ಪುಟ:Yugaantara - Gokaak.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆಂಕ 3 ಕಿಶನ್ ಕಿಶೋರ : ಸಿಟ್ಟಿನಿಂದ ) ವನಶ್ರೀಯ ಮಧ್ಯದಲ್ಲಿದ್ದು ಧ್ಯಾನ ಮಾಡ ವದು ಎಷ್ಟು ಅನುಕೂಲವೆಂಬುದು ಆ ಮೂರ್ಖನಿಗೇನು ಗೊತ್ತು? ರುಕ್ಕಿಣಿ ಇದು ನಮ್ಮ ಪರೀಕ್ಷಾ ಸಮಯ. ಈಗ ನಾವು ಹೊಯ್ದಾಡಬಾರದು. ಸ್ಥಿರ ಮನಸ್ಸಿನಿಂದ ನಮ್ಮ ಧ್ಯಾನವನ್ನು ಬೆಳಿಸಬೇಕು. ನಿಶ್ಚಯವಾಗಿ ಅದರ ಫಲ ಸಿಕ್ಕುವುದು, ಏನು ? ರುಕ್ಕಿಣಿದೇವಿ: ( ಬಹಳ ಪ್ರಯತ್ನಿಸಿ ) ಹೂಂ. ಕಿಶನ್ ಕಿಶೋರ : ಈ ಎಲ್ಲ ಪ್ರತಿಕೂಲಗಳಿಂದ ಮನಸ್ಸು ಚಂಚಲವಾಗಿರುವ ದೇನೋ ನಿಜ, ಈಗ ಕೆಲವು ದಿನಗಳಿಂದ ಚಿತ್ರದ ಏಕಾಗ್ರತೆಯೆ ನನಗೆ ಸಾಧಿಸದಾಗಿದೆ. ರುಕ್ಕಿಣಿದೇವಿ: ( ಉತ್ಕಂಠಯಿಂದ ) ನನಗಂತೂ ಈಗ ಕೆಲವು ದಿನಗಳಿಂದ ಕಣ್ಣು ಮುಚ್ಚಿದೊಡನೆ ಘಟಸರ್ಪಗಳೇ ಎದುರಿಗೆ ಬಂದು ನಿಂತ ಹಾಗಾಗು ತದೆ. ನಿದ್ದೆಯ ವೇಳೆಯೊಂದನ್ನು ಬಿಟ್ಟು ಉಳಿದ ಸಮಯದಲ್ಲಿ ನಾನು ಕಣ್ಣನ್ನೇ ಮುಚ್ಚುವದಿಲ್ಲ. ಕಿಶನ್ ಕಿಶೋರ : ಛೇ ! ಹುಚ್ಚಿ ! ಹೀಗೆ ಅಂಜುಬುರುಕರಾದರೆ ಹೇಗೆ ? ಧ್ಯಾನದಿಂದ ನಿನ್ನ ಕುಂಡಲಿನಿಯು ಈಗ ಜಾಗೃತವಾಗುತ್ತಿರಬಹುದು. ಅಂಥ ಸಮಯಕ್ಕೆ ಆದಿಶೇಷನು ಕಾಣಿಸಿಕೊಳ್ಳುತ್ತಾನಂತೆ. ರುಕ್ಕಿಣಿದೇವಿ : ( ನಿಟ್ಟುಸಿರು ಬಿಟ್ಟು ) ಏನೋ ! ದೇವರೇ ಬಲ್ಲ. ಕಿಶನ್‌ಕಿಶೋರ : ( ಪ್ರಯತ್ನ ಪಟ್ಟು ಉಲ್ಲಾಸದಿಂದ ) ರುಕ್ಕಿಣಿ, ಈಗ ಕಬೀರನ ಕೆಲವು ಗೀತಗಳನ್ನು ಅಂದು ತೋರಿಸುತ್ತೇನೆ. ಅದರಲ್ಲಿ ಇಂಥ ಅನುಭವದ ವರ್ಣನೆ ಇದೆ. ಓಂಪ್ರಕಾಶ, ನನ್ನ ಟೇಬಲ್ಲಿನ ಮೇಲೆ ಒಂದು ಪುಸ್ತಕ ತೆರೆದಿಟ್ಟಿದೆ ನೋಡು; ತಂದು ಕೊಡು. ಓಂಪ್ರಕಾಶ : ಜೀ ! ತರುತ್ತೇನೆ. ಆದರೆ ಇನ್ನೊಂದು ಮಾತನ್ನು ತನ್ನ ಕಿವಿಯ ಮೇಲಿಡಬೇಕು. ಈಗೆಂಟು ದಿನಗಳಿಂದ ಇಲ್ಲಿ ಒಂದು ಹುಲಿಯ ಹಾವಳಿಯಾಗಿದೆ. ದನ ಕಾಯುವವ ಇಂದು ಬೆಳಿಗ್ಗೆ ಹೇಳುತಿದ್ದ ; ಇಲ್ಲಿಂದ ಸಮೀಪದಲ್ಲಿರುವ ಅವನ ಗುಡಿಸಲಕ್ಕೆ ಬಂದು ಒಂದು ಕರು ತಿಂದು ಹೋಯಿತಂತೆ. ನಾವೂ ಎಚ್ಚರದಿಂದಿರಬೇಕು, ಸರಕಾರ್ ! ದಿಲ್ಲಿಯಲ್ಲಿ