ವಿಷಯಕ್ಕೆ ಹೋಗು

ಪುಟ:Yugaantara - Gokaak.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೬
ಯುಗಾಂತರ

ಪ್ರವೇಶ ೪.

[ಕೋಸಲೇಂದ್ರನು ದಿಲ್ಲಿಯಲ್ಲಿಯ ತನ್ನ ಕೋಣೆಯಲ್ಲಿ ಕುಳಿತಿರುತ್ತಾನೆ. ತಾನು ಕಟ್ಟಿದ ಒಂದು ಕವನವನ್ನು ತನ್ನಷ್ಟಕ್ಕೆ ತಾನು ಹೇಳುತ್ತಿರುತ್ತಾನೆ.]
ಕೋಸಲೇಂದ್ರ : ನರ್ಮದೆಯಾ ನಿರ್ಮಲ ಹೊನಲಲ್ಲಿ
ಅಮೃತಪುಲಿನವದು ಹೊಳೆಹೊಳೆವಲ್ಲಿ
ಬೆಳುದಿಂಗಳಿನೈಸಿರಿ ಕರೆವಲ್ಲಿ
ವನಿಯೆ ತಾನೊಲಿದಿರುವಲ್ಲಿ -
ಆಡ ಬಾ !
ನೋಡ ಬಾ !
ಹಾಡ ಬಾ !
ಬಾ, ಬಾ, ಬಾ, ಬಾ, ಬಾ !
ಜನವು ವಿರಸವಿರೆ ಬನ ರಸಮಯವು !
ಬವು ಶೂನ್ಯವಿರೆ, ಜನ ನೂತನವು !
ತೂಗುಯ್ಯಲೆಯಂತಾಗಿರೆ ಮನವು
ಅದೊಂದು ದಿನ ತೆರೆವುದು ಚಿದ್ರನವು,
ತ್ರಿಯ ಬಾ !
ಅಳೆಯು ಬಾ !
ಹೊಳೆಯ ಬಾ !
ಬಾ, ಬಾ, ಬಾ, ಬಾ, ಬಾ !

[ಇಷ್ಟರಲ್ಲಿ ಮೃಣಾಲಿನಿಯು ಕೈಯಲ್ಲಿ ಮಾರ್ಕ್ಸ್-ಏಂಜಲ ಪತ್ರವ್ಯವಹಾರದ ಪುಸ್ತಕವನ್ನು ಹಿಡಿದುಕೊಂಡು ಬರುತ್ತಾಳೆ.]

ಓಹೋ ಹೋ ಹೋ ಹೋ ! ಬರಬೇಕು, ಬರಬೇಕು, ಕಾ:ಮ್ರೆಡ್ ಮೃಣಾಲಿನಿ ! ನಾನೇ ನಿಮ್ಮನ್ನು ಎಲ್ಲಿ ನೋಡಬೇಕು, ಹೇಗೆ ನೋಡಬೇಕು, ಯಾವಾಗ ನೋಡಬೇಕು ಎಂದು ಆಲೋಚಿಸುತ್ತಿದ್ದೆ, ನೀವೇ ಹೇಳಿ ಕಳಿಸಿ ದ೦ತೆ ಬಂದಿರಿ !