ಪುಟ:Yugaantara - Gokaak.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4೮ ಯುಗಾಂತರ ಕಾಂತಿಚಂದ್ರ : ( ನರಳುತ್ತ ) ದಿಲ್ಲಿಯು ನನ್ನನ್ನು ಮಲಗಿಸಿಬಿಟ್ಟಿದೆ ಕೋಸ ಲೇಂದ್ರರೆ! ಕೋಸಲೇಂದ್ರ : ಹೌದು, ರೋಹಿಣಿದೇವಿಯವರೆ, ಬನಸಿಲಾಲನ ವಿಷಯ ಇಷ್ಟು ದೀರ್ಘಕ್ಕೆ ಹೋಗಿದೆಯೆಂದು ನನಗೆ ಗೊತ್ತಿರಲಿಲ್ಲ. ಮೃಣಾಲಿನಿ ಯವರು ಹೇಳಿದರು. ರೋಹಿಣಿದೇವಿ : ಅದೃಷ್ಟದಂತೆ ಆ ಮಹಾರಾಯ ನಮ್ಮ ಬೆನ್ನು ಹತ್ತಿದ್ದಾನೆ. ಇದನ್ನೆಲ್ಲ ನೆನೆಸಿದಾಗ ಆ ಅನಾಥಾಶ್ರಮದ ಅಧ್ಯಕ್ಷಪದವಿಯಿಂದ ಇಷ್ಟೆಲ್ಲ ಆಯಿತು; ಅದನ್ನೇಕೆ ಬಿಟ್ಟುಕೊಡಬಾರದು ? ಎಂದೆನಿಸಹತ್ತಿದೆ. ಕೋಸಲೇಂದ್ರ : ಬಹಳ ಒಳ್ಳೆಯದು. ಅದನ್ನು ಬಿಟ್ಟು ಕೊಡಿರಿ, ಕಾಂತಿ ಚಂದ್ರಜಿ ! ಅದರಿಂದೇನಾಗಬೇಕಾಗಿದೆ. ಕಾಂತಿಚಂದ್ರ : ( ನರಳುತ್ತ ) ಅದು ನನಗೆಲ್ಲಿ ಬೇಕು ? ರೋಹಿಣಿ ಹೇಳಿದರೆ ಇವತ್ತೇ ತ್ಯಾಗಪತ್ರವನ್ನು ಕಳಿಸುತ್ತೇನೆ. ರೋಹಿಣಿದೇವಿ : ಇವತ್ತು ಕಳಿಸಿಬಿಡೋಣ. ಕೋಸಲೇಂದ್ರ : ರೋಹಿಣಿದೇವಿಯರೆ, ಇದೇ ಸಮಯದಲ್ಲಿ ನಾನು ನಿಮಗೆ ಇನ್ನೊಂದು ಮಾತು ಹೇಳಬಹುದೆ ? ಜನತೆಯ ಸೇವೆ ಮಾಡಲು ನಾವು ಹಾತೊರೆಯಬೇಕಾಗಿಲ್ಲ. ನಿಷ್ಕಾಮಸೇವೆಯ ಮರ್ಮವನ್ನು ಅರಿತಿದ್ದರೆ ಕಣ್ಣು ಹೊರಳಿಸಿದ ಕೆಲಸ ರಾಶಿಯಾಗಿ ಬಿದ್ದಿರುತ್ತದೆ. ರೋಹಿಣಿದೇವಿ : ( ತುಸು ಸಿಟ್ಟಿನಿಂದ ) ಈ ಮಾತನ್ನು ಅನೇಕ ಸಲ ಕೇಳಿ. ದೇನೆ. ಮಾರ್ಕ್ಸ್‌ವಾದಿಯಾದ ನಮ್ಮ ಮೃಣಾಲಿನಿ ಹೇಳುವದು ಇದನ್ನೇ ಇಂದು ನೀವು ಕವಿಗಳೂ ಇದಕ್ಕೆ ದನಿಗೂಡಿಸುತ್ತಿದ್ದೀರಲ್ಲ! ಸಲ್ಲಿಸಿದ ಸೇವೆಗೆ ತಕ್ಕುದಾಗಿ ಮಾನ- ಕೀರ್ತಿಗಳ ಸುಖವೊಂದು ಬರುತ್ತದೆ. ಅವನೂ * ಕೃಷ್ಣಾರ್ಪಣ ” ಎನಬೇಕೆ ? ಕಾಂತಿಚಂದ್ರ : ( ಸಾವಕಾಶವಾಗಿ ) ಈ ಮಾತು ನನಗೆ ಅರ್ಥವಾಗುವದಿಲ್ಲ, ಕೋಸಲೇಂದ್ರಬಾಬು ! ಮನುಷ್ಯನಿಗೆ ಲಭಿಸುವ ಸುಖಗಳಲ್ಲಿ ಉತ್ತಮ ವೆಂದರೆ ಇದು. ಇವನ್ನು ಬಿಟ್ಟರೆ ಉಳಿಯಿತೇನು ? ಮೃಣಾಲಿನಿಯ ಎಲ್ಲ