ಪುಟ:Yugaantara - Gokaak.pdf/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ೨ ೩೯ ನಿರ್ದಾಕ್ಷಿಣ್ಯತೆಯನ್ನು ನಾನು ಅರಗಿಸಬಲ್ಲೆ. ಆದರೆ ಅಂಕುಶದಿಂದ ತಿವಿದ ಹಾಗೆ ಸದಾ ಈ ಮಾತನ್ನು ಆಕೆ ಎತ್ತುತ್ತಾಳೆ. ನೀವು ತಿಳಿದವರೂ ಹೀಗೆ ಅನಬೇಕೆ ? ಕೋಸಲೇಂದ್ರ : ( ಸ್ವಲ್ಪ ನಕ್ಕು ) ಈ ಮಾತಿನಲ್ಲಿ ನನ್ನ ಹಾಗು ಮೃಣಾಲಿನಿ ಯವರ ತಿಳುವಳಿಕೆ ಒಂದೇ ಆಗಿದೆ. ಸುಖಕ್ಕೂ ಮಿಗಿಲಾದ ಇನ್ನೊಂದು ಅನುಭವವಿದೆ, ಕಾಂತಿಚಂದ್ರಜಿ. ಅದು ಆನಂದ. ಕಾಂತಿಚಂದ್ರ: ಆನಂದ ? ಸುಖವಲ್ಲದ ಆನಂದ ಯಾವುದು ? ಎಲ್ಲಿ ಸಿಕ್ಕುತ್ತದೆ ? ಕೋಸಲೇಂದ್ರ : ವ್ಯಕ್ತಿಯ ಅಂತರಾಳದಲ್ಲಿ. ರೋಹಿಣಿದೇವಿ : ಅದು ನಿಮ್ಮಂಥ ಕವಿಗಳಿಗೆ ಮಾತ್ರ ಸಾಧ್ಯ. ನಮಗಲ್ಲ. ಕೌಸಲೇಂದ್ರ : ( ಏಳುತ್ತ) ರೋಹಿಣಿದೇವಿಯವರೆ, ಒಂದಿಲ್ಲೊಂದು ದಿನ ಈ ಆನಂದ ಎಲ್ಲರ ಬದುಕಾಗುವದು. ಆದರೆ ಈಗ ಈ ಚರ್ಚೆ ಬೇಡ. ಅದರಿಂದ ಕಾಂತಿಚಂದ್ರರಿಗೆ ಸುಮ್ಮನೆ ಆಯಾಸ, ನಾನಿಲ್ಲಿದ್ದರೆ ಮಾತಿಗೆ ಮುಕ್ತಾಯವಿಲ್ಲ. ಕಾಂತಿಚಂದ್ರರು ವಿಶ್ರಮಿಸಲಿ. ಸದ್ಯಕ್ಕೆ ಹೊರಡುತ್ತೇನೆ. ನಮಸ್ತೆ, ನಮಸ್ತೆ, - ( ಹೋಗುತ್ತಾನೆ ) ಕಾಂತಿಚಂದ್ರ: ( ಮೆಲ್ಲನೆ ) ಈಗಿನ ಹುಡುಗರು ಒಡೆಯದ ಒಗಟವಾಗಿ ದ್ದಾರೆ, ರೋಹಿಣಿ, ಅವರ ಮಾತೊಂದೂ ಅರ್ಥವಾಗುವದಿಲ್ಲ. ರೋಹಿಣಿದೇವಿ : ಕಾಂತಿಚಂದ್ರ, ಅವರ ನೆತ್ತಿಯ ಮೇಲಿನ ಮಾಸ ಇನ್ನೂ ಆರಿಲ್ಲ. ಅಂತೇ ಹೀಗೆ ಮಾತಾಡುತ್ತಾರೆ. ನಿಮಗೆ ಗುಣವಾಗಲಿ. ಈ ಅನಾಥಾಶ್ರಮವನ್ನು ಇಂದಿಗೇ ಬನಸಿಲಾಲನಿಗೆ ಬಿಟ್ಟುಕೊಡೋಣ. ಅವನ ಹಾದಿ ಬೇಡ ನಮಗೆ, ಅವನ ಸಂಬಂಧವಿಲ್ಲದ ಬೇರೆ ಕಾರ್ಯವನ್ನಾರಿಸಿ ಅದರಲ್ಲಿ ಕೆಲಸ ಮಾಡೋಣ, ಭಾರತದ ಘಟನೆಯ ಮಹಾಕೂಟವನ್ನು ಏರ್ಪಡಿ ಸಲು ಇನ್ನು ಮೇಲೆ ಶಾಸನ ಸಭೆಯ ಚುನಾವಣೆಗಳಾಗುವವೆಂದು ಸರಕಾರ ಸಾರಿದೆಯಲ್ಲ ? ದಿಲ್ಲಿಯಿಂದ ನೀವು ಅಸೆಂಬ್ಲಿಗೆ ನಿಲ್ಲುವಿರಂತೆ.