ಪುಟ:Yugaantara - Gokaak.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತತಿ ಮೃಣಾಲಿನಿ: ನೀನು ನನಗೆ ಓಸಿಯಮ್ ಇಲ್ಲವೆ ಮದಿರೆಯನ್ನು ಕೊಡದ `ಹೊರತು ಅದು ಸಾಧ್ಯವಿಲ್ಲ. ಮಾಂತ್ರಿಕನ ಇಂದ್ರಜಾಲ-ಮಹೇಂದ್ರಜಾಲ ಗಳು ಈ ಮಾರ್ಕ್ಸವಾದಿಯ ಬುದ್ದಿಯ ಮೇಲೆ ನಾಟುವದಿಲ್ಲ, ಕೋಸಲೇಂದ್ರ, ಕೋಸಲೇಂದ್ರ : ಇಲ್ಲ ! ನಿನಗೆ ಇದ್ದಕಿದ್ದ ಹಾಗೆ ಯಾವ ಮಂತ್ರ-ತಂತ್ರ ಇಲ್ಲದೆ ದೇವರನ್ನು ತೋರಿಸಿದರೆ ?" ಮೃಣಾಲಿನಿ : ಆಗಲಿ, ಹಾಗಾದರೆ, ಆ ನಿನ್ನ ದೇವರನ್ನು ಒಂದು ಕೈ ನೋಡಿ - ಬಿಡುತ್ತೇನೆ, ಕೋಸಲೇಂದ್ರ : ಆಗಬಹುದು. ಹಾಗಿದ್ದರೆ ನಾಡಿದ್ದು ನನ್ನ ಜೊತೆಗೆ ಪ್ರಯಾಣಕ್ಕೆ ಸಿದ್ಧಳಾಗು. ಮೃಣಾಲಿನಿ : ಎಲ್ಲಿಗೆ ? ಕೋಸಲೇಂದ್ರ : ಒಂದು ಪವಿತ್ರ ಸ್ಥಾನಕ್ಕೆ. ಮೃಣಾಲಿನಿ : ಪವಿತ್ರವೋ ಅಪವಿತ್ರವೋ ನೋಡಿದ ಮೇಲೆ ಹೇಳುತ್ತೇನೆ. ಹೊರಡುವ ತಯಾರಿಯನ್ನಂತೂ ಮಾಡುತ್ತೇನೆ. ಕೋಸಲೇಂದ್ರ : ( ನಗುತ್ತ ಆದರೆ ಈ ಪುಸ್ತಕಗಳು ಮಾತ್ರ ಇಲ್ಲಿಯೇ ಇರಲಿ, ಇನ್ನು ಪುಸ್ತಕಪಾಂಡಿತ್ಯ ಸಾಕು. ಜಗತ್ತನ್ನನ್ನು ಕಣ್ಣೆರೆದು ನೋಡೋಣ. ( ಅತ್ತಿತ್ತ ತಿರುಗಾಡುತ್ತಾನೆ. ) ಮೃಣಾಲಿನಿ : ಅಂದರೇನು ? ಇಷ್ಟು ದಿನ ಕಣ್ಣು ಮುಚ್ಚಿಕೊಂಡು ನಾವು - ಬಾಳಿದಿವೆ ? ಕೋಸಲೇಂದ್ರ : ಮುಂದೆ ತಾನೇ ಗೊತ್ತಾಗುವದು. So long, ಮೃಣಾಲಿನಿ. ಮೃಣಾಲಿನಿ: so long, ಆದರೆ ಕೋಸಲೇಂದ್ರ, ಇನ್ನೊಂದೇಕೆ ಸ್ಪಂದನ ನಿನ್ನಲ್ಲಿ ಇವತ್ತು ? ನಾನಿಲ್ಲದಾಗ ಆ ದೇವರು ಬಂದಾನು ? ಎಚ್ಚರಿಕೆ ! ( ನಗುತ್ತ ಹೋಗುತ್ತಾಳೆ, ನಗೆಮೊಗದಿಂದ ಕೋಸಲೇಂದ್ರನು ಅವಳನ್ನು ನೋಡುತ್ತ ನಿಲ್ಲುತ್ತಾನೆ. ) ತ,