ಪುಟ:Yugaantara - Gokaak.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆcಳು 3 ಪ್ರವೇಶ ೫. { ತರ್ಮದೆಯ ತೀರದಲ್ಲಿಯ ಒಂದು ಹಳ್ಳಿಯ ದಾರಿಯಲ್ಲಿ, ಬಾಕಿ ಪೋಷಾಕಿನಲ್ಲಿ ಕೋಸಲೆಂದ್ರನು ಕೈಯಲ್ಲಿ ಒಂದು ಚಿತ್ರವನ್ನು ಹಿಡಿದು ಕೊಂಚು ಹೆಗಲಿಗೆ ಸೈನಿಕನು ಹೊರುವಂತಹ ಚೀಲವನ್ನು ಹಾಕಿ ತಾನೆ. ಅವನ ಹಿಂದಿನಿಂದ ದಣಿದು ಹೋದ ಮೃಣಾಲಿನಿಯು ಕಾಲೆಳೆಯುತ್ತ ಬರುತ್ತಾಳೆ, ] ಕೋಸಲೇಂದ್ರ : ಇಲ್ಲಿ ಹೀಗೆ ಬಾ, ಮೃಣಾಲಿನಿ ! ಈ ಮರದ ನೆಳಲಿನಲ್ಲಿ ತುಸು ವಿಶ್ರಮಿಸೋಣ, ನಾಡಿದ್ದು ಒಂಮ ಪವಿತ್ರ ಸ್ಥಳಕ್ಕೆ ಹೋಗೋಣ, ಎಂದು ಆಗ ನಿನಗೆ ಹೇಳಿದ್ದೆ. ಆ ಮಾತಿಗೆ ಈಗ ಎರಡು ತಿಂಗಳ ಮೇಲಾಯಿತು. ಕಾಂತಿಚಂದ್ರರ ಶುಶೂಷೆಗೆಂದು ನೀನು ನಿಂತೆ. ಬರುವಾಗ ಅವರನ್ನು ಕಾಣುವದಾಗಲಿಲ್ಲ. ಅವರಿಗೆ ಹೇಗಿದೆ ಈಗ, ಮೃಣಾಲಿನಿ ? ಮೃಣಾಲಿನಿ : ( ಮರಕ್ಕೆ ಆತು ಕೊಡುತ್ತ ದಣಿದ ದನಿಯಲ್ಲಿ ) ಉಶ್! ನಾನಿನ್ನು ಮಾತಾಡಲಾರೆ. ಅವರಿಗೆ ಹೇಗಿದೆ ಎಂದು ಕೇಳುವದಕ್ಕಿಂತ ನನಗೆ ಹೇಗಿದೆ ಎಂದು ಕೇಳು, ಕೋಸಲೇಂದ್ರ ! ಇನ್ನು ಈ ಬಿಸಿಲಿನಲ್ಲಿ ನಡೆಯುವದು ಸಾಧ್ಯವಿಲ್ಲ. ಕೋಸಲೇಂದ್ರ : ಅದನ್ನೇ, ನಾನು ಕೇಳಿದ್ದು, ಈಗ ಎರಡು ತಿಂಗಳ ಹಿಂದೆಯೇ ಬಂದಿದ್ದರೆ ಇನ್ನೂ ಚಳಿಗಾಲವಿರುತ್ತಿತ್ತು. ಮೃಣಾಲಿನಿ : ಈ ಹಾಳು ನಿಲ್ಮನೆ ! ಹಳ್ಳಿ ಮುಟ್ಟಲು ಒಂದು ಟ್ಯಾಕ್ಸಿ "ಹೋಗಲಿ, ಟಾಂಗಾ ಸಹ ಸಿಗಬಾರದೆಂದರೆ ! ಕೋಸಲೇಂದ್ರ : ( ತುಸು ನಕ್ಕು ಅಂತಃಕರುಣದಿಂದ ) ದಿಲ್ಲಿಯಲ್ಲಿ ಮೋಟರಿ ನಲ್ಲಿ ಕುಳಿತು ಮಾರ್ಕ್ಸ ತತ್ವಗಳನ್ನು ಪ್ರಚಾರ ಮಾಡಿದಂತಲ್ಲ ಇದು, ಮೃಣಾಲಿನಿ ! ಬಿಸಿಲಿನಲ್ಲಿ ನಟ್ಟು ಕಡಿಯುತ್ತಿದ್ದ ಆ ರೈತನನ್ನು ನೋಡು ! ಮಾರ್ಕ್ಸವಾದ ಅವನ ನಾಲಿಗೆಯ ಮೇಲೆ ಇರದಿದ್ದರೂ ಅವನ ರಕ್ತದಲ್ಲೆಲ್ಲ ಹರಿದಾಡುತ್ತಿದೆ, ಮ ಹಾಲಿನಿ:-( ತುಸು ಸಿಟ್ಟಿನಿಂದ ) ಮತ್ತೆ ನೀನಾದರೂ ಏನು ? ಕೋಣೆ ಯಲ್ಲಿ ಕುಳಿತು ಕವಿತೆ ಬರೆಯುವ ಪ್ರಾಣಿ ನೀನು,