ಪುಟ:Yugaantara - Gokaak.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅo 3 ಸುತ್ತದೆ. ರಕ್ತದ ಕಾಲುವೆ ಹರಿಯುವದಿದ್ದರೆ ಹರಿದಾವು. ಆದರೆ ರಕ್ತ ಪಾತಕ್ಕೆ ನಾವೇಕೆ ಔತಣ ಕೊಡಬೇಕು ? ಮೃಣಾಲಿನಿ : ಅದು ಅನಿವಾರ್ಯ ಎಂದು ಮಾರ್ಕ್ಸ ಹೇಳಿದ್ದಾನೆ; ಉಪಾಸ್ಯೆ “ದೇವತೆ ಎಂದು ಎಲ್ಲಿಯೂ ಸೂಚಿಸಿಲ್ಲ. ಬಂಡುವಲಗಾರನು ರಕ್ತ ಹೀರುವ ಜಿಗಳೆ ಇದ್ದ ಹಾಗೆ. ಸತ್ತಾಗ ಮಾತ್ರ ಜಿಗಳೆಯು ರಕ್ತ ಹೀರುವವನ್ನು ಬಿಟ್ಟಿತು. ಕೋಸಲೇಂದ್ರ: ಹಾ ! ಮತ್ತೆ ಪ್ರಾರಂಭವಾಯಿತು, ನಿನ್ನ ವರ್ಗಸಮರ. ಅದು ಹೋಗಲಿ; ಮಾರ್ಕ್ಸ, ಮಾರ್ಕ್ಸ ಎಂದು ನಿನ್ನ ಗುರುವನ್ನು ಇಷ್ಟೊಂದು ಮೇಲುಗಟ್ಟಿಕೊಂಡು ಬರುತ್ತೀ ! ಆದರೆ ಆ ಮಾರ್ಕ್ಸನೂ ಸಂಪಾದಿಸಿದ ಕೆಲವು ಮಾರ್ಕ್ಸ' ಇವೆ. ತೋರಿಸಿಕೊಡಲೇನು ? ಮೃಣಾಲಿನಿ : ಆಗಲಿ, ಇನ್ನೂ ನಿನ್ನ ಬಾಯಿಂದ ಏನೇನು ಕೇಳುವದಿದೆಯೋ “ಯಾರು ಕಂಡಿದ್ದಾರೆ.' ಕೋಸಲೇಂದ್ರ: ದೇವರಿಲ್ಲ, ಆತ್ಮವಿಲ್ಲ, ಅಮರತೆ ಇಲ್ಲ ಎಂದು ಮಾರ್ಕ್ಸ್ ಸಾರಿದ.. ... ....... ಮೃಣಾಲಿನಿ : ( ಆವೇಶದಿಂದ ) ಹೌದು. ಆ ವಿಷಯವನ್ನೆ ತಬೇಡ ! ದೇವ ರೆಂದರೆ ಬರಿ ಕಲ್ಲು, ಧರ್ಮವು ಒಂದು ದೊಡ್ಡ ಒಳಸಂಚು. ವೈಕುಂರವ,ಮೇಲಿನ ವರ್ಗದವರ ಸ್ವಾರ್ಥ ಕಂಡ ಕನಸು ! ( ಸ್ವಲ್ಪ ಯೋಚಿಸಿ ) ಅಲ್ಲದೆ ಮಾರ್ಕ್ಸ ಹೇಳಿದ್ದು ಅವನ ವೈಯ್ಯಕ್ತಿಕ ಅಭಿಪ್ರಾಯವಲ್ಲ. ನಿಸರ್ಗ ಇತಿಹಾಸ- ವಿಜ್ಞಾನಗಳು ತೋರಿಸಿದ ಸತ್ಯಾಂಶವೆ; ಅವನ ಸಿದ್ದಾಂತ. ಕೋಸಲೇಂದ್ರ: ಅದಿರಲಿ, ಮಾನವ ಜನಾಂಗಕ್ಕೆ ಬುದ್ದಿಯ ಇತಿಹಾಸ ವೊಂದು ಇದ್ದಂತೆ ಪರಾಬುದ್ದಿಯ ಇತಿಹಾಸವೂ ಇದೆ, ಮೃಣಾಲಿನಿ ! ವಿಜ್ಞಾನಿಯ ಅನುಭವದೊಂದಿಗೆ ಅನುಭಾವಿಯ - ವಿಜ್ಞಾನ' ವೂ ಇದೆ. ಮೃಣಾಲಿನಿ: ಅದೆಲ್ಲ ಸುಳ್ಳು. ಜಗತ್ತು ಪ್ರತಿಕ್ಷಣಕ್ಕೆ ಮಾರ್ಪಡುತ್ತಿರುತ್ತದೆ. ಇದೊಂದೇ ಸತ್ಯ. ಕೋಸಲೇಂದ್ರ : ಅದು ಹೇಗಾದೀತು ? ಕ್ಷರ ಪುರುಷನ ಬೆನ್ನಿಗಂಟಿಕೊಂಡು ಅಕ್ಷರ ಪುರುಷನಿದ್ದಾನೆ. ಅದೇನೇ ಇರಲಿ, ಮೃಣಾಲಿನಿ ! ನಿನಗೆ ದೇವರನ್ನು ತೋರಿಸಿದರೆ ?