ಪುಟ:Yugaantara - Gokaak.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ವಿಷಯವನ್ನು ನೀವು ಬಡಬಡಿಸುತ್ತಿರಿ. ನಿಮ್ಮನ್ನು ಸುಮ್ಮನೆ ಎಲ್ಲಿಗೆ ಕರೆದು ಕೊಂಡು ಬಂದು ಈ ಸಂಕಟಕ್ಕೆ ಗುರಿಮಾಡಿದೆನಲ್ಲ, ಎಂದು ಕೆಡಕೆಸಿ. ಸುತ್ತದೆ. ( ರೋಹಿಣಿಯು ಕಣ್ಣೀರನ್ನು ಒರಿಸಿಕೊಳ್ಳುತ್ತಾಳೆ. ) ಕಂತಿಚಂದ್ರ : ಅದರಲ್ಲಿ ನಿನ್ನದೇನು ತಪ್ಪು, ರೋಹಿಣಿ ! ನಾನೇ ಒಪ್ಪಿಗೆ ನಲ್ಲ. ಧರ್ಮಯುದ್ದದಲ್ಲಿ ಎಂಥ ಶತ್ರುವನ್ನಾದರೂ ನಾನು ಎದುರಿಸಬಲ್ಲಿ. ಆದರೆ ಈ ಬನಸಿಲಾಲನ ನೀಚತನಕ್ಕೆ ಬೇಸತ್ತು ಜೀವನದ ಬಗ್ಗೆ ಅಸಹ್ಯ ಪಟ್ಟು ಕೊಂಡಿದ್ದೇನೆ. ನಿನ್ನೆ ಮಹಿಳಾ ಸಂಘದಲ್ಲಿ ಏನಾಯಿತು, ರೋಹಿಣಿ | ರೋಹಿಣಿದೇವಿ : ಏನಾಗುವದು ಗೊತ್ತೇ ಇದೆ. ಹೊಸ ವರುಷ ಸಂಘಕ್ಕೆ ನಾನೇ ಅಧ್ಯಕಳಾಗಬೇಕೆಂದು ಒಬ್ಬ ಗೆಳತಿ ನನ್ನ ಹೆಸರು ಸೂಚಿಸಿದಳು. ಸರಿ, ಮರುಕ್ಷಣವೇ ಪ್ರತಿಸ್ಪರ್ಧಿಯಾಗಿ ಇನ್ನೊಂದು ಹೆಸರು ಬಂತು, - ಬನಸಿಲಾಲನ ಹೆಂಡತಿಯದು. ಕೊನೆಗೆ ವೋಟಿಗೆ ಬಿದ್ದು ಎರಡು ವೋಟ ಒಡೆದು ಹೋಗಿ ಅವಳೇ ಆರಿಸಿಬಂದಳು. ಇನ್ನು ಮೇಲೆ ಸಂಘದ ಸದಸ್ಯ. ತ್ಯಕ್ಕೆ ನಾನು ತ್ಯಾಗಪತ್ರ ಕೊಡಬೇಕೆಂದಿದ್ದೇನೆ. ಕಾಂತಿಚಂದ್ರ : ( ಹಾಸಿಗೆಯ ಮೇಲೆ ಒಂದು ಮಗ್ಗಲಾಗುತ್ತ ) ಒಂದೊಂದು ಸಂಸ್ಥೆಯು ಇಂದಿಗೆ ಮುಳ್ಳುಗಳ್ಳಿಯ ಕೊಂಪೆಯಾಗಿದೆ. ವ್ಯಕ್ತಿಯ ಹಕ್ಕಿಯನ್ನು ಹೀರುವ ಯಂತ್ರಮಾಯೆಯಾಗಿದೆ. ಹಿಣಿದೇವಿ: ( ಮುಂಗೈ ಗಡಿಯಾರ ನೋಡಿಕೊಂಡು ) ಕಾಂತಿಚಂದ್, ಈಗ ನಿಮಗೆ ಇನ್ನೊಂದು ಡೋಜು ಔಷಧ ಕೊಡಬೇಕು. ತೆಗೆದುಕೊಳ್ಳಿರಿ. ( ಕೊಡುತ್ತಾಳೆ. ) ಓಹೋ ! ಮತ್ತೆ ಜ್ವರ ಏರಹತ್ತಿದ ಹಾಗಿದೆಯಲ್ಲ. ಇದನ್ನು ಕುಡಿದ ಕೂಡಲೆ ಮಲಗಿಕೊಳ್ಳಿರಿ. ಕಾಂತಿಚಂಡ : ( ಎದ್ದು ಕುಳಿತು ಔಷಧ ಕುಡಿದು ಪುಟ್ಟ ಗ್ಲಾಸನ್ನು ಕೆಳಗಿಡುತ್ತ) ಆ ನೀಚ - ತುಂಬಿದ ಸಭೆಯಲ್ಲಿ ನಾನು ಸ್ವಾರ್ಥಸಾಧು, ಕೀರ್ತಿ ಕಾಮುಕ ಎಂದು ಸೂಚಿಸಿದನಲ್ಲ. ಅದಕ್ಕೆ ನನ್ನ ಮೈಯೆಲ್ಲ ಉರಿಯಹತ್ತಿದೆ. ಆ ಬಳಸಿ