ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುನ್ನುಡಿ

'ಯುಗಾಂತರ'ವನ್ನು ಓದಿದ ಗೆಳೆಯರೊಬ್ಬರು : ಇದನ್ನು ಹೊಸ ಬಾಳಿನ ಸುಕುಮಾರ ಯೋಗ' ಎಂದು ಕರೆದಿದಿ (೬. ಇದು ಸುಕುಮಾರ ಪ್ರಯೋಗವೇನೋ ನಿಜ. ಆದರೆ ಇಲ್ಲಿ ಚಿತ್ರಿತವಾದ ಜೀವನದಲ್ಲಿ ಅಷ್ಟೊಂದು ಹೊಸತೇನಿದೆ ?” ಎಂದು ಕೇಳಿದ್ದಾರೆ. ಹೀಗಾಗಿ ಒಂದು ಹೆಸರನ್ನಿಟ್ಟ ನಾನು, ಆ ಹೆಸರಿಟ್ಟ ಕಾರಣವನ್ನು ವಿವರಿಸಬೇಕಾಗಿದೆ.

"ಯುಗಾಂತರ"ದಲ್ಲಿ ಚಿತ್ರಿತವಾದ ಬಾಳು ಯುಗ-ಯುಗಗಳ ಬಾಳೆಂಬುದು ಮೇಲೆಯೇ ಕಾಣುತ್ತದೆ. ಪ್ರೇಮ, ವಿವಾಹ, ತಾಯ್ತನ,ಇದರಲ್ಲಿ ಒಂದು ದೃಷ್ಟಿಯಿಂದ ಹೊಸತೇನೂ ಇಲ್ಲ. ಕವಿ, ಸಮಾಜಸೇವಕ, ವಂಚಕ, ಸನಾತನಿ,- ಈ ಪ್ರಕಾರಗಳೂ ಮಾನವಜಾತಿಯಲ್ಲಿ ಯಾವಾಗಲೂ ಕಾಣಿಸಿಕೊಂಡಿವೆ. ಆದರೆ ಇದೇ ವಿಚಾರಸರಣಿಯನ್ನು ಮುಂದುವರಿಸಿದಲ್ಲಿ ಜೀವನದಲ್ಲಿ ಎಲ್ಲವೂ ಪರ್ವತದಷ್ಟು ಪುರಾತನವೆಂಬ ಸಿದ್ಧಾಂತಕ್ಕೆ ನಾವು ಬಂದು ಮುಟ್ಟುತ್ತೇವೆ. ಅಂದರೆ, ಹೀಗೆಲ್ಲ ನೋಡುವಾಗ ನಾವು 'ಸತ್' ತತ್ವಕ್ಕೆ ಇಲ್ಲವೆ ಅಕ್ಷರ ಪುರುಷನಿಗೆ ಪಟ್ಟಗಟ್ಟ ಭಾವ (Heconing) ತತ್ವ ಇಲ್ಲವೆ ಕ್ಷರಪುರುಷನನ್ನು ಅಲಕ್ಷಿಸುತ್ತೇವೆ.

ಆದರೆ ಜೀವನವು ದತ್ತಾತ್ರೇಯನಂತೆ ತ್ರಿಮೂರ್ತಿಯಾಗಿದೆ. ಕ್ಷರಪುರುಷ ಅಕ್ಷರಪುರುಷ, ಪುರುಷೋತ್ತಮ,- ಈ ತ್ರಿಕೂಟದ ಪವಾಡವು ಕಣ-ಕಣ ದಲ್ಲಿಯೂ ಕಾಣುತ್ತದೆ. ಚಿರಂತನತೆಯ ನೂತನತೆಯೂ ಅಮರತೆಯೂ ಸೃಷ್ಟಿಯ ಪ್ರತಿಯೊಂದು ಕಣದಲ್ಲಿ ಬೆರೆತುಕೊಂಡಿವೆ. ಪ್ರತಿಯೊಂದು ಯುಗದಲ್ಲಿ ಚಿರಂತನತೆ-ನೂತನತೆಗಳು ಬೆರೆಯುವ ಪ್ರಮಾಣವು ಬದಲಿಸು ಇದೆ. ನಾವು 'ನೂತನ' ಎಂಬ ಶಬ್ದವನ್ನು ಪ್ರಯೋಗಿಸಿದಾಗ ಒಂದು ಯುಗದ ವಿಶೇಷ ಆವರಣವನ್ನು ಅನುಲಕ್ಷಿಸಿ ಮಾತನಾಡುತ್ತೇವೆ.