ಪುಟ:Yugaantara - Gokaak.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕಿಶನ್ ಕಿಶೋರ : ಓಹೋ ! ನಿನಗೆ ಎಚ್ಚರಾಯಿತೇ ! ಕೆಳಗಿನ ಡ್ರಾಯಿಂಗ್ ರೂಮಿನಲ್ಲಿ ಹೆಬ್ಬಾವು ಬಂದಿದೆಯಂತೆ; ಹೊಡೆಯಲು ಹೇಳುತ್ತಿದ್ದೇನೆ. ರುಕ್ಕಿಣಿದೇವಿ : ( ಗಾಬರಿಯಾಗಿ ) ಹೆಬ್ಬಾವೇ ? ಅಯ್ಯೋ ! ಇನ್ನೇನು ಗತಿ ? ಈ ಅಡವಿಯಲ್ಲಿ ನಾವು ಪಾರಾಗುವದು ಹೇಗೆ ? ( ಮೂರ್ಚೆ ಹೋಗುತ್ತಾಳೆ. ) ಕಿಶನ್ ಕಿಶೋರ: ( ಬಿಜೂಢನಾಗಿ ) ಘಾತವಾಯಿತು, ಓಂಪ್ರಕಾಶ ! ಸ್ವಲ್ಪ ನೀರು ತಾ ! ಬೇಡ, ಬೇಡ ! ಈಗ ಬಾಗಿಲು ತೆರೆಯುವದಿಲ್ಲ. ಇಲ್ಲಿಯೇ ಒಂದು ಲೋಟ ನೀರಿದೆ. ನೀನು ಹೋಗಿ ಪಹರೆಯವನನ್ನು ನೋಡು. ನಾನು ಇಲ್ಲಿ ಉಪಚರಿಸುತ್ತೇನೆ. ಅಯ್ಯೋ ! ಅಯ್ಯೋ ! ! [ ಶುಶೂಷಿಸುತ್ತಾನೆ. } [3]