ಪುಟ:Yugaantara - Gokaak.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಂಕು ತಿ ಪ್ರವೇಶ ೧ [ ಬನಸಿಲಾಲನ ಮನೆ, ಬನಸಿಲಾಲನ ದಾರಿ ಕಾಯುತ್ತ ತಾಯಿಗೆ ರೂಮಿನಲ್ಲಿ ಕಾರಿತಿಚಂದ್ರ ರೋಹಿಣಿದೇವಿಯವರು ಕುಳಿತಿರುತ್ತಾ- } ಕಾ೦ತಿಚಂದ್ರ : ( ನಿಟ್ಟುಸಿರುಗರೆಯುತ್ತ ) ಸುಮ್ಮನೆ ಇಲ್ಲಿ ಬರುವದರಿಂದ ಪ್ರಯೋಜನವಿಲ್ಲವೆಂದು ಹೇಳಿದೆ. ಆ ನೀಚ ಬನಸಿಲಾಲ ಸಾಧ್ಯವಿದ್ದಷ್ಟು ಮಟ್ಟಿಗೆ ನಮ್ಮನ್ನು ಅಪಮಾನಗೊಳಿಸಲು ಯತ್ನಿ ಸುತ್ತಿದ್ದಾನೆ. ಅರ್ಧಗಂಟಿ ಯಾಯಿತು ಇಲ್ಲಿ ಅವನ ಮನೆಯಲ್ಲಿ ಬಂದು ಕೂತು, ಮೂರು ಸಲ ಹೇಳಿ ಕಳಿಸಿದರೂ ಹಣಿಕಿ ಹಾಕಿಲ್ಲ. ರೋಹಿಣಿದೇವಿ : ಇದು ಕೊನೆಯ ಪ್ರಯತ್ನ, ಇದು ಯಶಸ್ವಿಯಾಗದಿದ್ದರೆ ನೆಟ್ಟಗೆ ನೈನಿತಾಲದ ದಾರಿ ಹಿಡಿಯೋಣ, ಅಲ್ಲಿ ಬೇಸಿಗೆಯನ್ನು ಕಳೆದು ಮುಂದೆ ದಿಲ್ಲಿಯಲ್ಲಿರಬೇಕೋ ಮರಳಿ ಮಥುರೆಗೆ ಹೋಗಬೇಕೋ ವಿಚಾರ ಮಾಡೋಣ. ಯಾವುದಕ್ಕೂ ಮುಖ್ಯ ನಿನ್ನ ಪ್ರಕೃತಿ, ಅದನ್ನು ಸರಿ ಇಟ್ಟು ಕೊಂಡ ಮೇಲೆ ಉಳಿದ ಮಾತು, ಕಿಚಂದ್ರ : ಬನಸಿಲಾಲನ ಉತ್ತರವನ್ನು ನಾನು ಮೊದಲೇ ನಿನಗೆ ಕೊಟ್ಟಿದ್ದೇನೆ. ಹೀಗೆ ಇಲ್ಲಿ ದಾರಿಕಾಯಲು ಹಚ್ಚಿರುವದರಿಂದ ಅದು ಇಷ್ಟು ದೃಢವಾಗುತ್ತದೆ. ಇನ್ನು ಈ ಮಾಯಾಮೃಗದ ಬೆನ್ನು ಹತ್ತಿ ಉಪ ಯೋಗವಿಲ್ಲ, ರೋಹಿಣಿ, ಕೋಸಲೇಂದ್ರ ಹೇಳಿದ ಮಾತು ನೆನಪಿದೆಯೆ ? ಮನುಷ್ಯ ಸುಖಿಯಾಗಲು, ಅವನಲ್ಲಿ ಆಳ ಬೇಕು. ಅಂತರಂಗದಲ್ಲಿ ಆಳವಿದ್ದ ಹಾಗೆ ಬಹಿರಂಗದ ಜೀವಿತವು ಅರ್ಥಪೂರ್ಣವಾಗುತ್ತದೆ. ಪ್ರತಿಯೊಂದು ಸನ್ನಿವೇಶದ ಸತ್ಯವನ್ನು ಹೀರಿ ಬೆಳೆಯುವ ಶಕ್ತಿ ಬೇಕು ವ್ಯಕ್ತಿಗೆ, ಇನ್ನು ನೈನಿತಾಲಕ್ಕೆ ಹೋಗಿ ಈ ಹಾದಿಯನ್ನೇ ಶೋಧಿಸೋಣ.