ಪುಟ:Yugaantara - Gokaak.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ:ಕು ೨ ಲಾಲನನ್ನು ನನ್ನೆದುರಿಗೆ ತಂದು ನಿಲ್ಲಿಸಿರಿ. ಅವನಿಗೆ ದೇಹಾಂತ ಶಿಕ್ಷೆ ಕೊಡು ತೇನೆ. ನೀಚ ! ನೀಚ !! ( ಯಾರನ್ನೋ ಹೊಡೆಯಲು ಹೋದ ಹಾಗೆ ಕೈ ಬೀಸಿ ದೊಪ್ಪನೆ ಹಾಸಿಗೆಯ ಮೇಲೆ ಬೀಳುತ್ತಾನೆ. ) ರೋಹಿಣಿದೇವಿ : ( ಭಯ ಕಂಪಿತಳಾಗಿ ) ಯಾರೋ, ಯಾರಿದ್ದಿರಲ್ಲ ? ಮತ್ತೆ ಯಜಮಾನರಿಗೆ ಸನ್ನಿ ಬಂದಿದೆ. ಓಡಿಬನ್ನಿರಿ ! - ( ಉಪಚರಿಸುತ್ತಾಳೆ. ದಯಾರಾಮನು ಓಡಿಬರುತ್ತಾನೆ; ಕಾಂತಿ, ಚಂದ್ರರ ಕಾಲ ಬಳಿಗೆ ನಿಂತು ಉಪಚರಿಸುತ್ತಾನೆ. ಇದೇ ವೇಳೆಗೆ ಕೋಸಲೇಂದ್ರನು ಪ್ರವೇಶಿಸಿ ವಸ್ತುಸ್ಥಿತಿಯನ್ನು ಕಣ್ಣಾರೆ ಕಂಡೊಡನೆ ಕಾಂತಿಚಂದ್ರರ ಬಳಿಗೆ ಬಾಗಿ ಶುಶೂಷಿಸುತ್ತಾನೆ. ) ಕೋಸಲೇಂದ್ರ : ಏನಿದು ರೋಹಿಣಿದೇವಿ ! ಕಾ: ಮೆಡ್ ಮೃಣಾಲಿನಿ ಯವರು ನನಗೆ ಹೇಳಿದರು. ಆದರೆ ಕಾಂತಿಚಂದ್ರರ ಪ್ರಕೃತಿ ಇಷ್ಟು ಕ್ಷೀಣ ವಾಗಿದೆಯೆಂದು ನನಗೆನಿಸಿರಲಿಲ್ಲ. ರೋಹಿಣಿದೇವಿ : ( ಕಷ್ಟೊ ರಸಿಕೊಂಡು ) ಏನೂ ಇಲ್ಲ. ನನ್ನ ದುರದೃಷ ಇರು, ಕೋಸಲೇಂದ್ರಬಾಬು. ( ಇಷ್ಟರಲ್ಲಿ ಕಾಂತಿಚಂದ್ರರು ಚೇತರಿಸಿಕೊಂಡು ನರಳುತ್ತ CC ರೋಹಿಣಿ ! ಸ್ವಲ್ಪ ನೀರು ಕೊಡು ! ” ಎಂದು ಕ್ಷೀಣ ಧ್ವನಿಯಲ್ಲಿ ಕೇಳುತ್ತಾರೆ. ರೋಹಿಣಿದೇವಿ ನೀರು ತಂದು ಕುಡಿಸುತ್ತಾಳೆ, ಕಸಲೇಂದ್ರನು ಸಮೀಪದಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತು ಕೊಳ್ಳುತ್ತಾನೆ. ) ಕೋಸಲೇಂದ್ರ : ಇನ್ನು ನೀವು ಕುಳಿತುಕೊಳ್ಳಿರಿ, ರೋಹಿಣಿದೇವಿ! ಅವರಿಗೆ ಈಗ ಎಚ್ಚರಾಗಿದೆ. ಅಶಕ್ತತೆ ಇದ, ಮತ್ತೇನೂ ಅಲ್ಲ. ಕಾಂತಿಚಂದ : ( ಹಾಸಿಗೆಯ ಮೇಲೆ ಹೊರಳಿ ನೋಡಿ ) ಯಾರು ? ಕೋಸ ಲೇಂದ್ರರೇನು ? ಕ್ಷಮಿಸಬೇಕು, ಕೋಸಲೇಂದ್ರ ಬಾಬು, ನಾನು ಎದ್ದು ಕೂಡುವ ಹಾಗಿಲ್ಲ. ಕೋಸಲೇಂದ್ರ: ಛೇ ! ಛೇ ! ಹಾಗೆ ನೀವು ತೊಂದರೆ ಪಟ್ಟುಕೊಳ್ಳಬಾರದು. ಈಗ ನಿಮಗೆ ವಿಶ್ರಾಂತಿ ಬೇಕು, ಯಾವ ವಿಚಾರವಿಲ್ಲದೆ ಸ್ವಸ್ಥವಾಗಿ ಮಲಗಿ.