ಪುಟ:Yugaantara - Gokaak.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅoಳು ೨ 24 M ರೈತ : ಇಲ್ಲೇನಿದೆ, ಬಾಬು? ಬರಿ ಮಣ್ಣು ನೆಲ, ನನಗಾಗಿ ರೊಟ್ಟಿಯ ಗಂಟು ತಂದಿದ್ದೆನೆ. ಅದು ನಿಮಗೆ ಸರಿಹೋದರೆ ಅದರಲ್ಲಿ ಅರ್ಧ ಕೊಡಬಲ್ಲೆ. ಆದರೆ ಶಹರದವರು ನೀವು ! ನಿಮಗೆ ಹೇಗೆ ಸರಿಹೋದೀತು ? ಮೃಣಾಲಿನಿ : ಎಲ್ಲ ಸರಿಹೋಗುತ್ತದೆ. ತಗೊಂಡು ಬಾ, ಮುದುಕಪ್ಪ ! ಹಸಿವೆಯಾದಾಗ ಹುಲ್ಲನ್ನು ಸಹ ಮೇಯಬಹುದು, ರೈತ : ಇಷ್ಟು ಹಸಿವೆಯಾಗಿದೆಯೇನು, ತಾಯಿ ! ಹಾಗಾದರೆ ಮೊದಲು * ತರುತ್ತೇನೆ"( ಲಗುಬಗೆಯಿಂದ ಹೋಗುತ್ತಾನೆ. ) ಮೃಣಾಲಿನಿ : ಕೋಸಲೇಂದ್ರ, ಇನ್ನು ನಾನು ಕವಿಗಳ ಬೆನ್ನು ಹತ್ತುವದಿಲ್ಲ. - ಅವರಿಗೆ ಒಂದಿಷ್ಟು ಸಹ ಸಂಗಾತಿಯ ಹೊಟ್ಟೆಯ ಪರಿವೆಯಿರುವದಿಲ್ಲ. ಕೋಸಲೇಂದ್ರ : ಹಾಗಾದರೆ ನಿನ್ನಂಥ ಮಾರ್ಕ್ಸವಾದಿಗಳ ಸಂಗತಿ ಹಿಡಿಯ ಬೇಕೊ ? ಅವರಿಗೆ ಒಂದಿಷ್ಟು ಸಹ ಹಸಿವೆಯನ್ನು ತಡೆಯುವದಾಗುವದಿಲ್ಲ. [ ಮುದುಕನು ಊಟದ ಗಂಟನ್ನು ತಂದು ಬಿಚ್ಚಿ ಮೃಣಾಲಿನಿಯ ಎದುರು ಇಡುತ್ತಾನೆ. ] ರೈತ : ತೊಗೊಳ್ಳಿರಿ, ತಾಯಿ, ಇದರಲ್ಲಿ ಬೇಕಾದುದನ್ನು ಊಟ ಮಾಡಿರಿ. ಮೃಣಾಲಿನಿ : ( ಒಂದು ರೊಟ್ಟಿ ಒಂದಿಷ್ಟು ಕಲೆಯನ್ನು ತಗೆದುಕೊಳ್ಳುತ) ನನಗಿಷ್ಟು ಸಾಕು, ಮುದುಕಪ್ಪ ! ಉಳಿದದ್ದನ್ನು ನೀನು ತಿನ್ನು, ಹೊಲದಲ್ಲಿ ಒಂದೇ ಸಮನೆ ದುಡಿಯುತ್ತಿದ್ದೀ ರೈತ : ನನಗೇನು ? ಈ ದುಡಿತ ಮೈ ಯುಂಡಿದೆ, ತಾಯಿ, ನೀವಿನ್ನು ಹಿಡಿ * ಯಿರಿ, ಬಾಬು ! ( ಕೋಸಲೇಂದ್ರನ ಕಡೆಗೆ ಗಂಟನ್ನು ನೀಡುತ್ತಾನೆ. ) ಕೋಸಲೇಂದ್ರ : ( ಒಂದು ತುಣುಕು ರೊಟ್ಟಿ ಒಂದಿಷ್ಟು ಜಲ್ಲೆಯನ್ನು ತೆಗೆದು ಕೊಳ್ಳುತ್ತ) ನೀನೂ ತಿನ್ನು, ಮುದುಕಪ್ಪ ! ದುಡಿದು ದಣಿದಿದ್ದಿ, ರೈತ: ಛೇ ! ಛೇ ! ನಿಮ್ಮದು ಮುಗಿಯದೆ ನಾನು ಹೇಗೆ ತಿಂದೇನು. ( ನಗುತ್ತಾನೆ. ) ಮೃಣಾಲಿನಿ ಅದೇಕೆ? ನಿನ್ನ ರೊಟ್ಟಿಯಲ್ಲಿ ಸಾಲು ತೆಗೆದುಕೊಂಡರೂ ನೀನೇ *ಆಮೇಲೆ ತಿನ್ನಬೇಕೊ ? ಒಳ್ಳೇ ಲೆಕ್ಕಾಚಾರ ! ಸರಕಾರ ನಿನ್ನ ಬೆಳೆಯ ತಲೆಯ ಮೇಲೆ ತೆರಿಗೆ ವಸೂಲು ಮಾಡುತ್ತದೆ. ನಾವೂ ಸರಕಾರವಾದೆವಲ್ಲ! ರೈತ : ಸರಕಾರದ ಅನ್ಯಾಯ ಸರಕಾರದ ಸುತ್ತ, ಆದರೆ ಇದು ನಾನು ಸ್ವಸಂತೋಷದಿಂದ ನಿಮಗೆ ಕೊಟ್ಟ ಪಾಲು.