ಪುಟ:Yugaantara - Gokaak.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅ೦ಕು 3 ಪ್ರವೇಶ ೪, [ ಮಾಹುವಿನ ಹತ್ತಿರದಲ್ಲಿಯ ಬಂಗಲೆ, ಕಿಶನ್‌ಕಿಶೋರ ರುಕ್ಷ್ಮಿಣಿ ದೇವಿಯರು ಇಾಯಿಂಗ್ ರೂಮಿನಲ್ಲಿ ಕುಳಿತಿದ್ದಾರೆ. ಹತ್ತಿರ ಓಂಪ್ರಕಾರನು ನಿಂತಿದ್ದಾ ನ. ] ಕಿಶನಕಿಶೋರ : ಪಹರೆಯವ ಇನ್ನಾವನೂ ಸಿಗುವದಿಲ್ಲೋ, ಓಂಪ್ರಕಾಶ ? ಓಂಪ್ರಕಾಶ: ಇಲ್ಲ, ಸರಕಾರ್‌, ಸರ್ಪದಂಶವಾಗಿ ಅವನು ತೀರಿಕೊಂಡಂದಿ ನಿಂದ ಯಾರೂ ಇತ್ತ ಕಡೆಗೆ ಒಡಹಾಯುತ್ತಿಲ್ಲ. ನಾನು ವಿಶ್ವ ಪ್ರಯತ್ನ ಮಾಡಿದೆ. ಜೀವಕ್ಕೆ ಸುರಕ್ಷತೆಯಿಲ್ಲದಾಗ ಎಷ್ಟು ಸಂಬಳ ತೆಗೆದುಕೊಂಡೇನು ಮಾಡುವದು ಎಂದು ಕೇಳುತ್ತಾರೆ ಜನ. ಕಿನ್ಕಿಶೋರ : ಮನೆಯಲ್ಲಿ ಬಾಗಿಲ ಹಾಕಿ ಕುಳಿತರೆ ಸಾವು ತಪ್ಪಿಸಬಹು ದೆಂದು ತಿಳಿದರೋ ಆ ಜನ ? ಸಾವು ಬರುವದಿದ್ದರೆ, ಹಾಸಿಗೆಯಲ್ಲಿಯೇ ಬಂದು ಕಚ್ಚುತ್ತದೆ. ಆಯುಷ್ಯ ಗಟ್ಟಿಯಾಗಿದ್ದರೆ ಅಗ್ನಿದಿವ್ಯದೊಳಗಿಂದ ಸಹ ಮನುಷ್ಯ ಪಾರಾಗುತ್ತಾನೆ. ಓಂಪ್ರಕಾಶ : ಹೌದು, ಸರಕಾರ್ ! ಆದರೆ ಆ ಜನರಿಗೆ ಇದು ಹೊಳೆ ಯುವದಿಲ್ಲ. ಕಿಶನ್‌ಕಿಶೋರ : ಅಡಿಗೆಯವನ ವಿಷಯ ಎಲ್ಲಿಗೆ ನಿಂತಿದೆ, ರುಕ್ಕಿಣಿ ? ರುಕ್ಕಿಣಿದೇವಿ : ಅಂದು ಆಭರಣಗಳನ್ನು ಕದ್ದು ಕೊಂಡು ಓಡಿಹೋದವ ಇನ್ನೂ ವರೆಗೂ ಪತ್ತೆಯಾಗಿಲ್ಲ. ನನ್ನ ಅದೃಷ್ಟಕ್ಕೆ ಇನ್ನೊಬ್ಬ ಅಡಿಗೆಯ ವನೂ ಸಿಕ್ಕಿಲ್ಲ. ಸದ್ಯಕ್ಕೆ ಓಂ ಪ್ರಕಾಶನೇ ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ಕಿಶನ್‌ಕಿಶೋರ : ಕೈತುಂಬ ಸಂಬಳ ಕೊಟ್ಟರೂ ಈ ಜನ ಹೀಗೇಕೆ ಮಾಡುವ ವರು, ಓಂಪ್ರಕಾಶ ? ಓಂಪ್ರಕಾಶ : ಇನ್ನೂ ಯುದ್ಧ - ಪಾಕಶಾಲೆಗಳಿಗೆ ಹೋದ ಅಡಿಗೆಯವರು ತಿರುಗಿ ಮನೆಗೆ ಬಂದಿಲ್ಲ, ಸರಕಾರ್ ! ಇದ್ದ ಬಿದ್ದ ನಾಲ್ಕು ಮಂದಿ, ಅಲ್ಲಿ ಅರಣ್ಯದಲ್ಲಿ ಕುಳಿತೇನು ಮಾಡುವದು ಎಂದು ಮೂಗು ಮುರಿಯುತ್ತಾರೆ. ಕಿಶನ್‌ಕಿಶೋರ : ಅವರಿಗೆ ಇನ್ನೇನು ಬೇಕಂತೆ ?