ಪುಟ:Yugaantara - Gokaak.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಜೀವನದ ನಿರ್ಮಾಣಕ್ಕಾಗಿ ಸರ್ವಸ್ವತಂತ್ರನಾಗಿರುವನೆಂದು. ಹೀಗಾಗಿ ಕವಿಯು ಇಂದು ಮಾರ್ಕ್ಸ್‌ವಾದದ ಹಾಗು ಅನುಭಾವಗಳ ನಡುವೆ ಒಂದು ಸೇತುವೆ ಕಟ್ಟಿ * ಪೂರ್ಣ ಜೀವನದ ದರ್ಶನವನ್ನು ನಿಚ್ಚಳವಾಗಿಸಬೇಕಾಗಿದೆ. ಮಾರ್ಕ್ಸ್‌ವಾದವು ಸಾರುವ ಕ್ರಾಂತಿ, ಕವಿಯ ದೃಷ್ಟಿಯಲ್ಲಿ ಒಂದು ದೈವಿಕ ಘಟನೆ; ವ್ಯಕ್ತಿಯನ್ನು ಪ್ರೇರಿಸುವ ಹಿಂಸೆಯಲ್ಲ. ಇಂಥ ಕ್ರಾಂತಿಯು ಬರುವದಿದ್ದರೆ ಅದನ್ನು ಯಾರೂ ತಡೆಗಟ್ಟಲಾರರು. ಮಾರ್ಕ್ಸ್ನೇ ಹಿಂಸೆ ಯನ್ನು ಬೋಧಿಸುವದಿಲ್ಲ. ಸಮತೆಯನ್ನು ಸಂಧಿಸುವಾಗ ಹಿಂಸೆಯು ವರ್ಗ ಸಮರದ ವಿಧಾಯಕ ಕಾರ್ಯಕ್ರಮದಲ್ಲಿ ನಡುವೆ ತಲೆಯೆತ್ತಿದರೆ ಅದು ವ್ಯಕ್ತಿಯ ಹಾಗು ಸಮಾಜದ ಅಪೂರ್ಣತೆಯೇ ಹೊರತು ಬೇರೆ ಏನೂ ಆದಕಾರಣ ಕವಿಯು ಸಮಶಾಸಮಾಜವನ್ನು ತನ್ನ ಧೈಯವಾಗಿ ಸ್ವೀಕರಿಸುತ್ತಾನೆ. ಆದರೆ ಇದು ಸಾಮಾಜಿಕ ಪುನರ್ಘಟನೆಯ ವಿಷಯ ವಾಯಿತು. ವ್ಯಕ್ತಿಯ ಜೀವನದ ಪುನರ್ಘಟನೆಯೂ ಆಗಬೇಕಲ್ಲ ? ಈ ಹಾದಿಯಲ್ಲಿ ವ್ಯಕ್ತಿಯ ಸಂಸ್ಕೃತಿಯೂ ಬೆಳೆಯಬೇಕು. ಮಾನವನನ್ನು ಮಡಿಪುಗಳ ಬಂಧನದಿಂದ ಸ್ವತಂತ್ರವಾಗಿಸಿ ಪ್ರೀತಿ, ಸ್ನೇಹ, ಕರುಣೆ, ಸೌಂದರ್ಯ ಗಳ ಹಾದಿಯನ್ನು ತುಳಿಯಹಚ್ಚುವದೇ ಈ ಸಂಸ್ಕೃತಿಯ ಸಾಧನಮಾರ್ಗ, ಆದಕಾರಣ ಕವಿಯು ಇದನ್ನೂ ತನ್ನ ಧೈಯವಾಗಿ ಸ್ವೀಕರಿ ಸುತ್ತಾನೆ. ಆತ್ಮ, ಅಮರತೆ, ಸೂಕ್ಷ್ಮತರ ಜೀವನ,- ಇವೆಲ್ಲ ಇನ್ನೂ * ಸಾಮಾನ್ಯರ ಅನುಭವದ ಭಾಗಗಳಾಗಿವೆ. ವಿಜ್ಞಾನಿಯು ತನ್ನ ಪ್ರಯೋಗ ಮಂದಿರದಲ್ಲಿ ಸಂತತ ಸಂಚಲನೆಯ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿ ಸುವಂತೆ ಸಂಸ್ಕೃತಿ-ಜಿಜ್ಞಾಸುವು ಆಶ್ರಮಗಳಲ್ಲಿ ಆತ್ಮ ಅಮರತೆ ಗಳನ್ನು ಕುರಿತು ತನ್ನ ಪ್ರಯೋಗಗಳನ್ನು ನಡೆಸುತ್ತಾನೆ. ಸಾಮಾನ್ಯ ಮಾನವರ ದೃಷ್ಟಿಯಿಂದ ಸಂಚಲನೆ-ಚಿರಂತನತೆಗಳೆರಡೂ ಇನ್ನೂ ಕಾಣ ಬೇಕಾದ ಸತ್ಯದ ವಿಸ್ತಾರವಾಗಿದೆ. ಆದರೆ ಕವಿಯು ಮಾರ್ಕ್ಸ್‌ವಾದದ ಸಮತಾಸಮಾಜವನ್ನು ಸ್ವೀಕರಿಸಿ ದಂತೆ ಮಾರ್ಕ್ಸ್‌ವಾದಿಗೆ ಪ್ರೀತಿ-ಸ್ನೇಹ-ಕರುಣೆ -ಸೌಂದರ್ಯಗಳಲ್ಲಿ ನೆಲೆನೆಲೆ ಯಾಗಿ ನಿಂತ ಸಂಸ್ಕೃತಿಯು ಮಾನ್ಯವಾಗಬಹುದು. ಯಾಕಂದರೆ ಇದು