ಪುಟ:Yugaantara - Gokaak.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೃದಯದ ಸಂಪತ್ತು. ಇದನ್ನು ಸ್ವೀಕರಿಸುವ ಪೂರ್ವದಲ್ಲಿ ಅನುಭಾವದ ಸಿದ್ಧಾಂತಗಳಿಗೆ ಸಹಿ ಹಾಕಬೇಕಾಗುವದಿಲ್ಲ. ಇಂದು ಜಗತ್ತನ್ನೇ ಎದುರಿಸಿದ ಜಟಿಲ ಸಮಸ್ಯೆಗೆ ಈ ಸಮನ್ವಯವೇ ಸಮರ್ಪಕ ಉತ್ತರವಾಗಬಹುದು. ಇದರ ತಳಹದಿಯ ಮೇಲೆ ಇದಕ್ಕೂ ಉಜ್ವಲವಾದ ಸಮನ್ವಯದ ಕಾರ್ಯವು ಪ್ರಾರಂಭವಾಗಬಹುದು. ಅಂತೇ ಈ ಸಮಯವನ್ನು ಚಿತ್ರಿಸಿ ತೋರಿಸುವ ಯುಗಾಂತರವನ್ನು ಹೊಸಬಾಳಿನ ಸುಕುಮಾರ ಪ್ರಯೋಗ” ಎಂದು ಕರೆದಿದೆ. ಇಲ್ಲಿ ಚಿತ್ರಿತವಾದದ್ದು ಒಂದು ಬೌದ್ಧಿಕ ಸಮಸ್ಯೆಯಲ್ಲ. ಉಜೀವನದ ಒಂದು ಸರಿ, ಬೌದ್ದಿಕ ತತ್ವವು ಆ ಜೀವನದ ಒಂದು ಭಾಗ. ಆದರೆ ಈ ಬಾಳಿನ ಹೊಸತನವನ್ನು ಎತ್ತಿ ತೋರಿಸಲು ಆ ತತ್ವವೇ ಇಲ್ಲಿ ಹೆಚ್ಚು ಸಹಾಯಕಾರಿಯಾಗಿರುವದರಿಂದ ಅದನ್ನು ಇಲ್ಲಿ ವಿವರಿಸಲಾಗಿದೆ. ಕೋಸಲೇಂದ್ರನ ಸೌಂದರ್ಯ-ಕಲ್ಯಾಣಗಳ ಸಮನ್ವಯ, ಮೃಣಾಲಿ ನಿಯ ಎದೆ-ಮನಗಳನ್ನು ಈ ಸಮನ್ವಯವು ಕ್ರಮೇಣ ಪ್ರೀತಿಯ ಮೂಲಕ ಸೆರೆಹಿಡಿದ ವಿಧಾನ, ಕಿಶನ್ ಕಿಶೋರ ದಂಪತಿಗಳಲ್ಲಿ ಅನುಭಾವ- ಸಂಸಾರಗಳ ಎಳೆತ, ಕಾಂತಿಚಂದ್ರ ದಂಪತಿಗಳಲ್ಲಿ ಕಾರ್ಯಪ್ರಿಯತೆಯ ಪ್ರಬಲತೆ, - ಈ ಎಲ್ಲ ಉದ್ದೀಪನಗಳಿಂದ ಮೇಲೆ ಹೇಳಿದ ಜೀವನದ ಪರಿಯು ಇಲ್ಲಿ ರೂಪ ಗೊಂಡಿದೆ. ಭಾರತವು ಈ ಸಮಯಕ್ಕೆ ಫಲವತ್ತಾದ ಭೂಮಿಯಾಗಿದೆ. ಘಟನಾಸಮಿತಿಯ ಸಂಧಿಕಾಲವೇ ಯುಗಾಂತರದ ಸೂಚನೆಯನ್ನು ಕೊಡು ತದೆ. ಕನ್ನಡದ ನೆಲವನ್ನೇ ಒಂದಿಲ್ಲೊಂದು ರೀತಿಯಿಂದ ತೋರಿಸುವ ಇಂದಿನ ರಂಗಭೂಮಿಗೆ ದಿಲ್ಲಿ- ಮಾಹುಗಳ ಭೂಮಿಕೆಯನ್ನು ಇಲ್ಲಿ ಒದಗಿಸಿದೆ. ಬಳಕೆ ಮಾತಿನ ವಿವಿಧ ದೇಸಿಗಳಿಗೆ ಹೆಚ್ಚಾಗಿ ಒಳಗಾಗಿದ್ದ ಇಂದಿನ ದೃಶ್ಯ ಕಾವ್ಯಕ್ಕೆ ಇಲ್ಲಿ ಸಮಂಜಸವಾಗುವಂತೆ ಗ್ರಾಂಥಿಕ ಶೈಲಿಯನ್ನು ಒಳಪಡಿಸಿ ಕೊಳ್ಳಲಾಗಿದೆ. ದೃಶ್ಯ ಕಾವ್ಯದ ಮಿತವ್ಯಯಕ್ಕೂ ಜೀವಕಳೆಗೂ ಭಂಗ ಬರ ದಂತೆ ಇಲ್ಲಿಯ ಚಿತ್ರಣದ ಹವಣಿಕೆಯಿದೆ. ವೀಸನಗರ - ವಿ. ಕೃ. ಗೋಕಾಕ ೨೫-೧೨-೧೯೪೭