ಪುಟ:Yugaantara - Gokaak.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೬ ಯುಗಾಂತರ ರೋಹಿಣಿದೇವಿ : ನೋಡೋಣ. ಪ್ರತಿಕ್ಷಣವೂ ಇಲ್ಲಿಯ ಆಸೆ ಕೈಗೂಡುವಂತೆ ಕಾಣುತ್ತದೆ; ಕಂಡು ಜೋಲಿ ಹೊಡೆಯುತ್ತದೆ. ಓಹೊ ! ನಮಸ್ತೇ ! ಬನಸಿಲಾಲಜಿ ! ಇಲ್ಲಿ ಬಹಳ ಹೊತ್ತು ನಾವು ದಾರಿನೋಡಿದೆವು ! [ ನೆಹರು ಶರ್ಟನ್ನು ಹಾಕಿಕೊಂಡು ಅಚ್ಚ ಬಿಳಿ ಗಾಂಧಿ ಟೊಪ್ಪಿಗೆಯನ್ನು ಧರಿಸಿ ಬನಸಿಲಾಲನು ಪ್ರವೇಶಿಸುತ್ತಾನೆ. ] ಬನಸಿಲಾಲ : ( ಅತ್ಯಂತ ವಿನಯದಿಂದ ) ನಮಸ್ತೇ, ನಮಸ್ತೆ ರೋಹಿಣಿ ದೇವಿ, ನಮಸ್ತೇ, ಕಾಂತಿಚಂದ್ರಜಿ ! ಕೆಲಸದಲ್ಲಿದ್ದೆ. ಕ್ಷಮಿಸಬೇಕು. ( ಕುಳಿತುಕೊಂಡು ) ಎಲ್ಲ ಕ್ಷೇಮವಷ್ಟೆ ? ರೋಹಿಣಿದೇವಿ : ಕ್ಷೇಮವಿಲ್ಲದಿರಲು ಇದೆಯೆಂದು ಹೇಗೆ ಹೇಳುವದು ? ಅದ ಕ್ಕಾಗಿಯೇ ತಮ್ಮ ಕಡೆಗೆ ಬಂದಿದ್ದೇವೆ. ಬನಸಿಲಾಲ : ( ಗಾಬರಿಯನ್ನು ನಟಿಸಿ,) ಅದೇನು ಸಮಾಚಾರ ? ನನ್ನಿಂದ ಏನಾದರೂ ಸಹಾಯವಾಗಬಹುದೇ ? ರೋಹಿಣಿದೇವಿ; ಈಗೆರಡು ತಿಂಗಳಿಂದ ಕಾಂತಿಚಂದ್ರರು ಹಾಸಿಗೆ ಹಿಡಿ ದಿದ್ದಾರೆ, ಬನಸಿಲಾಲಜಿ ! ನೋಡಿರಿ ! ಅವರ ಪ್ರಕೃತಿ ಮೊದಲು ಹೇಗಿತ್ತು; ಈಗ ಹೇಗಿದೆ. ಬನಸಿಲಾಲ : ಹೌದು. ಬಹಳ ಸೊರಗಿದ್ದಾರೆ. ಔಷಧೋಪಚಾರ ನಡೆ ದಿದೆಯೆ, ಕಾಂತಿಚಂದ್ರಜಿ ? ಕಾಂತಿಚಂದ್ರ : ನಡೆದಿದೆ. ಸ್ವಲ್ಪ ಗುಣವಿದೆ ಈಗ, ರೋಹಿಣಿದೇವಿ : ಇವರ ಪರವಾಗಿ ಒಂದು ಬಿನ್ನಹ ಮಾಡಲು ಬಂದಿದ್ದೇನೆ ನಾನು ಬನಸಿಲಾಲಜಿ! ನಾನು, ಸ್ತ್ರೀ, ಇಂಥ ಕೆಲಸ ಹಚ್ಚಿಕೊಳ್ಳಬಾರದು. ಆದರೆ ಕಾಂತಿಚಂದ್ರರು ಈ ವಿಷಯದಲ್ಲಿ ತಮ್ಮ ಮೌನವ್ರತವನ್ನು ಮುರಿ ಯುವದಿಲ್ಲ. ಆದಕಾರಣ ನಾನೇ ಅವರ ಪರವಾಗಿ ಮಾತನಾಡ ಬೇಕೆಂದಿದ್ದೇನೆ. ಬನಸಿಲಾಲ : ( ವಿನಯದಿಂದ ) ಅದೇನು, ರೋಹಿಣಿದೇವಿಯವರೆ ? ಅಂಥ ದೇನನ್ನು ಅವರ ಸಲುವಾಗಿ ನಾನು ಮಾಡಬಲ್ಲ ?