ಪುಟ:Yugaantara - Gokaak.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ೦ತು ೨ ಪ್ರವೇಶ 4 { ಕೋಸಲೇಂದ್ರನ ಕೂಡ. ಕೋಸಲೇಂದ್ರನು ಆರಾಮ ಕುರ್ಚಿಯಲ್ಲಿ ಕಾವ್ಯ ಮಗ್ನನಾಗಿ ಕುಳಿತಿದ್ದಾನೆ | ಕೋಸಲೇಂದ್ರ : ( ತನ್ನಷ್ಟಕ್ಕೆ ತಾನೆ ) ನಾನು ಕವಿ, ನಾ ಪ್ರವಾದಿ, ನೀನೆಂದಿಗು ಮಾರ್ಕ್ಸವಾದಿ ! ಕವಲೊಡದಿವೆ ನಮ್ಮ ಹಾದಿ, ನೀನು ನವ್ಯ, ನಾ ಬುನಾದಿ. ಮೃಣಾಲಿನಿ, ಮೃಣಾಲಿನಿ ! ನವೋಷಶಾಲಿನಿ ! ಕವಲೊಡೆದೂ ಕಲೆಯಬಹುದು. ಭಿನ್ನವಿದ್ದು ಬೆರೆಯಬಹುದು. ಕ್ಷಿತಿಜ, --ಭೂಮಿ-ಿ ಮದಂಚು. ರಶ್ಮಿ ತುಂತುರಗಳ ಸಂಚು,-- ಇಂದ್ರಧನು ! ವ ಣಾಲಿನಿ ! ನವೋಷಶಾಲಿನಿ ! ( ಮೃಣಾಲಿನಿಯು ಕೈಯಲ್ಲಿ ಒಂದು ಪುಸ್ತಕವನ್ನು ಹಿಡಿದುಕೊಂಡು ಪ್ರವೇಶಿಸುತ್ತಾಳೆ. ) ಮೃಣಾಲಿನಿ : ಏನು ಕವಿಗಳೆ, ಯಥಾಪ್ರಕಾರ ಕಾವ್ಯ ಸಮಾಧಿಯಲ್ಲಿದ್ದೀರಾ ? ಕೋಸಲೇಂದ್ರ: ( ಎದ್ದು ಸ್ವಾಗತಿಸುತ್ತ ) ಬಾ, ಬಾ ಮೃಣಾಲಿನಿ ! ನಿನ್ನ ದಾರಿಯನ್ನೇ ನೋಡುತ್ತ ಕುಳಿತಿದ್ದೇನೆ. ಹೀಗೆ ಬಾ, ಇವತ್ತು ಯಾವ ಪುಸ್ತಕ ತಂದೆ ? ಸಾಲಿನಿ : ( ಕುಳಿತುಕೊಳ್ಳುತ್ತ, ಉತ್ಸಾಹದಿಂದ ) ಇವತ್ತು ಮ್ಯಾಕ್ಸಿಮ್ ಗಾ:ರ್ಕಿಯ Problems of Soviet Literature ತಂದಿದ್ದೇನೆ ಕೋಸು ಲೇಂದ್ರ ! ಬಹಳ ಒಳ್ಳೆಯ ಪುಸ್ತಕ ಇದು. ಇದನ್ನು ಓದಿ ಚರ್ಚಿಸೋಣ.