ ! ಹೀಗೆ ಮಾತಾಡಬಾರದು. ( ಬನಸಿಲಾಲನ ಕಡೆಗೆ ತಿರುಗಿ ) ತಾವು ಕ್ಷಮಿಸಬೇಕು, ಮೃಣಾಲಿನಿಯು ಮಾತನಾಡುವದೇ ಹೀಗೆ ! ( ಕಾಂತಿಚಂದ್ರನ ಕಡೆಗೆ ತುಂಟನಗೆಯಿ:೦ದ ನೋಡುತ್ತಾಳೆ. ) ಬನಸಿಲಾಲ : ( ನಗುತ್ತ) ಕಾಮ್ರಡರಿಂದ ಇಂಥ ಪದವೀದಾನ ನಿರೀಕ್ಷಿತವೇ ಇದೆ ! ಅದಕ್ಕೇನು ? ಆದರೆ ......... ಕಾ:ಿ ಡ್ ಮೃಣಾಲಿನಿಯವರೆ ! ನಿಮಗೆ ಗೊತ್ತಿಲ್ಲದ ಸುದ್ದಿ ಇದು. ಇತ್ತೀಚೆಗೆ ನನ್ನ ಅಭಿಪ್ರಾಯ ಬದಲಾಗ ಹತ್ತಿದೆ. ಕಾ:ಮೈಡ್ವಾದದಿಂದ ಮಾತ್ರ ಸ್ವಾತಂತ್ರ್ಯ ದೊರೆಯಬಲ್ಲದೆಂದು ನನಗೆನಿಸಹತ್ತಿದೆ. ಇಂದು ನಾಳೆ ನಿಮ್ಮ ಪಾರ್ಟಿ ಸೇರದೆ ನನಗೆ ಮನಃ ಶಾಂತಿ ಸಾಧ್ಯವಿಲ್ಲ. ಮೃಣಾಲಿನಿ : ( ಉತ್ಸುಕತೆಯಿಂದ ಪುಸ್ತಕ ಮುಚ್ಚಿ) ಹೀಗೋ ! ಹಾಗಾದರೆ ವಾಸ್ತವವಾದದ ಪ್ರಜ್ಞೆಯಿದೆ ನಿಮಗೆ ! ಇಂದಿಲ್ಲ ನಾಳೆ ದೇಶಕ್ಕೆ ನಿಮ್ಮಿಂದ ನಿಜಸೇವೆ ಸಲ್ಲಬಹುದೆಂದು ಆಸೆ ಉಂಟಾಗುತ್ತದೆ. ಈ ನಮ್ಮ ಕಾಂತಿಚಂದ್ರ