ಪುಟ:Yugaantara - Gokaak.pdf/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯುಗಾಂತರ ಕೋಸಲೇಂದ್ರ : ನಾನು ಕವಿತೆ ಬರೆಯುವದು ನಿಜ. ಆದರೆ ಇಂಥ ರೈತ - ರೊಡನೆ ನಾನು ಬೆಳೆದಿದ್ದೇನೆ, ಮೃಣಾಲಿನಿ, ಮೃಣಾಲಿನಿ : ( ಬೇಸತ್ತು ) ಇರಲಿ ಬಿಡು, ಮಹಾರಾಯಾ ! ಈಗ ನನಗೆ ನಿನ್ನ ಪುರಾಣ ಬೇಕಾಗಿಲ್ಲ, ಹಸಿವೆಯಾಗಿದೆ. ಕೋಸಲೇಂದ್ರ : ( ಬದಿಗಿರಿಸಿದ ಚೀಲವನ್ನು ಹಿಡಿದು ನೋಡುತ್ತ) ತಂದಿದ ಬಿಸ್ಕಿಟ್-ಬ್ರೆಡ್ ಎಲ್ಲ ತೀರಿ ಹೋಯಿತು. ನಿಲ್ಮನೆಯಲ್ಲಿ ಏನೂ ಸಿಕ್ಕಲಿಲ್ಲ. ಇನ್ನೊಂದು ತಾಸು ತಡೆ, ಮೃಣಾಲಿನಿ, ಊರಿಗೆ ಹೋಗಿ ಊಟ ಮಾಡೋಣ, ಮೃಣಾಲಿನಿ: ನಾನು ಇನ್ನೊಂದು ತಾಸು ತಡೆದರೆ ನಿನಗೆ ಹತ್ಯದ ಪಾಪ ಬರುವದು, ಕೋಸಲೇಂದ್ರ ! ಇನ್ನು ತಡೆಯುವದು ಸಾಧ್ಯವಿಲ್ಲ. ( ಕಣ್ಣು ಮುಚ್ಚಿ ಕೊ೦ಡು ಮರಕ್ಕೆ ಒರಗಿ ಕೂಡುತ್ತಾಳೆ. ) ಕೋಸಲೇಂದ್ರ : ಇದೇನು ? ಪಾಪ-ಪುಣ್ಯ ಎಂಬ ನನ್ನ ಭಾಷೆ ನಿನ್ನ ನಾಲಗೆಯ ಮೇಲೇಕೆ ? ತುಸು ವಿಚಾರ ಮಾಡು, ಮೃಣಾಲಿನಿ, ನಿನಗೆ ಈಗಾದ ಹಸಿವೆಯಂಥ ಹಸಿವೆಯನ್ನು ನಾನು ದಿವಸಗಟ್ಟಲೆ ಅನುಭವಿ ಸಿದ್ದೇನೆ. ಮೃಣಾಲಿನಿ : ( ಕವನ ) ನೀನು ಎದೆಗಾರ, ಧೈರ್ಯಶಾಲಿ; ಮಹಾಪುರುಷ ಯಾವ ಬೇಕಾದ ಹೆಸರಿನಿಂದ ನಿನ್ನನ್ನು ಕರೆಯುತ್ತೇನೆ. ಮೊದಲು ನನ್ನ ಹಸಿವೆಯನ್ನು ಕಳೆ. ಹಸಿದ ಹೊಟ್ಟೆಯಿಂದ ಕಾರ್ಯಪ್ರವೃತ್ತರಾಗಬೇಕೆಂದು ಮಾರ್ಕ್ಸ ಎಲ್ಲಿಯೂ ಹೇಳಿಲ್ಲವಲ್ಲ ? ಕೋಸಲೇಂದ್ರ: ( ತುಸು ನಕ್ಕು ) ಆಗಲಿ. ಈಗ ನಿನ್ನನ್ನು ಕೆಣಕುವದು ಸಾಧ್ಯವಿಲ್ಲ. ಏ ! ಯಜಮಾನ, ಇಲ್ಲಿ ಸ್ವಲ್ಪ ಬಂದು ಹೋಗು. ಕೆಲಸವಿದೆ. ( ಬದಿಯ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮುದುಕ ರೈತನು ಕೆಲಸ ಬಿಟ್ಟು ಬರುತ್ತಾನೆ. ) ರೈತ : ಯಾಕೆ, ಬಾಬು ? ಕೋಸಲೇಂದ್ರ: ತೊಂದರೆ ಕೊಟ್ಟಿದ್ದಕ್ಕೆ ಮಾಫ್ ಮಾಡು. ಇವರಿಗೆ ಹಸಿವೆ ಯಾಗಿದೆ. ತಿನ್ನಲು ಏನಾದರೂ ಸಿಗಬಹುದೊ ? ಟ ಬ