ಪುಟ:Yugaantara - Gokaak.pdf/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕೋಸಲೇಂದ್ರ : ಕುಳಿತುಕೊಳ್ಳಿರಿ ಇನ್ನು ! ಈ ಮಹಾವ್ಯಕ್ತಿಗೆ ಮಾರ್ಕ್ಸ್ ವಾದದ ಪಾಠ ಹೇಳಿಕೊಡುವವರೋ ನೀವು ? ಮೃಣಾಲಿನಿ : ಹೌದು, ನಮ್ಮ ಪ್ರಚಾರ ಕಾರ್ಯಕ್ಕೆ ಒಗ್ಗುವವರೆಲ್ಲ ನಮಗೆ ಮಹಾವ್ಯಕ್ತಿಗಳೇ ! ಕೋಸಲೇಂದ್ರ : ಅದೇನೇ ಇರಲಿ, ಇವರಿಗೆ ಮಾತ್ರ ನಿಮ್ಮಿಂದ ನಾನು ಪಾತ ಹೇಳಿಸಿಕೊಡುವದಿಲ್ಲ , ಮೃಣಾಲಿನಿ : ( ಸಿಟ್ಟಿನಿಂದ ) ಏನು, ಇದೆಲ್ಲಿಯ ಮಾತು ? ನನ್ನ ಸ್ವಾತಂತ್ರ್ಯ ವನ್ನು ಕಸಿದುಕೊಳ್ಳಲು ನೀವು ಯಾರು ? ಕೋಸಲೇಂದ್ರ : ( ನಗುತ್ತ ) ನಾನು ಯಾರೂ ಅಲ್ಲ. ಆದರೆ ನೀವು ನನಗೆ ಹೇಳುವ ಪಾಠ ಮುಗಿಯುವುದೇ ಇಲ್ಲ ! ಅದು ಮುಗಿದರಲ್ಲವೇ ನೀವು ಬನಸಿಲಾಲರಿಗೆ ಹೇಳಿಕೊಡುವದು ? ಮೃಣಾಲಿನಿ: ( ನಗುತ್ತ ) ಅದೇಕೆ ಅಷ್ಟು ಹಸಿ ದಡ್ಡರೋ ನೀವು ? ಕೋಸಲೇಂದ್ರ : ನಿಮಗೆ ಕ್ರಮೇಣ ತಿಳಿಯುತ್ತದೆ. ನಾನಾಗಿಯೇ ಯಾಕೆ ಹೇಳಬೇಕು ! ಸ್ವಲ್ಪ ಕುಳಿತುಕೊಳ್ಳಿರಿ, ಮೃಣಾಲಿನಿ ! ಮೃಣಾಲಿನಿ: ಇಲ್ಲ. ಹೊರಡಬೇಕು. ಕಾಲೇಜು ವಿದ್ಯಾರ್ಥಿಗಳ ಮಾರ್ಕ್ಸಿಸ್ಟ್ ಅಭ್ಯಾಸಕೂಟದ ಹೊತ್ತಾಯಿತು. ಮುಂದಿನ ವಾರ ಯಾವಾಗ ಬರಲಿ ?" ಕೋಸಲೇಂದ್ರ : ಬೇಕಾದಾಗ, ನಿಮ್ಮ ದಾರಿ ಕಾಯುತ್ತ ಇಲ್ಲಿಯೇ ಹೀಗೆ ಕುಳಿತುಬಿಡುತ್ತೇನೆ, ಮೃಣಾಲಿನಿ : ( ನಕ್ಕು ಪಾ: ಕೆ ಟ್ ಡೈರಿ ನೋಡುತ್ತ ) ನೀವು ಹೀಗೆಯೇ ಮನ ಸ್ಸಿಗೆ ಬಂದಷ್ಟು ಹೊತ್ತು ಕೂಡಬಹುದು. ಆದರೆ ನಾನು ಮಾತ್ರ....... ನಾನು........ಬುಧವಾರ ಸಂಜೆಗೆ ಬರುತ್ತೇನೆ. So long ! ಕೋಸಲೇಂದ್ರ: ಆಗಬಹುದು. So long, ಕಾ:ಮೈಡ್ ಮೃಣಾಲಿನಿ ! {: ಹೋಗುತ್ತಿರುವ ಮೃಣಾಲಿನಿಯನ್ನೇ ನೋಡುತ್ತ ನಿಲ್ಲುತ್ತಾನೆ. ] [ಕರೆ, ]