ಪುಟ:Yugaantara - Gokaak.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೧ ೨ ಆ } ಮೃಣಾಲಿನಿ : ನನಗೂ ತಾಯಿಯಿಲ್ಲ. ನಿನ್ನನ್ನು ಕಂಡರೆ ಕಳೆದುಕೊಂಡ ತಾಯಿ ಮರಳಿದಂತೆ ಭಾಸವಾಗುತ್ತದೆ. ಇಲ್ಲದಿದ್ದರೆ ಹೀಗೆ ನಿಮ್ಮಲ್ಲಿಗೆ ಬರುತ್ತಿದ್ದೆನೇ ! ಆದರೆ ಅಸತ್ಯವನ್ನು ಸತ್ಯವೆಂದೂ ಸ್ವಾರ್ಥವನ್ನು ಸಮಾಜ ಸೇವೆಯೆಂದೂ ನಾನು ಕರೆಯುವದು ಹೇಗೆ ? ಇದಕ್ಕಾಗಿ ನನ್ನ ತಂದೆಗೂ ಎರವಾಗಿದ್ದೇನೆ. ನೀವಂತೂ ದೂರದ ಕರುಳುಬಳ್ಳಿ ! ರೋಹಿಣಿದೇವಿ : ಬನಸಿಲಾಲನಷ್ಟು ನೀಚರೆ ನಾವು, ಮೃಣಾಲಿನಿ ? ಮೃಣಾಲಿನಿ : ಅವನು ಸ್ವಾರ್ಥಿ; ನೀವು ಅಹಂಕಾರಿಗಳು ! ಆ ಅಧ್ಯಕ್ಷ ಪದವಿಯನ್ನು ಬಿಟ್ಟಿದ್ದರೆ ನಿಮಗೇನು ಹಾನಿಯಿತ್ತು ? ದಾನಕ್ಕೂ ಪ್ರತಿಫ ಬೇಕೆ ? ಕಾಂತಿಚಂದ್ರ : ನೀಚರಿಗಿಂತ ಕಾರ್ಯಬುದ್ಧಿಯುಳ್ಳವರು ಇಂಥ ಸ್ಥಾನದಲ್ಲಿ ಇದ್ದರೆ ಒಳ್ಳೆಯದಲ್ಲವೆ? ಮೃಣಾಲಿನಿ: ( ಉದ್ವಿಗ್ನಳಾಗಿ ಏಳುತ್ತೆ ಕಾರ್ಯಬುದ್ದಿಯುಳ್ಳವರಿಗೆ ಸ್ಥಾನ ಮಾನ ಬೇಕಾಗುವುದಿಲ್ಲ. ರೋಹಿಣಿಬೆನ್, ಇವತ್ತಿಗೆ ಇಷ್ಟು ಮಾತು ಸಾಕು. ಹೆಚ್ಚು ಮಾತಾಡಿ ಹಟಮಾರಿಯೆಂದು ನಾನು ಮತ್ತೆ ಕರೆಯಿಸಿ ಕೊಳ್ಳಬೇಕಾಗಿಲ್ಲ. ಮುಂಗೈ ಗಡಿಯಾರ ನೋಡುತ್ತ) ಅಲ್ಲದೆ ಮುಜದೂರ ಸಂಘದ ಸಭೆಯಿದೆ. ವೇಳೆಯಾಯಿತು. ನೀವೇ ವಿಚಾರ ಮಾಡಿರಿ ! ಇನ್ನೊಮ್ಮೆ ಬಂದಾಗ ಮತ್ತೆ ಅರೆದಾಡೋಣ ! ( ಹೋಗುತ್ತಾಳೆ, ಕಾಂತಿ ಚಂದ್ರರೂ ರೋಹಿಣಿದೇವಿ ಯ ಮೃಣಾಲಿನಿಯನ್ನೇ ನೋಡುತ್ತ ನಿಲ್ಲುತ್ತಾರೆ ).