ಪುಟ:Yugaantara - Gokaak.pdf/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕಾಂತಿಚಂದ್ರ : ಇದೊಂದು ಒಳ್ಳೆಯ ಯೋಚನೆ, ರೋಹಿಣಿ, ಹಾಗೆ ಮಾಡಿದರೆ ದೇಶಕ್ಕೆ ಹಿತಕರವಾದ ಕೆಲಸ ನನ್ನಿಂದ ಆಗಬಹುದು. ದಯಾರಾವತ್ : ಮೊನ್ನೆ ಅವರ ಆಳುಮಗ ಹೇಳುತ್ತಿದ್ದ, ಸರಕಾರ್ ! ಬನಸಿ ಲಾಲರು ಯಾವುದೋ ಚುನಾವಣಿಗೆ ನಿಲ್ಲುವವರಿದ್ದಾರಂತೆ. ಮಂತ್ರಿಯಾಗ ಬೇಕೆಂದು ಮಾಡಿದ್ದಾರಂತೆ. ಕಾಂತಿಚಂದ್ರ : ( ನೊಂದ ಧ್ವನಿಯಲ್ಲಿ ) ಏನು, ಆ ನೀಚ ಇದರಲ್ಲಿಯೂ ಕೈ ಹಾಕಿದನೇ ? ರೋಹಿಣಿದೇವಿ : ( ಉದ್ವೇಗದಿಂದ ) ಇದು ಯಾವ ಹಾರುಸುದ್ದಿ , ದಯ ರಾಮ ? ಯಾರು ಹುಟ್ಟಿಸಿದರು ಇದನ್ನು ? ದಯಾರಾಮ್ : ಬನಸಿಲಾಲರು ಮಾತಾಡುವದನ್ನು ಆ ಆಳುನಗ ಕೇಳಿದ ಸಂತೆ, ಸರಕಾರ್. ರೋಹಿಣಿದೇವಿ : ಅದನ್ನೆಲ್ಲ ನೋಡಿಕೊಳ್ಳುತ್ತೇನೆ. ಕಾಂತಿಚಂದ್ರ ! ನಿನ್ನ - ಎಲ್ಲ ಚಿಂತೆಯನ್ನು ತಳ್ಳಿಹಾಕಿರಿ. ಮೊದಲು ನಿಮ್ಮ ಪ್ರಕೃತಿ ಗುಣವಾಗಲಿ. ನಾನು ಈ ವಿಷಯದಲ್ಲಿ ಎಲ್ಲ ಹಂಚಿಕೆ ಮಾಡುತ್ತೇನೆ. ಕಾಂತಿಚಂದ್ರ: ( ನರಳುತ್ತ ) ಎಲ್ಲಿ, ರೋಹಿಣಿ, ಸ್ವಲ್ಪ ನೀರು ಕೊಡು. ಮುಕ್ಕಿ ಬಾಯಾರಿಕೆ ಆಗಿದೆ. ( ರೋಹಿಣಿದೇವಿ ನೀರು ಕೊಡುತ್ತಾಳೆ. ) { ತೆರೆ ]